ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೭೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ ಅಬಲಾ ಸಚ್ಚರಿತ್ರ ರತ್ನ ಮಾಲೆ. ಎತ್ತಿಕೊಂಡು ಸಭಾಮಂಟಪಕ್ಕೆ ಪ್ರವೇಶಿಸಿದಳು. ಸಭಾಜನರೆಲ್ಲರೂ ತಮ್ಮ ತಮ್ಮ ನಿಯಮಿತ ಸ್ಥಳಗಳನ್ನಲಂಕರಿಸಿದ ಮೇಲೆ ರಾಣಿಯು ಪುತ್ರನನ್ನು ಎತ್ತಿಕೊಂಡು ಸಿಂಹಾಸವನ್ನಿಳಿದು ಪ್ರಸನ್ನವದನೆಯಾಗಿ ಗಂಭೀರಧ್ವನಿಯಿಂದ : “ ಆನರಬಿಲ್ ಈಸ್ಟ್ ಇಂಡಿಯಾ ಕಂಪೆನಿಯವರು ಸರ್ವದಾ ನ್ಯಾಯಮಾರ್ಗದಲ್ಲಿ ಪ್ರವರ್ತಿಸುವವರಾದಕಾರಣ ಅವರ ಇಚ್ಛಾನುಸಾರವಾಗಿಯೇ ಸರ್ವಕಾರ್ಯ ಗಳನ್ನೂ ಪದ್ಮನಾಭಸ್ವಾಮಿಯು ನೆರವೇರಿಸುವನು. ನನ್ನ ಕುಲದೇವರಾದ ಶ್ರೀ ಪದ್ಮನಾಭಸ್ವಾಮಿಯ ಕೃಪೆಯಿಂದ ನನಗೆ ಉಂಟಾದ ಈ ಪುತ್ರನನ್ನು ಕಂಪೆನಿಯ ವರ ಹಸ್ತದಲ್ಲಿ ಇಡುತಲಿದೇನೆ. ಈ ಶಿಶುವನ್ನು ದೊಡ್ಡವನನ್ನಾಗಿ ಮಾಡಿ, ವಿದ್ಯಾಬುದ್ಧಿಗಳನ್ನು ಕಲಿಸಿ, ರಾಜ್ಯಪಾಲನ ಸಮರ್ಥನನ್ನಾಗಿ ಮಾಡುವುದು ಕಂಪೆನಿಯವರ ಭಾರವಾಗಿದೆ. ಇದಕ್ಕಿಂತಲೂ ಹೆಚ್ಚಾಗಿ ಹೇಳತಕ್ಕದ್ದೇನಿದೆ ?” ಎಂದು ಬಾಲಕನನ್ನು ಮೆಕಾಲೆಯ ಕೈಯಲ್ಲಿ ಕೊಟ್ಟಳು. ಆತನು ಮಗುವನ್ನು ಸಿಂಹಾಸನದ ಮೇಲಿರಿಸಿ : “ ಈ ರಾಮವರ್ಮನು ಇಂದಿನಿಂದ ರಾಜ್ಯಕ್ಕೆ ಒಡೆಯ ನಾದನು, ಈತನು ಯುಕ್ತವಯಸ್ಯನಾಗುವವರೆಗೂ ಲಕ್ಷ್ಮೀ ಬಾಯಿಯು ಈತನ ಪಾಲನಕರ್ತ್ರಿಯಾಗಿ ರಾಜ್ಯವನ್ನು ಪಾಲಿಸುವಳು, ” ಎಂದು ಸಕಲರಿಗೂ ತಿಳಿಯಪಡಿಸಿದನು. ಈ ಸಮಯದಲ್ಲಿಯೇ ಮೆಕಾಲೆಯು ದಿರ್ವಾಗಿರಿಯನು ಬಿಟ್ಟನು. ದೇರ್ವ ಪದ್ಮನಾರ್ಭ ಎಂಬಾತನು ದಿರ್ವಾಗಿರಿಯನ್ನು ವಹಿಸದನು. ಆದರೆ ಈ ಹೊಸ ದಿವಾನನು ಆ ಅಧಿಕಾರವನ್ನು ಕೆಲವು ದಿವಸಗಳುಮಾತ್ರ ಅನುಭವಿಸಿ ಸ್ಫೋಟಕ ವ್ಯಾಧಿಯಿಂದ ಮೃತನಾದನು. ಅನಂತರ ಸುಮಾರು ಒಂದುವರ್ಷಕ್ಕೆ ರಾಣಿಗೆ ಇನ್ನೊಬ್ಬ ಪುತ್ರನು ಹುಟ್ಟ ದನು. ಆದರೆ ಆ ಆನಂದವು ವಿಶೇಷ ದಿನಗಳಿರಲಿಲ್ಲ. ರಾಣಿಗೆ ಸೂತಿಕಾ ಜಾಡ್ಯವು ಉಂಟಾಗಿ ಎರಡು ತಿಂಗಳಿಗೆಲ್ಲ ವ್ಯಾಧಿಯು ಅಸಾಧ್ಯವೆಂದು ತೋರಿತು. ಭಿಷಗೈರ್ಯರನೇಕರು ಔಷದೋಪಚಾರಗಳನ್ನು ಮಾಡಿದರೂ ಗುಣವು ಉಂಟಾ ಗದೆ ವ್ಯಾಧಿಯು ಹೆಚ್ಚು ತಲಿತ್ತು, ಜೀವಿಸುವಳೆಂಬ ಆಶೆಯು ನಿರ್ಮೂಲವಾದ ನಂತರ, ಒಂದು ದಿವಸ ಲಕ್ಷ್ಮೀಬಾಯಿಯು ತನ್ನ ಪ್ರಿಯ ಪತಿಯನ್ನು ಕರೆದು, ತನ್ನ ತಂಗಿಯಾದ ಪಾರ್ವತೀಬಾಯಿಯನ್ನೂ, ಮಕ್ಕಳನ್ನೂ, ಆತನಿಗೆ ಒಪ್ಪಿಸಿ, “ಇದುವರೆಗೂ ನನ್ನಿಂದ ರಕ್ಷಿಸಲ್ಪಟ್ಟ ಮಕ್ಕಳನ್ನು ನಿಮ್ಮ ಹಸ್ತದಲ್ಲಿಡುತಲಿದೇನೆ. ಇನ್ನು ನೀವು ಇವರೆಲ್ಲರನ್ನೂ ರಕ್ಷಿಸಬೇಕು. ಈ ರಾಮವರ್ಮರಾಜನು ಯುಕ್ತ ವಯಸ್ತನಾಗುವವರೆಗೂ ಪಾರ್ವತೀಬಾಯಿಯು ಪಾಲನಕರ್ತ್ರಿಯಾಗಿ ರಾಜ್ಯ ವನ್ನು ಪಾಲಿಸುವಂತೆಮಾಡಿ, ನನಗೆ ಸಹಾಯಮಾಡಿದಂತೆ, ಈಕೆಗೆ ಸಕಲ ರಾಜಕಾರ್ಯಗಳಲ್ಲಿಯೂ ಸಹಾಯ ಮಾಡುವೆನೆಂದು ನೀವು ನನಗೆ ವಚನವನ್ನು