ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೯೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೀರಮತಿ. ಮಾಡಿ ಕರೆದುಕೊಂಡು ಹೋದಳು. ಅಲ್ಲಿಗೆ ಹೋದ ಮೇಲೆ ವೀರಮತಿಯು ತನ್ನ ನಿಜರೂಪವನ್ನು ತೋರಿಸಲು, ತನ್ನ ಪ್ರಾಣವನ್ನು ಕಾಪಾಡಿದವಳು ತನ್ನ ಪತ್ನಿಯೇ ಎಂದು ತಿಳಿದು ಜಗದೇವನು ಅತ್ಯಂತ ಆನಂದಭರಿತನಾದನು. ಆಗ ವೀರಮತಿಯು, “ ನಮಗೆ ತಿಳಿಸದೆ ಈ ಪ್ರಕಾರವಾಗಿ ಒಬ್ಬರೇ ಬರಲು ಕಾರಣವು ಏನು ?” ಎಂದು ಪತ್ನಿಯನ್ನು ಕೇಳಿದಳು, ಅದರ ಮೇಲೆ ಜಗದೇವನು ನಡೆದ ವೃತ್ತಾಂತವನ್ನೆಲ್ಲ ಪತ್ನಿಗೆ ತಿಳಿಸಿ, “ ನನ್ನನ್ನು ತೆಗೆದುಕೊಂಡು ಹೋದ ದುಷ್ಟ ರನ್ನು ನನ್ನ ಬಲತಾಯಿಯು ಕಳುಹಿಸಿದಳು. ನಾನು ಇನ್ನು ಮೇಲೆ ಇಲ್ಲಿ ಇದ್ದರೆ ನಿಮ್ಮ ಅಣ್ಣನು ನನ್ನ ತಂದೆಗೆ ಸಾಮಂತನಾದ ಕಾರಣ ಆತನಿಗೆ ಕೇಡುಂಟಾಗು ವುದು. ಆದುದರಿಂದ ನಾನು ಪಟ್ಟಣಸಂಸ್ಥಾನಕ್ಕೆ ಹೋಗಿ ಯಾವುದಾದರೂ ಒಂದು ಉದ್ಯೋಗವನ್ನು ಸಂಪಾದಿಸಿಕೊಂಡು ನಿನ್ನನ್ನು ಕರೆಯಿಸಿಕೊಳ್ಳುವೆನು. ನನಗೆ ಅನುಜ್ಞೆಯನ್ನು ಕೊಡು, ” ಎಂದು ಕೇಳಿದನು. ಅದಕ್ಕೆ ವೀರಮತಿಯು ತನ್ನನ್ನು ಸಹ ಸಂಗಡ ಕರೆದುಕೊಂಡು ಹೋಗಬೇಕೆಂದು ಬೇಡಿಕೊಂಡಳು. ಆ ಮೇಲೆ ಜಗದೇವನು ಬಿರಜನ ಸಮ್ಮತಿಯನ್ನು ಪಡೆದು ಪತ್ನಿಯೊಡನೆ ಹೊರಡಲು ಸಿದ ನಾದನು. ಬಿರಜನು ಸ್ವಲ್ಪ ಸೈನ್ಯವನ್ನು ತೆಗೆದುಕೊಂಡು ಹೋಗಬೇಕೆಂದು ಜಗದೇವನನ್ನು ಕೇಳಿಕೊಂಡನು. ಆದರೆ ಜಗದೇವನು ಸೈನ್ಯವು ಅನಾವಶ್ಯಕವು ಎಂದು ನುಡಿದು, ಪತ್ನಿಯನ್ನು ಒಂದು ಕುದುರೆಯ ಮೇಲೆ ಕುಳ್ಳಿರಿಸಿ, ತಾನು ಒಂದು ಕುದುರೆಯ ಮೇಲೆ ಕುಳಿತುಕೊಂಡು ಯುದ್ಧ ಮಾಡುವುದಕ್ಕೆ ಉಪ ಯೋಗಿಸುವ ಶಸ್ತ್ರಗಳನ್ನು ಮಾತ್ರ ತೆಗೆದುಕೊಂಡು ಹೊರಟನು. - ಇವರು ಪ್ರಯಾಣಮಾಡುತ್ತ ಒಂದುದಿವಸ ಮಧ್ಯಾಹ್ನ ಒಂದು ಹಳ್ಳಿಯ ಇನಿಂತು, ಭೋಜನವನ್ನು ಮಾಡಿ, ವಿಶ್ರಾಂತಿಯನ್ನು ಪಡೆದು, ಅಲ್ಲಿನ ಜನರನ್ನು ಪಟ್ಟಣಕೆ ಯಾವ ಮಾರ್ಗವಾಗಿ ಹೋಗಬೇಕು ಎಂದು ಕೇಳಿದರು. ಅದಕ್ಕೆ ಆ ಹಳ್ಳಿಯ ಜನರು ಪಟ್ಟಣಕ್ಕೆ ಎರಡು ಮಾರ್ಗಗಳು ಇವೆ ಎಂತಲೂ ಅವುಗಳಲ್ಲಿ ಒ೦ದು ಮಾರ್ಗದಲ್ಲಿ ಮನುಷ್ಯರನ್ನು ತಿನ್ನುವ ಎರಡು ದೊಡ್ಡ ಹುಲಿಗಳು ಇವೆ ಎಂತಲೂ ಹೇಳಿದರು. ಆಗ ವೀರಮತಿಯು ಹುಲಿಗಳು ಇರುವ ಮಾರ್ಗದಲ್ಲಿಯೇ ಹೋಗಿ, ಅವುಗಳನ್ನು ಬೇಟೆಯಾಡಿಕೊಂಡು ಪ್ರಜೆಗಳ ಬಾಧೆಯನ್ನು ಹೋಗಲಾಡಿ ಸೋಣ,” ಎಂದು ಹೇಳಿದಳು, ಪತ್ನಿಯ ಶೌರ್ಯೋತ್ಸಾಹಪೂರಿತಗಳಾದ ಮಾತು ಗಳನ್ನು ಕೇಳಿ ಜಗದೇವನು ಸಂತೋಷಚಿತ್ತದಿಂದ ಆ ಮಾರ್ಗದಲ್ಲಿಯೇ ಹೋಗಲು ಅಂಗೀಕರಿಸಿದನು. ಇವರು ಸುಮಾರು ಹತ್ತು ಮೈಲಿಗಳ ಮಾರ್ಗವನ್ನು ಅತಿ ಕ್ರಮಿಸಿದ ಮೇಲೆ, “ ಈ ಕ್ರೂರಮೃಗವನ್ನು ಕೊಂದು ನಮ್ಮ ಪ್ರಾಣವನ್ನು ರಕ್ಷಿಸಿರಿ,” ಎಂಬ ಮಾತುಗಳನ್ನು ಕೇಳಿದರು. ಆಗ ಈ ದಂಪತಿಗಳು ಇನ್ನೂ ಸ್ವಲ್ಪ ಮುಂದಕ್ಕೆ ಹೋಗಿ ನೋಡಲು, ಅಲ್ಲಿ ಒಂದು ದೊಡ್ಡ ಮರದಮೇಲೆ ಇಬ್ಬರು ಮನು ಸ್ಯರು ಕುಳಿತುಕೊಂಡು ನಡುಗುತಲಿರುವುದೂ, ಮರದ ಕೆಳಗೆ ಒಂದು ದೊಡ್ಡ