ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಹೇ ಚತುಷ್ಟಯವು ಜೀವರೆಗೆ ಮಾಡಿದ ಯತ್ನ ಪ್ರಯತ್ನಗಳು ವಂದಲ್ಲ ಯರಡಲ್ಲ. ಜೆಟ್ಟಿಂಗಪ್ಪನ ಮೂಲಕ ಗ್ರಾಮದೇವತೆಯಾದ ಮರಮ್ಮನನ್ನು ಯತ್ತಿ ಕಟ್ಟಲಕ ನೋಡಿದ್ದರು, ಮಾಟ ಮಂತರ ಮಾಡಿಸಲಕ ನೋಡಿದ್ದರು, ನಿದ್ದೇಲಿರುವಾಗ ಮೋಬಯ್ಯನನ್ನು ಕಾಲು ಮುರಿಸಲಕ ನೋಡಿದ್ದರು, ಯಾವ ಬಾಡ್ಯಾರಲೋ ನಿಮ್ಮಲ್ಲಿಗೆ ಕಳಿಸಿದ್ದು ಯಂದು ಜಗಲೂರೆವ್ವನ ಕಯ್ದೆ ಬಗ್ಗಿಸಿ ಕೊಂಡಿದ್ದರು. ಆದರೂ ಗ್ರಾನೋದಯವಾಗಿರಲಿಲ್ಲ. ಕಾಟಯ್ಯನು ಕೊನೆಯ ಅಸ್ತರ ಪ್ರಯೋಗ ಮಾಡಲಕೆಂದೇ ಆ ಮುವ್ವರನ್ನು ಮೇಲುಪ್ಪರಿಗೆಗೆ ಕರೆಯಿಸಿಕೊಂಡಿದ್ದ. ಈ ಪುವ್ವಲ ಸಾಮುರಾಜ್ಯ ಕುಂತಳ ಸೀಮೆವಳಗ ಯದೆಸೆಟೆಸಿ ನಿಲ್ಲುವಂಗ ಮಾಡಿದ ಅವರ ಹೂಲ್ವಿಕರನ್ನು ಕೊಂಡಾಡಿದ. ಸಿಮ್ಮಾಸನದೊಳಗ ಮಿಸ್ಟೇವು ಯಿರುವುದೆಂದು ಹೇಳಿದ, ಸರೀರ ನಾಕು ಬಗೆಯಾಗಿದ್ದರೂ ಆತುಮ ವಂದೇ ಯಿರುವುದೆಂದೂ ಯವರಿಸಿದ, ಬಿಟ್ಟು ತಾನು ತಿಂದದ್ದುಂಟಾ.. ಬಿಟ್ಟು ತಾನು ಕುಡಿದದ್ದುಂಟಾ ಯಂದು ಅನ್ನದ ರುಣ ನೆನಪು ಮಾಡಿಕೊಟ್ಟ ಪ್ರತಿಯೊಂದಕ್ಕೂ ಅವರು ಅವುದು ದೊರೆಯೇ ಅವುದು ಯಂದು ತಲೆ ಅಲ್ಲಾಡಿಸಿದರು. 'ರುಣ ತೀರಿಸಲಕ ಯೇನು ಮಾಡಲಕ ಬೇಕಪ್ಪಾ ದೊರೆಯೇ?” ಯಂದವರು ಕೇಳಿದ್ದಕ್ಕೆ ಆ ನಾಯಕನು ಮುಂಡಾಸನ್ನು ತಲೆಗೆ ಸುತ್ತಿಕೊಂಡು ಅದೇ ಕಿರೀಟಯಂದು ಭಾವಿಸಿ, “ನೋಡಿರಪ್ಪಾ ಜೀವದ ಗೆಳೆಯರಾ.. ಹೇಗಿಂದೀಗಲೇ ನೀವು ನಿಮನಿಮ್ಮ ಮೇಷ ಭೂಷಣ ಧರಿಸಿ ಪರಾಕು ಹೇಳಿಸಿಕಂತ ಥಳಗೇರಿಗೆ ನಡಕೋತ ಹೋಗಬೇಕು. ಅರಮನೆಯ ಯಂಜಲುಂಡು ಬೆಳೆದಿರೋ ಮೋಬಯ್ಯನನ್ನು ಕಾಣಬೇಕು. ಪಿಕದಾನಿಗಿಂತ ಸಾಂಬವಿಯ ಅಂದ್ಲು ಬಡಕಂಡಯ್ತಲ್ಲಾ ಯಂದು ಖುಲ್ಲಮ ಖುಲ್ಲ ಹೇಳಬೇಕು. ಸಾಂಬವಿ ಮಯ್ಯೋಳಗ ಅದಾಳಂಬುದಕ ವಂದು ಕೂನ ಗುರುತು ತೋರುಸು ಯಂದು ಬಲವಂತ ಮಾಡಬೇಕು. ತೋರಿಸಿದ ಪಕ್ಷದಲ್ಲಿ ಅರಮನೆಗೆ ಅರಮನೆಯೇ ಮಂಡಿಮರಿ ಸರಣಾಯ್ತದೆ ಯಂದು ಆಮಿಷ ವಡ್ಡಬೇಕು. ಯಕಚ್ಚಿತ್ತು ಆ ನರಮಾನ್ನವನು ಅದನ್ನೆಲ್ಲ ಮಾಡಾಕಿಲ್ಲ... ಆಗ ನೀವು ಮೂರು ಮಂದೀನು ಅವನ್ನ ವದ್ದು ಯಳಸಿಕೊಂಡು ತಂದು ಅರಮನೆಯ ಕಂಭಕ್ಕೆ ಕಟ್ಟಯಿಸಬೇಕು.. ಯೇನಂದ್ದೀರಿ?” ಯಂದು ಹೇಳಿದ್ದಕ್ಕೆ ಅವರು “ಹಂಗೆ ಆಗಲಿ ದೊರೆಯೇ? ಯಂದರು. ತಮಗೆ ವಮುಸ ಪಾರಂಪರ್ ಲಗಾಯ್ತು ಲಭಿಸಿರುವ ರಾಜಗವುರ ವುಳುಸಿಕೊಳ್ಳಬೇಕೆಂದು ನಿರರಿಸಿದರು. ಸರಸರಾಂತ ಅವರು ತಮ್ಮ ಮನೆಗಳಿಗೆ