ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೨೩ ಯಿಲಿಗಳು ಬೆಕ್ಕುಗಳಾಗಿ ಮ್ಯಾನ್ ಗುಟ್ಟುತಲಿದ್ದ, ಬೆಕ್ಕುಗಳು ಹುಲಿಗಳಂತೆ ಗರಿಸುತಲಿದ್ದ.. 'ಸಾಂಬವೀ' ಯಂಬ ಸಬುದವು ಸಾವುರ ರೆಕ್ಕೆಯ ಗಂಡ ಭೇರುಂಡೋಪಾದಿಯಲ್ಲಿ ಹಾರಾಡುತಲಿದ್ದ ಕುದುರೆಡವು ಪಟ್ಟಣದೊಳಗ ವಂಚೂರಂದರ ವಂಚೂರೇ ನೆಮ್ಮದಿ ನೆಲಸಿತ್ತು.. ಅದ್ಯಾವಾಗಿನಿಂದಪಾ ಸಿವನ ಅಂದರ ಆವಾಗಿನಿಂದಪಾ ಸಿವನss ದವಲತ್ತಿನ ಸೂತಕಯಿದ್ದ ಅರಮನೆಯಿಂದ ಹೊರ ಬಿದ್ದ ಜಗ್ಗೂರೆವ್ವನು ದಿಬ್ಬದ ಕಡೆ ನೋಡಿದ್ದೇ ಪರಪಾಟಾಗಿತ್ತು. ಸರೂನಂತ ಯಳಕೊಂಡುಬಿಟ್ಟಿದ್ದು ತಡ ಆಗಿರಲಿಲ್ಲ.. ತಾನು ಯೇರಿದ್ದು ತಡ ಆಗಿರಲಿಲ್ಲ.. ನೆತ್ತಿ ಮ್ಯಾಲ ಕಾಲೂರಿ ನಿಂತೊಡನೆ ಯಾರಾರೋ ಅಂಗಾಲಗುಂಟ ತನ್ನ ಸರೀರದ ತುಂಬೆಲ್ಲ ತುಳುಕಾಡಿದಂಥ ಅನುಭವವಾತು... ತಾನೇನು ಮಾಡಿದಳೋ? ಯೇನು ಬಿಟ್ಟಳೋ? ಯಲ್ಲಾ ಅಯೋಮಯ.. ಯೀಗ ಅನ್ನಿಸುತ್ತಾ ಅದೆ, ದಿಬ್ಬದ ನೆತ್ತಿ ಮ್ಯಾಲಿರೋ ರಂದ್ರಕ್ಕೂ ಅರಮನೆಗೂ ಸಂಬಂಧ ಅದೆ ಅಂಬುದು.. ತಾನಿಳಿವಾಗ 'ಜಗಲೂರೆವ್ವ ಮುಂದೆಂದಾದರು ತನ್ನನ್ನೇರಿ ಆತುಮಾಹುತಿ ಮಾಡಿಕೊ' ಯಂದು ಪಿಸುಗುಟ್ಟಿದಂತೆ ನೆನವು.. ಅದರ ಮ್ಯಾಲ ನಿಂತುಕೊಂಡಿದ್ದು ಪಾಡನ್ನಿಸದೆ ಯಿರಲಿಲ್ಲ ಜಗಲೂರೆವ್ವಗೆ.. ದಿಬ್ಬದ ಮ್ಯಾಲಿಂದ ಕೆಳಗಿಳಿದೊಡನೆ ಪಟ್ಟಣದ ಮಂದಿ ಸುತ್ತಾಕ್ಕೊಂಡರು, ಬಿಡಲೇ ಯಿಲ್ಲ.. ಆಕೆ ಕೊಸರುವಾಗ ದಿಬ್ಬದ ಮ್ಯಾಲಿಂದ ಯಿಳುದು ಬಂದೀ ಅ೦ದರ ನೀನು ಸಾಮಾನ್ಯವಳಲ್ಲವ್ವಾ.. ನಿನ್ನ ಸರೀರದೊಳಗೂ ಅಲವುಕಿಕವಾದದ್ದೇನೋ ವುಂಟು.. ಯಂದಾಡಿ ತರುಬುತಲಿದ್ದರು. ನೊಂದವಳಾದ ತನಗೆ ಬೇಯಿನ ಮರವೇ ಆಶ್ರಯ ನೀಡಿ ದೊಡ್ಡಸ್ತಿಕೆ ಮೆರೆದಿರುವುದೆಂದರ ತಾನ್ಯಾಕೆ ನೊಂದವರಿಗೆ ಕಯ್ದಾದ ಸಾಯ ಮಾಡಬಾರದು ಯಂದು ನಿರರಿಸಿದ ಆಕೆಯು ಸೂರನನ್ನೇ ತನ್ನ ಸೇನಾಪತಿಯನ್ನಾಗಿಯೂ, ಚೆನ್ನವ್ವ ಧರುಮದೇವತೆಯರನ್ನು ಆಮಾತ್ಯರನ್ನಾಗಿಯೂ ಮಾಡಿಕೊಂಡಳು.. ಕೆಲವೊಮ್ಮೆ ಸಂತರಸ್ತರನ್ನು ತಾನೇ ಹುಡುಕಾಡಿ ಕೊಂಡು ಹೋಗುತಲಿದ್ದಳು. ಕೆಲವೊಮ್ಮೆ ಸಂತರಸ್ತರೇ ಹುಡುಕಿಕೊಂಡು ತಾನಿದ್ದಲ್ಲಿಗೇ ಬರುತಲಿದ್ದರು.. ಹಿಂಗಾಗಿ ತಾನಿದ್ದಲ್ಲಿ ರಾಜಾಸ್ಥಾನ ಯೇರುಪಡುತಲಿದ್ದಿತು. ಧಯರ ಸಾಹಸಗಳ ಅಕ್ಷಯ ಪಾತ್ರೆಯನ್ನೇ ಯದೆಯೊಳಗಿಟ್ಟುಕೊಂಡಿದ್ದ ಆಕೆ ಧಣಿವರಿಯದೆ ದಯರವನ್ನು ಧಾರೆಯರೆಯತೊಡಗಿದಳು. ಯಾರಾದರೂ ಸತ್ತಮ್ಯಾಲ ಯೇನು ತಮ ಸಂಗಾಟ ವಯ್ಯುತ್ತಾರೆ.. ವಯ್ಯೋದು ಯರಡು ಮಾತ್ರ. ವಳೆದು ಮತ್ತು