ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ 033 ಸಿಖಾಮಣಿನಾಯ್ಡು ಯಂಬ ಜಾಗೀರುದಾರನು ಹತ್ತು ನಮೂನಿ ಥರದ ಪದಾತಿ ದಳಗಳನ್ನು ಯೆಟುಕೊಂಡು ತನ್ನ ಮೂಗಿನ ನೇರಕ್ಕೆ ಪರಿಪಾಲಿಸುತಲಿದ್ದನು. ಯಿಪ್ಪತ್ತು ಹಳ್ಳಿಗಳೊಳಗ ಆತನದೇ ಜಮೀನು ಯಿತ್ತು, ಯಿನ್ನೊಬ್ಬರದು ಯಿರಲಿಲ್ಲ. ಸಾಯಿರಾರು ಮಂದಿ ಬೇಕಿರಾಕಾಗಿ ಆತನ ಜಮೀನೊಳಗ ದುಡುಮೆ ಮಾಡುತಿದ್ದರು. ಅವರಿಗೆ ಅವರ ಸರೀರ ಹೊರತು ಸೊಂತದ್ದೆಂಬುದು ಯಿನ್ನೊಂದಿರಲಿಲ್ಲ. ವಂದು ಹೊತ್ತಿಗೆ ಬಾನ, ಮಯ್ಯ ಮುಚ್ಚಲಕ ವಂದು ತುಂಡು ಅರಿವೆ ಕೊಟ್ಟು ನಾಯ್ಡು ಅವರನ್ನು ಬದುಕು, ಸಾವಿನ ನಡುವೆ ತೂಗುಬಿಟ್ಟಿದ್ದನು. ಆತನಿಂದ ತಮ್ಮ ತಮ್ಮ ಕುಂಡಿ ಮ್ಯಾಲ ಬರೆ ಹಾಕಿಸಿಕೊಂಡು ಮಂದಿ ರೋಸಿಹೋಗಿದ್ದರು. ಅಂಥವರಿಂದಲೇ ತುಂಬಿ ತುಳುಕಾಡುತಲಿದ್ದ ತಲಚರುವಿ, ಕುಂದರಿ, ಪದಪಾಡು, ಚಿನಪಾಡುಗಳಿವೆ ಮೊದಲಾದ ಪಂಚಯಿಂಸತಿ ಕುಗ್ರಾಮಗಳಲ್ಲಿ ಗೂಢಾಚಾರರನ್ನಲೆದಾಡಿಸಿ ತರಾವರಿ ಯಿಷಯಗಳನ್ನು ಸಂಗ್ರಹಿಸಿಟ್ಟುಕೊಂಡೇ ಮನೋ ಸಾಹೇಬನು ಗೊನೆಪಾಡು ಕುರುಚಲು ಕಾಡಿನಲ್ಲಿ ಬೀಡು ಬಿಟ್ಟಿದ್ದನು. ಕಪ್ಪಕಾಣಿಕೆ ಸಮೇತ ಬಂದು ಕಾಣುವಂತೆ ಹೇಳಿ ಕಳುವಿದನಾದರೂ ನಾಯ್ದು ಬಂದು ಕಾಣುವುದು ವತ್ತಟ್ಟಿಗಿರಲಿ ಕುಂಪಣಿ ಸರಕಾರದ ದೂತರ ತಲೆ ಬೋಳಿಸಿ, ಹಣೆಮಾಲ ಕುಂಕುಮದ ಬೊಟ್ಟಿಟ್ಟು ಕಮ್ಮೆ ಬಳೆ ತೊಡಿಸಿ ಕಲೆಬ್ರುಗೂ ಯದೇ ಗತಿ ಕಾದಯ್ಕೆ ಯಂದು ಹೇಳಿ ಕಳುವಿದ್ದನು. ಆಗಿದ್ದು ಕುಸಲ ರಾಜಕೀಯ ಮುತ್ಸದ್ದಿಯಾದ ಸ್ತ್ರೀ ಪಾದ ಸಾಸ್ತಿಯು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂದು ನೀಡಿದ ಸಲಹೆ ಹಿತಯನ್ನಿಸಿ ಮನ್ನೋ ಸಾಹೇಬನು ಆಗಿಂದಾಗಲೆ ತುಗ್ಗಲಿಯಿಂದ ಬೋಸಪ್ಪನನ್ನೂ ನಮಚೆರಲದಿಂದ ಗೋಯಿಂದ ನಾಯ್ದು ನನ್ನೂ, ಪೆದ್ದ ಹರಿವಾಣದಿಂದ ಕುರುವುಲ ಹುಲೆಪ್ಪ ನಾಯಕನನ್ನೂ ಸಯ ಸಮೇತ ತಾನಿದ್ದಲ್ಲಿಗೆ ಕರೆಯಿಸಿಕೊಂಡು ನೀವೆಲ್ಲ ವಟ್ಟಾಗಿ ಕೋಡಮೂರು ಮಾಲ ದಾಳಿ ಮಾಡಿ ಸಿಖಾಮಣಿ ನಾಯ್ಡುನನ್ನು ಹೆಡಮುರುಗಿ ಕಟ್ಟಿ ಯಳಕೊಂಡು ಬರಬೇಕೆಂದು ಆಗೈ ಮಾಡಿದನೆಂಬಲ್ಲಿಗೆ, ಅತ್ತ ರೆಬೆರೋ ಸಮ್ಮಿಕರ ತುಂಡು ತುಕಡಿ ಕಟ್ಟಿಕೊಂಡು ಅವರನ್ನು ಹಂಗ ಗೆಲ್ಲಬೇಕು ಯಿವರನ್ನು ಹಿಂಗ ಗೆಲ್ಲಬೇಕು, ಗೆಲ್ಲುತಾ ಗೆಲ್ಲುತಾ ಬಡತಿ ಪಡಕೊಂಡು ವುತ್ತರಕ್ಕೆ ಹೋಗ ಬೇಕೆಂದು ಕಣಸು ಕಾಣತ ನಿಲುವಂಜಿಯಿಂದಾ ಗುಲಗಂಜಿಗೆ, ತಾಂಡಾಪರದಿಂದ ಗಿಂಡಾಪರಕ ದಟ್ಟಂಡಿ ದಾರಂಡಿ ಅಲದಾಡಲಕ ಹತ್ತಿದ್ದನು ಅಂತರ ಪಿಶಾಚಿಯಂಗ.