ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೨೫ ಮಾತ್ರ ಗೊತ್ತಿರಬೌದಾದ ಯಿಷಯವು.. ಯಂದು ಮುಂತಾಗಿ ಮುಂದಾಲೋಚನೆ ಮಾಡುತ ಗೊಂಜಾಡ ಲರಡವೆಜ್ಞ ಜಡತಾತರಂಥ ಹಿರೀಕರೇನಿದ್ದರು. ಅವರು ಸದರಿ ಪಟ್ಟಣದ ಹೆಣ್ಣು ದೇವತೆಗಳ ಗುಡಿಪವುಳಿಯೊಳಗ ದೀಪಗಳಾರದಂಗ, ಗಂಟೆ ಜಾಗಟೆಗಳು ಸದಾ ಮೊಳಗುತ್ತಿರುವಾಂಗ, ಪೂಜೆ ಪುನಸ್ಕಾರ ಸದಾ ಜರುಗುತ್ತಿರೋ ಹಾಂಗ ನೋಡಿಕೋತಿದ್ದರು.. ದೇವಿಭಾಗವತ ಪ್ರವಚನ ಪುಣ್ಯಕಥಾ ಶ್ರವಣ ಗಳಿತ್ಯಾದಿ ಸದಾ ಸಾಪಗ್ರಸ್ತರ ಕಿವಿಗೆ ಬೀಳುತ್ತಿರೋ ಹಾಂಗ ತಕ್ಕ ಯೇರುಪಾಡು ಮಾಡಿದ್ದರು.. ಪ್ರಜೆಗಳೆದೆಯೊಳಗ ದಯವಿಕ ಸೊರೂಪೀ ಅಂಜಿಕೆಯು ಭಾಡದಾಂಗಿರಲಿ ಯಂಬ ಕಾರಣಕ್ಕೆ ಸ್ತ್ರೀ ದೇವಿಯ ಯಿಯಿಧ ಅವತಾರಗಳನ್ನು ಮತ್ತಿ ತೋರಿಸುವಂಥ ಚಿತ್ರಪಟಗಳನ್ನು ಬರೆಯಿಸಲಕೆಂದೇ ದೂರ ದೂರದ ಪ್ರಾಂತಗಳಿಂದ ನಿಷ್ಠಾತ ಕಲಾಯಿವರಿಗೆ ಆಮಂತರಣಗಳನ್ನು ಕಳುವಿದ್ದರು. ಯಿವರ ಯೀ ಆಸ್ತೀಕ ಪ್ರಯತ್ನಗಳಿಗೆ ಹೆಗಲು ಕೊಟ್ಟಿದ್ದವರೆಷ್ಟೋ.. ಆದರು ಹೆಣ್ಣುದೇವರ ಕಾವಿಗೆ ದೇಣಿಗೆ ನೀಡಿದರಲ್ಲಿ ತಮ್ಮ ಕುಲದೇವರಾದ ತಿರುಪತಿ ಯಂಕಟರಮಣ ಸೋಮಿಯು ಮುನುಸಿಕೊಳ್ಳುವನೋ ಯಂಬ ಲೆಕ್ಕಾಚಾರದಿಂದ, ಅರಮನೆಯವರು ತನ್ನಿಂದ ಮತ್ತಷ್ಟು ಸಾಲ ಸೋಲ ಗಿಂಜುವರೋ ಯಂಬ ಅನುಮಾನದಿಂದ ರೊಕ್ಕಸ್ಥನಾದ ತಿರುಪಾಲಯ್ಯ ಸ್ನೇಷಿ«ಯು ಬೇಕೆಂದೆ ತಲೆಮರೆಯಿಸಿ ಕೊಂಡಿದ್ದನು. ತನ್ನ ಮನೆ ಮುಂದ 'ನಾಳೆ ಬಾ ಆಸ್ತೀಕ' ಯಂಬ ಪಲಕವನ್ನು ತೂಗುಬಿಟ್ಟು ನೆಲಮಾಳಿಗೆಯೊಳಗ ಭೂಗತಗೊಂಡು ವುಪದ್ರವೀಪಟುಗಳಾದ ಮೂಷಿಕಗಳೊಂದಿಗೆ ವಾರ ಲಾಗಾಯ್ತು ಸಹಜೀವನ ಮಾಡುತಲಿದ್ದನು. ದೇಣಿಗೆ ಸಂಗ್ರಹ ಕಾರದಲ್ಲಿ ಬಲವಂತ ಯಿರಲಿಲ್ಲವಾದ್ದರಿಂದ ಅರಮನೆಯವರಾಗಲೀ, ಪಟ್ಟಣದ ಹಿರೀಕರಾಗಲೀ ಪ್ರೇಷಿ «ಯರಂಥ ಲೋಭಿಗಳನ್ನು ಪತ್ತೆ ಹಚ್ಚುವ, ಹಚ್ಚಿ ಜಿಹ್ವಾಗ್ರದಿಂದ ಬಗ್ಗಳನ್ನು ಸಿಂಪಡಿಸುವ ಗೋಜಿಗೆ ಸುತರಾಂ ಹೋಗಿರಲಿಲ್ಲ. ಕೊಟ್ಟವರು ನಮ್ಮವರೆ, ಕೊಡದೆ ಯಿದ್ದವರೂ ತಮ್ಮವರೆ ಯಂಬ ವುದಾರ ಭಾವವಂದಿಗರಾಗಿದ್ದುದೇ ಅದಕ್ಕೆ ಕಾರಣ.. ಅದೂ ಅಲ್ಲದ ದಯವದ ವಾಸಕ್ಕೆ ಮೋಬಯ್ಯರಂಥವರ ಸರೀರಗಳೂ ಪ್ರಾಸಸ್ತ್ರ ಯಂದು ಯೀ ಹಿಂದ ಯಾರು ತಾನೆ ಮೊಹಿಸಿದ್ದರು? ಯೀ ಕಲಿ ಆಳುವಿಕೆಯೊಳಗೆ ನಿಕುಷ«ರಂದರ ಯಾರು? ವುತ್‌ಕುಸ್ಥರಂದರ ಯಾರು? ಯಾರಾರ ಸರೀರಗಳನ್ನು ಯಾರಾರು ಲಾವಣಿ ಹಿಡಕೊಂಡಿರುವರೋ, ಯಾವ ಯಾವ ಸರೀರದೊಳಗ ಯಾವ್ಯಾವ ಗರಡಿ ಮನೆಗಳಿರುವಮೋ... ವುಚ್ಚ ನೀಚಗಳ ನಡುವೆ ತೂರುವ ಕಾಲದಿಂದ ಜೋಪಾನ