ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೭೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಅಬಲಾ ಸಚ್ಚರಿತ್ರ ರತ್ನ ಮಾಲೆ. ಇಲ್ಲಿ ಹಿಂದೂಪಾಠಕರು, ಮಹಮ್ಮದೀಯರ ಒಂದು ಪದ್ಧತಿಯನ್ನು ತಿಳಿಯುವುದು ಆವಶ್ಯಕ. ನಮ್ಮಲ್ಲಿ ಸೋದರಮಾವನ ಮಗಳನ್ನು ವಿವಾಹ ಮಾಡಿಕೊಳ್ಳುವುದು ಹೇಗೆ ಶಾಸ್ತ್ರೀಯವಾದುದೋ, ಹಾಗೆಯೇ ಅವರಲ್ಲಿ ಚಿಕ್ಕಪ್ಪ, ದೊಡ್ಡಪ್ಪಂದಿರ ಹೆಣ್ಣು ಮಕ್ಕಳನ್ನು ಮದುವೆಮಾಡಿಕೊಳ್ಳುವುದು ಶಾಸ್ತ್ರೀಯವಾದುದು. ಈ ಪದ್ಧತಿಯು ನಮಗೆ ಆಶ್ಚರ್ಯವಾಗಿ ತೋರಬಹುದು, ಆದರೆ ಇದು ಅವರಲ್ಲಿ ಸಾಮಾನ್ಯವಾದ ರೂಢಿಯಾಗಿದೆ. ರಾಜ್ಯಲೋಭಗ್ರಸ್ತಳಾದ ಕುದುಷಿಯಾಬೇಗನಳು ಮಗಳಿಗೆ ವಿವಾಹವನ್ನು ಮಾಡುವೆನೆಂದು ಹೇಳುತ್ತಾ ಕಾಲಹರಣೆಯನ್ನು ಮಾಡುತಲಿದ್ದಳು. ಆದರೆ ಶಿಕಂದರು ಬೇಗನಳು ವಿವಾಹಯೋಗ್ಯಳಾದುದರಿಂದ, ೧೮೩೫ ನೆಯ ಇಸವಿ ಯಲ್ಲಿ ಕುದುಷಿಯಾ ಬೇಗನಳು ಮಗಳನ್ನು ಜಹಾಂಗೀರನಿಗೆ ಕೊಟ್ಟು ವಿವಾಹ ವನ್ನು ಅತಿ ವಿಭವದೊಡನೆ ಬೆಳೆಸಿದಳು. ಮದುವೆಯಾದ ಮೇಲೆ ಜಹಾಂಗೀರನು ರಾಜ್ಯವನ್ನು ಆಳಲು ಯತ್ನಿಸಿದನು. ಆದರೆ ಕುದುಷಿಯಾಬೇಗಮಳು ಅಳಿಯ ನಿಗೆ ರಾಜ್ಯವನ್ನು ಕೊಡಲು ಒಪ್ಪಿಕೊಳ್ಳಲಿಲ್ಲ. ಜಹಂಗೀರನು ಅತ್ತೆಯನ್ನು ಸೆರೆಯಲ್ಲಿಡಲು ಪ್ರಯತ್ನಿಸಿದನು. ಈತನ ಪ್ರಯತ್ನವನ್ನು ತಿಳಿದು ಬೇಗನಳು ಕ್ರೋಧಾನ್ವಿತಳಾಗಿ ಯುದ್ಧಕ್ಕೆ ಸಿದ್ಧಳಾದಳು, ಇಬ್ಬರಿಗೂ ಘೋರ ಯುದ್ದವು ನಡೆದು ಜಹಾಂಗೀರನು ಪರಾಜಿತನಾದನು, ಬೇಗನಳು ಅಳಿಯನನ್ನು ಮೂರು ತಿಂಗಳು ಕಾರಾಗೃಹದಲ್ಲಿ ಇಡಿಸಿದಳು. ಇಷ್ಟರಲ್ಲಿ ಕಂಪೆನಿಯವರೂ, ಇನ್ನು ಕೆಲವರೂ ಮಧ್ಯಸ್ಥರಾಗಿ ಜಹಾಂಗೀರನನ್ನು ಕಾರಾಗೃಹದಿಂದ ಕರೆತಂದು, ೧೮೩೭ ನೆಯ ಇಸವಿಯಲ್ಲಿ ಆತನಿಗೆ ಪಟ್ಟಾಭಿಷೇಕವನ್ನು ಮಾಡಿದರು. ೬೦,೦೦೦ ರೂಪಾಯಿಗಳ ವರ್ಷಾ ದಾಯವುಳ್ಳ ಸ್ವತಂತ್ರ ಜರ್ಮಾದಾರಿಯನ್ನು ಕುದುಷಿಯಾ ಬೇಗಮಿಗೆ ಕೊಟ್ಟು, “ ಆಕೆಯು ರಾಜ್ಯ ವಿಷಯಗಳಲ್ಲಿ ಪ್ರವೇಶಿಸಕೂಡದು, ” ಎಂದು ನಿಬಂಧನೆಯನ್ನು ಮಾಡಿದರು. ಜಹಾಂಗೀರನು ರಾಜ್ಯ ಕಾರ್ಯಗಳಲ್ಲಿ ಅಶ್ರದ್ದೆಯುಳ್ಳವನಾಗಿದ್ದುದರಿಂದ, ಪ್ರಜೆಗಳು ಆತನನ್ನು ದ್ವೇಷಿಸುತಲಿದ್ದರು. ಈತನು ದುಷ್ಟ ಸ್ವಭಾವವುಳ್ಳವನೂ ಸರ್ವದಾ ದುರ್ವ್ಯಸನಾಸಕ್ತನೂ ಆಗಿದ್ದುದರಿಂದ, ಭಾರ್ಯಾಭರ್ತರಿಗೆ ಐಕಮತ್ಯ ವಿಲ್ಲದೆ ಕಲಹಗಳು ನಡೆಯುತಲಿದ್ದವು. ಗುಣವತಿಯಾದ ಶಿಕಂದರು ಬೇಗನಳು ರಾಜ್ಯ ಕಾರ್ಯಗಳನ್ನು ಶ್ರದ್ದೆಯಿಂದ ನೋಡುತ್ತ, ಪ್ರಜೆಗಳಿಗೆ ಸುಖವನ್ನುಂಟು ಮಾಡಬೇಕೆಂತಲೂ, ದುಷ್ಟರ ಸಹವಾಸವನ್ನು ಬಿಟ್ಟು ಸನ್ಮಾರ್ಗದಲ್ಲಿ ನಡೆಯ ಬೇಕೆಂತಲೂ, ತನ್ನ ಪತಿಯನ್ನು ಬಹುವಿಧವಾಗಿ ಕೇಳಿಕೊಂಡಳು. ಅದರಿಂದ ಪ್ರಯೋಜನವೇನೂ ಆಗಲಿಲ್ಲ. ಕೊನೆಗೆ ಶಿಕಂದರ್ ಬೇಗಮಳು ತನ್ನ ಪತಿ