ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೨ ಅರಮನೆ ಮುಖದೊಳಗ ರಕುತ ತಂದುಕೊಳ್ಳುತ್ತಾಳೆ, ಮುಖವನ್ನು ಸಿಂಡರಿಸಿಕೊಳ್ಳುತ್ತಾಳೆ. ಯಿಂಥವನ್ನೆಲ್ಲಾ ಹೇಳಿ ತನ್ನ ಮೂಡು ಕೆಡಿಸಬ್ಯಾಡಿರೆಂಬ ಮಾತುಗಳನ್ನು ಮುಲಾಜಿಲ್ಲದೆ ಸಿಂಪಡಿಸುತ್ತಾಳೆ. ತೇಲಲಿಕ್ಕೂ ಬಿಡದ, ಮುಳುಗಲಿಕ್ಕೂ ಬಿಡದ ಯಿಂಥ ಹೆಂಡತಿಯನ್ನು ತಾನು ಅಕ್ಲಂಡಿನ ಕ್ರೂಸೋನ ಮನೆಯಲ್ಲಿಯೇ ಬಿಟ್ಟು ಬರಬೇಕಿತ್ತು. ಮದುವೆಯಾಗಿದ್ದ ರೇನಾಯಿತು.. ಯಂದು ಆ ಯತ್ತರ ನಿಲುವಿನ ಸೀಮಂತನಿಗೆ ಭರವಸೆ ನೀಡಿದರೂ ಸಾಕಾಗಿತ್ತು. ಕಂಪನಿ ಸರಕಾರದ ಸೇವೆಯಲ್ಲಿರುವವರು ಅವಿವಾಹಿತರಿರಬೇಕು ಅಥವಾ ಯಿದುರರೋ, ಪರಿತ್ಯಕ್ತರೋ, ಯಿಚ್ಚೆದಿತರೋ ಆಗಿದ್ದರೆ ವಳ್ಳೆಯದು ಯಂದು ಡ್ಯೂಕ್ ಸಾಹೇಬ ಗ್ರಿಗೋರಿ ವುಪನ್ಯಾಸವೊಂದರಲ್ಲಿ ಹೇಳಿದ್ದರಲ್ಲಿ ಸತ್ಯಾಂಶ ಯಿಲ್ಲದಿಲ್ಲ. ಹೊರಡುವ ಮುಂದುಗಡೆ ಯಿಂಡಿಯಾ, ಯಂಡಿಯಾ ಯಂದು ಕುಣಿದಾಡಿದ್ದಳು, ನಿಕೋಲಾಯ್ ಮನೋಚಿಯ ಪ್ರವಾಸ ಕಥನವನ್ನು ಜಾರಿನ ತುಂಬೆಲ್ಲ ಮೋದಿದ್ದಳು.. ಕಾಲಿಕತ್ತ ತಲುಪಿದೊಡನೆ ಆಕೆ ಜಾರಿನಿಂದ ಹೊರ ಜಿಗಿದದ್ದೇನು? ಹಾ... ಹಾ ನನ್ನ ಯಂಡಿಯಾ ಯಂದುದ್ಧಾರ ತೆಗೆದು ನೆಲಕ್ಕೆ ಮುತ್ತಿಕ್ಕಿದ್ದೇನು? ತೀರದ ಮರಳನ್ನು ತನ್ನ ಮಯ್ದೆ ಯರಚಿಕೊಂಡಿದ್ದೇನು? ಕಪುE ಜನರ ನಡುವೆ ತಾನು ಮಿರಿಮಿರಿ ಮಿಂಚಿದ್ದೇನು? ಹುಚ್ಚು ಹುಡುಗಿ ತನ್ನ ಜೆನ್ನಿಫರು. ಯೋಚನೆಗಳಿಂದ ಅದೇ ತಾನೆ ತಹಬಂದಿಗೆ ಬಂದ ಯಡ್ಡವರು ತನ್ನ ಖಾಸಾ ಬಂಗಲೆ ಪ್ರವೇಶ ಮಾಡಿದೊಡನೆ ಮಲ್ಲಿನಾಳನ್ನು ಬಾಚಿ ತಬ್ಬಿಕೊಂಡು ತುಪ್ಪಳದ ಮಯ್ಯ ನೇವರಿಸಿದಳು.. ಅತ್ತ ಕುದುರೆಡವು ಪಟ್ಟಣದೊಳಗ ಮಯ್ಯ ನೇವರಿಸುವಾಕಿ, ಕಣಸೊಳಗ ಮೂಡುವಾಕಿ, ಮನದೊಳಗ ಮುಣುಗುವಾಕಿ, ಭೂಮದ್ಯ ಕುಂಕುಮದ ಬೊಟ್ಟಾಗಿ ಕಾಣಿಸಿಕೊಳ್ಳುವಾಕಿ ಯಿಲ್ಲಿದಾಳ, ಅಲ್ಲಿದಾಳ, ಯಲ್ಲೆಲ್ಲಿದಾಳೆ. ಪಟ್ಟಣದಿಂದ ನಗೆಯನ್ನು ಅಪಹರಣ ಮಾಡಿದಾಕಿ ಯಲ್ಲಿದಾಳೆ, ಅಲ್ಲಿ ಕಾಣೆ, ಯಿಲ್ಲಿ ಕಾಣೆ, ಯಲ್ಲೆಲ್ಲಿ ಕಾಣೆ... ನಮ್ಮವ್ವನ ಯಲ್ಲಿ ಕಾಣೆ.. ಹುಡುಕೀ ಹುಡುಕೀ ಮಂದಿನ ಮಂದಿ ಮುಂಗಾಲ ಕಸುವು ಕಳಕಂಡು, ಹಿಂದಿನ ಹಿಂಗಾಲ ಕಸುವು ಕಳಕೊಂಡು, ಕಣ್ಣೂಳಗಿನ ದೀವಿಗೆ ಕಳಕೊಂಡು, ಮನದೊಳಗ ಮಾತು ಕಳಕೊಂಡು, ನೊಣ, ನೊರಜು, ದೊಮಾರಿಗಳನ್ನು ಹೊಡಕೊಳ್ಳುವ ತಾಕತ್ತಿಲ್ಲದೆ ತಮ್ಮ ತಮ್ಮ ಮನೆವಳಗೆ, ಹೊರಗೆ, ಪಳುಗಟ್ಟೆ ಕಿರುಗಟ್ಟೆ ಕೋಟೆ ಕೊತ್ತಳ ಬುರುಜು, ಮಾಳಿಗೆ ಕುಂಭಗಳ ಮ್ಯಾಲ ಸಿಲಾ ಯಿಗ್ರಹಗಳಂತೆ ಗಪ್ಪಂತ ಕೂಕಂಡಯ್ಕೆ.. ತಾಯಿ ದರುಸನಕ್ಕಾಗಿ ಕಣ್ಣು ಹರ ಬಿಟ್ಟಯಿತೆ, ತಾಯಿಯ