ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೮೩ ಗ್ಯಾಕ ದಣುವು ಮಾಡಿಕೊಂಡಿರಿ ತಂದೆಗೋಳಾ.. ಕುಂತಲ್ಲೆ ಕಮ್ಮಿ ಸನ್ನೆ ಮಾಡಿದ್ದರ ಮೋಡೋಡಿ ಬರುತಿದ್ದೆನೆಲ್ಲಾ... ನಿಮ್ಮ ಪಾದ ಸ್ವರೂಪದಿಂದ ಥಳಗೇರಿ ಪಯಿತ್ರಆಯ್ತು.. ಯಾಕ ದಯಮಾಡಿ ಸಿದಿರಿ.. ಯೀ ನಿಮ ತೊತ್ತಿನ ಮಗನಿಂದ ಯೇನು ಆಗುವುದಯ್ಕೆ. ಕಾಲಿಂದ ಹೇಳಿದರ ತಲೇಲಿ ಹೊತ್ತು ಮಾಡುತೀನಿ” ಯಂಬಂಥ ಮಾತುಗಳ ಪಯಿ ವಂದೇ ವಂದನು ಮಾತಾಡು ವುದು ವತ್ತಟ್ಟಿಗಿರಲಿ ಯದ್ದು ನಿಂತಾದರೂ ತಮಗೆ ಗವುರವ ಕೊಡಬಾರದೇನು? ತಾವು ಕುಂಡಲಕ ಕಟ್ಟೆ ಬಿಟ್ಟುಕೊಡಬಾರದೇನು? ಬೀಸಣಿಕೆ ಬೀಸಿ ಗಾಳಿ ಹಾಕಬಾರದೇನು? ಯಿದೆಲ್ಲ ವತ್ತಟ್ಟಿಗಿರಲಿ, ನೋಡಿದೊಡನೆ ಸಣುಮಾಡಿ ನಡುಬಗ್ಗಿಸಬಾರದೇನು? ವಂದು ಸವುಜನ್ಯಪೂರುವಕ ನೋಟ ಬೀರಿ ಗವುರವಿಸಬಾರದಿತ್ತೇನು? ಹೂ... ಹೈು ಅದಾವುದೂ ವಂಚೂರೂ ಯಿಲ್ಲ. ತಮ್ಮ ಬಗೆಗಾಗಲೀ, ವರಮಾನದ ಬಗೆಗಾಗಲೀ ಯಳೋಟು ಖಬುರಿದ್ದಂಗಿಲ್ಲ... ಯಿವನನ್ನು ಹೆಂಗಂತ ಮಾತಾಡಿಸುವುದು, ಯೇನಂತ ಮಾತಾಡಿಸುವುದು, ವಬ್ಬರ ಮಾರೀನ ವಬ್ಬರು ನೋಡಿಕೊಂಡರು, ನೀನು ಮಾತಾಡಿಸು, ತಾನು ಮಾತಾಡಿಸು ಅಂತ ಕಣ್ಣು ಸನ್ನೆ ಬಾಯಿ ಸನ್ನೆ ಮಾಡಿದರು, ಆದರ ಹಿಂಜರಿದರು. ಆವಾಗಿದ್ದು ಸಾಂಬವೀಯ ಪರಮ ಭಕುತನಾದ ಜಡೆತಾತನು “ಯಾಕರಪ್ಪಾ ಅವ್ರನ್ನ ಮಾತಾಡಿಸದಂಗ ಸುಮಕ ಕೂಕಂಡುಬಿಟ್ಟಿರಲ್ಲ.. ನೀವು ಯದಕ ಬಂದೀರೆಂಬುದನ್ನು ಸ್ಪಷ್ಟ ಮಾಡಿರಿ” ಯಂದಾಡಿ ಪುಟುಗಿ ಕೊಟ್ಟನು. ಸೋಲುಪ ಮೇಲುದಲ್ವೆಯ ಅಧಿಕಾರಿಯಾದ ಆಮಾತ್ಯ ಗವುಡಿಕೆ ಸಣಸಿದ್ದಪ್ಪನು “ಯಜಮಾನ. ನಮ್ಮ ಮೋಬಯ್ಯ ಅರಮನೆಯ ಪರಿಚಾರಕನಪ್ಪಾ.” ಅಂದುದಕ್ಕೆ ಆತನು “ಅವುದಪ್ಪ.. ಅದೆಲ್ಲ ಹಿಂದಿನ ಜಲುಮದ ಮಾತು.. ಯೇಗವನಿಲ್ಲ” ಅಂದನು. “ಹಂಗಾರ.. ಯೀ ತನ್ನ ಸರೀರದೊಳಗ ತಾನಿಲ್ಲಂದ ಮ್ಯಾಲ.. ಯಾರವರಪ್ಪಾ?” ಯಂದು ಗೋಯಿಂದಪ್ಪ ಕೇಳಿದ್ದಕ್ಕೆ ಮುದೇನು “ಜಗಾನುಮಾತೆಯಾದ ಸಾಂಬವಿ ಬೀಡು ಬಿಟ್ಟಿರುವಳಪ್ಪ' ಯಂದನು. “ಯಜ್ಞಾ ನಮಗೆ ಅಷ್ಟ ನಂಬುಕೆ ಬರಾಣಿಲ್ಲ ನೋಡು. ಯೀ ಪಿಕದಾನಿ ಹಿಡಿಯುವನ ಸಂಗತಿ ನಮಗ ಗೊತ್ತಿಲ್ಲದ್ದೇನಯ್ಕೆ? ಮೆತ್ತನ್ನ ಮೆದೆಗಳ್ಳನಿದ್ದಾನಿವ. ಗುಮ್ಮನ ಗುಸುಗನಿದ್ದಾನಿವ.. ಬಾಯೊಳಗ ಬೊಟ್ಟಿಟ್ಟರ ಕಡೀಲಕ ಬರದಂಗನಿದ್ದವ.. ಯಿದು ಮೂರಿಗೆಲ್ಲ ಗೊತ್ತಯ್ಕೆ.. ತಿಂಗಳುಗಟ್ಟಲೆ ಯಿವ ಮಯ್ ನೀರೆರಕಂತಿದ್ದುಂಟಾ... ಬಟ್ಟೆ ಬರೆ ತೊಟ್ಟು ಕಳಿದ್ದುಂಟಾ.. ಬಾಯಿಗೆ ನೀರ ಹಾಕ್ಕಂಡು