ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೭೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿಕ೦ದ ಬೇಗಮ. ೫೩ ಗಳನ್ನು ಅರಿಯದವನಾಗಿದ್ದುದರಿಂದ, ಈತನನ್ನು ಹೆಸರಿಗೆ ಮಾತ್ರ ನವಾಬನೆಂದು ಸಿಂಹಾಸನದ ಮೇಲೆ ಕುಳ್ಳಿರಿಸಿ, ಈತನ ಚಿಕ್ಕಪ್ಪನ ಮಗನಾದ ವಜೀರ ಮಹಮ್ಮ ದನೇ ರಾಜ್ಯಾಡಳಿತವನ್ನೆಲ್ಲ ನೋಡಿಕೊಳ್ಳು ತಲಿದ್ದನು. ಆಗ ಭೂಪಾಲ್ ದೇಶಕ್ಕೆ ಉಂಟಾದ ಅನೇಕ ಸಂಕಟಗಳು ಈ ವಜೀರ ಮಹಮ್ಮದನಿಂದಲೇ ಪರಿಹಾರ ವಾದವು. ಈತನು ೧೮೧೬ ನೆಯ ಇಸವಿಯಲ್ಲಿ ಮೃತನಾಗಲು, ಈತನ ಮಗ ನಾದ ನಜರ ಮಹಮ್ಮದನು ಪಟ್ಟಾಭಿಷಿಕ್ತನಾದನು. ಈತನು ತಂದೆಯಂತೆಯೇ ಗುಣಸಂಪನ್ನನಾಗಿ, ಪ್ರಜೆಗಳನ್ನು ಸುಖಿಗಳನ್ನಾಗಿ ಮಾಡಿದನು, ಈತನ ಪುತ್ರಿ ಯಾದ ಶಿಕಂದರ್‌ ಬೇಗಮಳೇ ಹಿಂದೂದೇಶ ಚರಿತ್ರೆಯಲ್ಲಿ ಭೂಪಾಲ್ ಬೇಗಮ್ ಎಂದು ಪ್ರಸಿದ್ದಿಯನ್ನು ಪಡೆದಿರುವವಳು. ಒಂದುದಿನ ನಜರ ಮಹಮ್ಮದನು ತನ್ನ ಮಗಳೊಡನೆ ಮುದ್ದಾಡುತ್ತಿದ್ದನು. ಆ ಸಮಯದಲ್ಲಿ, ಆತನ ಭಾವಮೈದು ನನಾದ ಫೌಜುದಾರರ್ಖಾ ಎಂಬ ಎಂಟು ವರುಷದ ಬಾಲಕನು ಅಲ್ಲಿಯೇ ಒಂದು ಚಿಕ್ಕ ಪಿಸ್ತೂಲನ್ನು ಇಟ್ಟುಕೊಂಡು ಆಡುತ್ತಿರಲಾಗಿ, ಅದರೊಳಗಿರುವ ಗುಂಡು ಅಕಸ್ಮಾತ್ತಾಗಿ ಹಾರಿ ನವಾಬನಿಗೆ ತಗಲಿತು. ಕೂಡಲೆ ನವಾಬನು ಮೃತ ನಾದನು. ನಜರಮಹಮ್ಮದನಿಗೆ ಶಿಕಂದರ್‌ ಬೇಗನಳು ಒಬ್ಬಳೇ ಮಗಳು. ಪುತ್ರ ಸಂತಾನವೂ ಇರಲಿಲ್ಲ. ಈಕೆಯು ಇನ್ನೂ ಬಾಲ್ಯಾವಸ್ಥೆಯಲ್ಲಿದ್ದುದರಿಂದ, ಅಲ್ಲಿನ ಅಧಿಕಾರಿಗಳೆಲ್ಲರೂ ಕಂಪೆನಿಯವರ ಸಮ್ಮತಿಯನ್ನು ಪಡೆದು, ನಜರ ಮಹಮ್ಮದನ ಅಣ್ಣನ ಮಗನಾದ ಮುನೀರ ಮಹಮ್ಮದಖಾನನಿಗೆ ಈಕೆಯನ್ನು ಕೊಟ್ಟು ವಿವಾಹ ವನ್ನು ಮಾಡಿ, ಆತನಿಗೆ ರಾಜ್ಯವನ್ನು ಕೊಡಬೇಕೆಂತಲೂ, ವಿವಾಹವು ನಡೆ ಯುವವರೆಗೂ ನಜರ ಮಹಮ್ಮದನ ಪತ್ನಿಯಾದ ಕುದುಷಿಯಾಬೇಗಮ್ ರಾಜ್ಯ ವನ್ನು ಆಳಬೇಕೆಂತಲೂ ನಿರ್ಣಯಿಸಿದರು. ಅದರಂತೆಯೇ ಶಿಕಂದರ್ ಬೇಗಮಿನ ತಾಯಿಯು ರಾಜ್ಯಾಧಿಕಾರಿಣಿಯಾಗಿ, ರಾಜ್ಯವನ್ನು ಚೆನ್ನಾಗಿ ಪಾಲಿಸುತಲಿದ್ದಳು. ಈಕೆಯು ರಾಜ್ಯ ಸುಖವನ್ನು ಬಹುದಿವಸಗಳು ಅನುಭವಿಸಬೇಕೆಂಬ ಇಚ್ಛೆ ಯುಳ್ಳವಳಾಗಿ ಮಗಳಿಗೆ ವಿವಾಹವನ್ನು ಮಾಡಲಿಲ್ಲ. ಶೀಘ್ರದಲ್ಲಿ ವಿವಾಹವು ನಡೆದರೆ ರಾಜ್ಯವನ್ನು ಪಡೆಯಬಹುದೆಂಬ ಅಭಿಲಾಷೆಯಿಂದ, ಮುನೀರ ಮಹ ಮ್ಮದನು ತನ್ನ ವಿವಾಹವನ್ನು ಜಾಗ್ರತೆಯಾಗಿ ನೆರವೇರಿಸಬೇಕೆಂದು, ಕುದುಷಿ ಯಾಬೇಗನನ್ನು ಕೇಳುತಲಿದ್ದನು. ಇದರಿಂದ ಇಬ್ಬರಿಗೂ ವೈರವು ಉಂಟಾಯಿತು. ರಾಜ್ಯದಲ್ಲಿರುವ ಸಾಮಂತರೂ, ಅಧಿಕಾರಿಗಳೂ ಬೇಗಮಿನ ಕಡೆಯವರಾದುದ ರಿಂದ, ಪೂರ್ವದ ನಿಬಂಧನೆಯನ್ನು ತೆಗೆದುಹಾಕಿ, ಮುನೀರಖಾನನಿಗೆ ೪,೦೦೦ ರೂಪಾಯಿಗಳನ್ನು ಕೊಟ್ಟು ಅವರ ಜಗಳವನ್ನು ಸಮಾಧಾನ ಪಡಿಸಿದರು. ಅನಂತರ ಶಿಕಂದರ್ ಬೇಗಮಳನ್ನು, ಆಕೆಯ ಇನ್ನೊಬ್ಬ ದೊಡ್ಡ ಪ್ರನ ಮಗನಾದ ಜಹಾಂಗೀರನಿಗೆ ಕೊಟ್ಟು, ಮದುವೆಯನ್ನು ಮಾಡಬೇಕೆಂದು ನಿಶ್ಚಯವಾಯಿತು.