ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೬೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಬಲಿ ಅಬಲಾ ಸಚ್ಚರಿತ್ರ ರತ್ನ ಮಾಲೆ. ವಾಕ್ಯವು ಇರುವುದು, ಆದುದರಿಂದ ರಾಣಿಯವರಿಗೂ ಸಹ 'ಧರ್ಮವರ್ಧಿನಿ? ಎಂಬ ಬಿರುದು ಸಿಂಹಾಸನಾರೋಹಣ ಸಮಯದಲ್ಲಿ ದೊರೆಯಿತು, ಮಹಾ ರಾಣಿಯವರ ಸಂಪೂರ್ಣ ನಾಮವನ್ನು ಮಳೆಯಾಳದಲ್ಲಿ “ ಶ್ರೀ ಪದ್ಮನಾಭ ಸೇವಿ ನೀವ೦ಚಿ ಧರ್ಮವರ್ಧಿನೀ ರಾಜರಾಜೇಶ್ವರೀ ರಾಣೀಗೌರೀ ಲಕ್ಷ್ಮಿಬಾಯಿ,” ಎಂದು ಬರೆಯುತ್ತಾರೆ. ರಾಜ್ಯಾಭಿಷೇಕ ಮುಹೂರ್ತವಾದಬಳಿಕ ರಾಣಿ ಲಕ್ಷ್ಮಿಬಾಯಿಯು ಸಿಂಹಾ ಸನವನ್ನಿಳಿದು, ಪ್ರಫುಲ್ಲಮುಖದೊಡನೆ ಮೆಕಾಲೆ ದೊರೆಯನ್ನೂ, ಸಕಲ ಸಭ್ಯರನ್ನೂ ಸಂಬೋಧಿಸಿ :- “ ಅನಾದಿಕಾಲದಿಂದಲೂ ನಮ್ಮ ಪೂರ್ವೀಕರಿಂದ ಪಾಲಿಸಲ್ಪಟ್ಟು ಅನಂತರ ಇಂದಿನವರೆಗೂ ಈಸ್ಟಿಂಡಿಯಾ ಕಂಪೆನಿಯವರಿಂದ ರಕ್ಷಿಸಲ್ಪಟ್ಟ ಈ ತಿರುವಾಂ ಕೂರು ಸಿಂಹಾಸನವು ನನಗೆ ಲಭಿಸುವುದೆಂದು ನಾನು ಸ್ವಪ್ನದಲ್ಲಿಯೂ ಎಣಿಸಿ ಇರಲಿಲ್ಲ. ಪರಲೋಕಗತರಾದ ನಮ್ಮ ಮಾವನವರೆನಿಸಿದ್ದ ಬಲರಾಮಶರ್ಮ ಮಹಾರಾಜರು ಕೇವಲ ಇಪ್ಪತ್ತೊಂಬತ್ತು ವರುಷ ವಯಸ್ಸುಳ್ಳವರು. ಆತನ ಮಾವನು ಪಾಲಿಸಿದಂತೆ ಈತನೂ ಸಹ ದೀರ್ಘಕಾಲ ರಾಜ್ಯಭಾರವನ್ನು ವಹಿಸು ವುದಕ್ಕೆ ಪದ್ಮನಾಭಸ್ವಾಮಿಯ ಆಜ್ಞೆಯು ಇಲ್ಲದೆ ಹೋಯಿತು. ಆ ಪದ್ಮನಾಭ 'ಸ್ವಾಮಿಯ ಆಜ್ಞೆಗೆ ಅನುಸಾರವಾಗಿಯೇ ನನಗೆ ರಾಜ್ಯ ಪ್ರಾಪ್ತಿಯುಂಟಾದುದ ರಿಂದ ಆತನ ಆಜ್ಞೆಯು ನನಗೆ ಶಿರಸಾಮಾನ್ಯವು, ನಾನು ಕಿರಿಯಳಾದುದ ರಿಂದ ನನಗೆ ಇಂತಹ ದೊಡ್ಡ ರಾಜ್ಯ ಕಾರ್ಯಗಳಲ್ಲಿ ಅನುಭವವು ಇಲ್ಲ. ನಮ್ಮೊಡನೆ ಸ್ನೇಹಧವನ್ನು ಬೆಳೆಸಿದಂದಿನಿಂದಲೂ ಈ ತಿರುವಾಂಕೂರು ರಾಜ್ಯವನ್ನು ಹೆತ್ತ ಮಗುವಿನೋಪಾದಿಯಲ್ಲಿ ಕಾಪಾಡುತಲಿರುವ ಆನರಬಿಲ ಈಸ್ಟಿಂಡಿಯಾ ಕಂಪೆನಿ ಯವರು ವಿನಾ ನನಗೆ ಇಂತಹ ಸ್ಥಿತಿಯಲ್ಲಿ ಇನ್ನಾರೂ ಸಹಾಯಕರಿಲ್ಲ. ಆದುದರಿಂದ ಕರ್ನಲ್ಯವರೇ! ಈ ದಿನದಿಂದ ನಾನು ನಿಮ್ಮನ್ನು ಸಾಕ್ಷಾತ್ ಸಹೋದರನಂತೆ ಭಾವಿಸಿ, ರಾಜ್ಯದ ಪ್ರತಿಯೊಂದು ಕಾರ್ಯವೂ ನಿಮ್ಮಿಂದಲೇ ನೆರವೇರಿಸಲ್ಪಡುವದೆಂಬ ಭರವಸೆಯುಳ್ಳವಳಾಗಿರುವೆನು, ನಿಮಗೆ ಇದಕ್ಕಿಂತಲೂ ಹೆಚ್ಚಾಗಿ ಹೇಳಬೇಕಾದುದು ಏನೂ ಇಲ್ಲ,” ಎಂದು ಮಲಬಾರೀ ಭಾಷೆಯಲ್ಲಿ ಅಸ್ಕೃಲಿತವಾಗಿ ಸಂಭಾಷಿಸಿದಳು, ಈಕೆಯ ಗಂಭೀರ ಸಂಭಾಷಣೆಯನ್ನೂ ಕೇಳಿ ಸಭಿಕರೆಲ್ಲರು ಆಶ್ಚರ್ಯಾನ್ವಿತರಾದರಂತೆ! ಲಕ್ಷ್ಮಿಬಾಯಿಯು ಕಿರಿಯಳಾದುದರಿಂದ, ಪ್ರಾಪ್ತವಾದ ಈ ಅಧಿಕಾರ ವನ್ನು ಹೇಗೆ ನಿರ್ವಹಿಸುವಳೋ ಎಂದು ಪ್ರಜೆಗಳು ಚಿಂತಿಸುತಲಿದ್ದರು. ಆದರೆ ಆಕೆಯ ಸಂಭಾಷಣೆಯನ್ನು ಕೇಳಿದ ಅನಂತರ, ಅಸಮಾನ ಪ್ರಜ್ಞೆಯುಳ್ಳ ಈಕೆ ಯಿಂದ ನಮಗೆ ಸಂಪೂರ್ಣ ಸುಖವು ದೊರೆವುದೆಂದು ನಿಶ್ಚಯಿಸಿಕೊಂಡರು.