ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೭೭ ಸ್ಥಾಪಿಸಬೇಕೆಂದು ಕರೆ ನೀಡಿದಳು. ಅಲ್ಲದೆ ತಾನು ಸ್ಥಾಪಿಸಿರುವ ಸೇಂಟ್ ಥಾಮಸ್ ಮುಗಾಲಯಕ್ಕೆ ಚಿತ್ರಚಿತ್ರಪ್ರಾಣಿ ಪಕ್ಷಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದೇಣಿಗೆ ರೂಪದಲ್ಲಿ ನೀಡಬೇಕೆಂದು ಕರತಾಡನದ ನಡುವೆ ಯಿನಂತಿ ಮಾಡಿಕೊಂಡಳು. ತನ್ನ ಕಂಕುಳು ಸದಾ ಸುವಾಸನೆಯುಕ್ತವಾಗಲಕೆಂದು ಬಗಲೊಳಗೆ ಪುನುಗು ಬೆಕ್ಕನ್ನು ಯಿಟ್ಟುಕೊಂಡಿದ್ದ ರೆಬೆರೊ ಯಿದ್ಯುಕ್ತವಾಗಿ ಮನರಂಜನಾ ಕಾರಕ್ರಮಗಳನ್ನು ವುದ್ಘಾಟಿಸಿದ್ದಲ್ಲದೆ ಕೆರೆಕವುಲರಟ್ಟಿಯ ಸ್ತ್ರೀ ಕಲಾಯಿದೆಯರೊಂದಿಗೆ ನರನವನ್ನೂ ಮಾಡಿ ಯಲ್ಲರ ಮಿಶೇಷ ಮೆಚ್ಚುಗೆಗೆ ಪಾತ್ರನಾದನು. ತದನಂತರ ಅವರವರ ಜಾತಿ, ಅಂತಸ್ತುಗಳಿಗನುಸಾರವಾಗಿ ಯಾರಾರು ಯಲ್ಲೆಲ್ಲಿ ಕೂಂಡ್ರಬೇಕೋ ಅಲ್ಲಲ್ಲಿ ಕೂಕಂಡು ಸಸ್ಯಾಹಾರ, ಮಾವುಸಾಹಾರ ಭಕ್ಷ ಭೋಜ್ಯಗಳನ್ನು ಯಥೇಚ್ಚವಾಗಿ ಸ್ವೀಕಾರ ಮಾಡಿ ಯಡ್ಡವರನನ್ನು ಬಲಗಣ್ಣ ಗುಡ್ಡೆಯೊಳಗೂ, ರೆಬೆರೋನನ್ನು ಯಡಗಣ್ಣ ಗುಡ್ಡೆಯೊಳಗೂ ತುಂಬಿಕೊಂಡು ತಮ್ಮ ತಮ್ಮ ಸಮುಸ್ಥಾನಗಳಿಗೆ ಹೊರಟು ಹೋಗುತ್ತಿರುವಾಗ್ಗೆ... ಯಿತ್ತ ಕುದುರೆಡೆವು ಪಟ್ಟಣದೊಳಗ ಪುವಲ ರಾಜಮಾರಾಜರುಗಳಿಂದ ತಾಂಬೂಲ ಕಯಂಕಯ್ಯಾರವಾಗಿ ವುಪಯೋಗ ಮಾಡುತಲಿದ್ದ ಪಿಕದಾನಿಯನ್ನು ಅಪಹರಿಸುವ ವಂದಲ್ಲಾ ವಂದು ಪ್ರಯತ್ನವ ಮಾಡಿ ಯಿಪಲಗೊಂಡಿದ್ದ ಕಾಟಯ್ಯನಾಯಕನು ವಾರೊಪ್ಪತ್ತಿನಲ್ಲಿ ಅದನ್ನು ತಂದು ತಪ್ಪಿಸುವುದಾಗಿ ತಿರುಪಾಲಯ್ಯ ಶ್ರೇಷಿ «ಗೆ ಮಾತು ಕೊಟ್ಟು ಯಿಪ್ಪತ್ತೆರಡು ಮುಕ್ಕಾಲು ರೂಪಾಯಿಗಳನ್ನು ಮುಂಗಡವಾಗಿ ಯಿಸಕೊಂಡು ತನ್ನ ಅಮಾತ್ಯ ಸೇನಾಧಿಪತಿ, ಭಂಡಾರಿ ಯವರೊಂದಿಗೆ ಕಡುದಮ್ಮನ ಹಳ್ಳದ ಕಣಿವೆಗೆ ಹೋಗಿ ಅಲ್ಲಿ ಬೀಡಿಗರ ರಾಮಯ್ಯನು ಕಲ್ಲೂರ, ಬಾಳೆಹಣ್ಣು, ಬ್ಯಾಲದ ಚಕ್ಕೆಯಿಂದ ಅದೇ ತಾನೆ ಭಟ್ಟಿ ಯಿಳಿಸಿದ್ದ ಸರಾಯಿಯನ್ನು ಮಣ್ಣಿನ ಚಿಪುEಗಳಿಗೆ ಬಗ್ಗಿಸಿಕೊಂಡು ಸೇವಿಸುತ್ತ ತನ್ನ ನತದೃಷ್ಟತನವನ್ನು ಸುಶ್ರಾವ್ಯವಾಗಿ ಹಳಿದುಕೊಳ್ಳುತ್ತ ಕಾಲು ಚಾಚಿ ಅರಳೀಮರದ ಬೊಡ್ಡೆಗೆ ವರಗಿರುವ ಸಂಗತಿಯನ್ನು ತಳವಾರನೂ, ಗೂಡಾಚಾರಿಯೂ ಆದ ವುರಗಯ್ಯನು ರಾಜಮಾತೆ ಭಮ್ರಮಾಂಬೆಗೆ ಯಿವರಿಸು ವಾಗ್ಗೆ ಹತ್ತು ಬಾರಿ ವುಗುಳು ನುಂಗಿ ಗಂಟಲು ಸರಿಪಡಿಸಿಕೊಂಡಿರಬೌದು. ಅರಮನೆಯ ಅಂತಃಪುರದೊಳಗೆ ಸೋಮರಸ ಸೇವನ ಮಾಡಲಕೆಂದೇ ತಮ್ಮ ಹಿಂದಿನ ರಾಜರು ಸುರಾಲಯವನ್ನೇ ಕಟ್ಟಿಸಿರುವ ಸಂಗತಿಯನ್ನು ಬದಿಗೊತ್ತಿ, ಪಿಂಗಾಣಿ ಪಾತ್ರಗಳಲ್ಲಿ ಸೋಮರಸ ವನ್ನು ಜಿನುಗಿಸಲಕೆಂದೇ ಮಳಿಗದವರನ್ನು