ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಸರೀರದ ನಾದ ಸೂರುಷ ಬಾಳುವೆ ಮಾಡಿರೋ ನನಗೆ ಗೊತ್ತು” ಯಂದು ಆತುಮ ಯಿಸುವಾಸದಿಂದ ಹೇಳಿದ್ದಕ್ಕೆ ಗದ್ಧಲಯ್ಯನು “ನಿನ ಗಂಡನ ಸರೀರದ ಹದ ಹೆಂಡತಿಯಾದ ನಿನಗೇ ಗೊತ್ತು. ನಮಗಲ್ಲ ಹೆಂಗ ತಿಳೀತಯ ಮಗಳೆ.. ಅದಿಲ್ಲಿ, ವು೦ಬಲಕ ಯೇನು ಮಾಡುತೀಯವ್ವಾ..? ತಿಂಬಲಕ ಯೇನು ಮಾಡುತೀಯವ್ವಾ?” ಯಂದು ಹಗುರಾದ ಪ್ರಸೇನ ಹಾಕಿದನು. ಮಣ್ಣು ಮುಕ್ಕನ ಹಾವಿನಂಗ ವುಪಾಸ ವನುವಾಸ ಯಿರೋದರಲ್ಲಿ ನಿಷ್ಣಾತಳಾಗಿದ್ದ ಆಕೆಯು ಅದಕಿದ್ದು “ವಂದೆಲೆ, ವಂದಡಕೆ, ವಂದಗಳು ಸುಣ್ಣ, ಹೆಬ್ಬೆಟ್ಟು ಗಾತುರದ ತಂಬಾಕು. ಯಷ್ಟಿದ್ದರ ಸಾಕಪ್ಪ ನನಗ ಹಳ್ಳಗಳು ನೀರು ಕುಡಿಬ್ಯಾಡಂತಾವೇನು? ಗಾಳಿ ವುಸುರಾಡಬ್ಯಾಡ ಅಂತಾತೇನು..? ಮಲಿಕ್ಕಂಬಲಕ ನೆಲ ಅಯ್ಕೆ.. ಹೊದ್ದುಕೊಳ್ಳಲಕ ಆಕಾಸ ಅಯ್ಕೆ.” ಯಂದು ಹೇಳಿದಳು. ಆಗಿದ್ದು ಅಗಲಯ್ಯನು ಆಸರಿಕೇಗ ಆಗಲಕ. ಬ್ಯಾಸರಿಕೇನ ಬಳಿಯಲಕ ನನ್ನೋರು ತನ್ನೋರು ಅಂಬೋರು ಬೇಕಲ್ಲವ್ವಾ.. ನಿನ ತಂದೆಗೆ ಖಬುರು ಕಳುವಲೇನು?” ಯಂದು ಕೇಳಿದ್ದಕ್ಕೆ ಆಕೆಯು “ನಿಮ್ಮೆದೆಯೊಳಗ ಮತ್ತು ಕನುಕರ ಅಯ್ತಲ್ಲಾ.. ಆಟು ಸಾಕಪ್ಪಾ. ನನ್ನೆದೆಯ ಸಂಕಟದ ಹೊಳೆಗುಂಟ ನನ ತಂದೆ ವಂದಲ್ಲಾ ವಂದಿವಸ ಮೀಜಿಕೋತ ಬಂದೇ ಬರುತಾನಪ್ಪ.. ಮಿಸ್ಟೇರಿಗೆ ನೀವು ಖಬರು ಕಳುವಬ್ಯಾಡರಿ” ಯಂದು ಹೇಳಿದಳು. ಆಗಿದ್ದು ಅವರೆಲ್ಲ “ಸರೆ ಕನವ್ವಾ.. ನಿನ ಬೂದುಕು ನಿನಮಾತು” ಯಂದು ಹೇಳಿ ಅಲ್ಲಿಂದ ತಮ್ಮ ತಮ್ಮ ಮನೆಗಳಿಗೆ ಹೊಂಟು ಹೋಗಲು.... - ಜಗಲೂರೆವ್ವ ಸೂರನ ಕಿವಿಯೊಳಗ ಬಾಯಿಯಿಟ್ಟು.. “ನನಗೇನು ಬಂದಯಿತಂತ ಮಾರೀನ ಸಪ್ಪಗ ಮಾಡಿಕೊಂಡೇಯಲೋ? ಹೆಂಗುಸಾದ ನಾನೇ ಯೇಟು ಗೆಲುವಾಗಿದೀನಿ.. ಗಂಡುಸಾದ ನಿನಗೇನು ದಾಡ್ಲಿ? ಯಸನ ಮಾಡಬ್ಯಾಡ...” ಯಂದು ಹೇಳಿ ಯಡಗಯ್ಲಿ ಚೆನ್ನವ್ವನ್ನೂ ಬಲಗಯ್ಲಿ ಧರುಮ ದೇವತೇನೂ ಅವುಚಿಕೊಂಡು “ಜಗಲೂರಜ್ಞಾ.. ನೀನು ನನ್ನ ಕನ್ನಿಬಿಡ ಬ್ಯಾಡಪ್ಪಾ” ಯಂದು ಹೇಳಿಕಂತ ನೆಲಕ್ಕ ಮಯ್ಯ ಚೆಲ್ಲಿದಳು. ಆಗ್ಗೆ ನೂರೊಂದು ರಾತ್ರಿಯ ಕತ್ತಲು ಮಿದ್ದು ಕಣಕ ಮಾಡುವಷ್ಟು ಆವರಿಸಿಬಿಟ್ಟಿತು. ಯಲ್ಲಂದರಲ್ಲಿ ಕಾವಳದ ವಜ್ಜಲೊಜ್ಜಲು, ಬಾಯಿ ತೆರೆದರೆಲ್ಲಿ ತಮ ನಾಲಗೆಗೆ ಕತ್ತಲು ಮೆತ್ತಿಕೊಳ್ಳುವುದೋ ಯಂದು ಹೆದರಿ ನಾಯಿಗಳು ಕೂಗುವ ಧಯ್ರ ಮಾಡಲಿಲ್ಲ. ತೆರಕಂಡರೆಲ್ಲಿ ಕತ್ತಲು ತುಂಬಿಕೊಳ್ಳುವುದೋ ಯಂದು ಹೆದರಿ ಬೆಕ್ಕುಗಳು ಕಣ್ಣು ಬಿಚ್ಚುವ ದಯವ್ಯ ಮಾಡಲಿಲ್ಲ. ಕತ್ತಲು