ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೮ ಅರಮನೆ ಯೇನು ತಾಯಿ? ಯಂದು ಬಲು ಗವುರವದಿಂದ ಕೇಳಿದ್ದಕ್ಕೆ ರಾಜಮಾತೆಯು ಕೂಡ್ಲಿಗಿಗೆ ತಾನು ಹೋಗಿ ಕುಂಪಣಿ ಸರಕಾರಕ್ಕೆ ತಾನು ಸದರಿಪಟ್ಟಣದ ಅಹವಾಲು ವಪ್ಪಿಸುವುದಾಗಿ ಹೇಳಿದಳು. “ನೀನು ಮುಪ್ಪಾನು ಮುದೇಕೆ.. ರಾಜಮಾತೆ ಯಾಗಿರೋ ನೀನು ಪಟ್ಟಣದ ಗಡಿ ದಾಟಿದಲ್ಲಿ ಸಾಂಬವಿ ಮುನುಸಿಕೋತಾಳೆ. ನೀನು ವುಡಿ ತುಂಬಿಸಿಕೊಂಡದೀ ಅಂತಾನೇ ಲೆಕ್ಕ ತಾಯಿss ಪಟ್ಟಣಕ್ಕೆ ವದಗಿರೋ ಧರಮ ಕರುಮಕ್ಕ ನೀನು ಹಕ್ಕುದಾರಳದೀ...” ಯಂದು ಮುಂತಾಗಿ ವಬ್ಬ ಕಿರೀಕನೂ.. ಪುವಲ ರಾಜವಮುಸದ ಯಜಮಾನ ಮನುಶ್ಯಳಾದ ನೀನು ಯಕಶ್ಚಿತ ಕೂಡ್ಲಿಗಿವರೆಗೆ ಹೋಗುವುದೇನು..?” ಯಂದು ಮುಂತಾಗಿ ಯಿನ್ನೊಬ್ಬ ಹಿರೀಕನೂ, “ಕೂಡ್ಲಿಗಿ ಹಾದೀಲಿ ಕಾಡಡವಿ ಕಣವ್ವಾ.” ಹಾದಿಯಂಥ ಮಗ್ಗುಲು ಭೂತ ಪ್ರೇತ ಪಿಶಾಚಿ ಬೇತಾಳ ಅದಾವ ಕಣವ್ವಾ.. ಹುಲಿ ಸಿಮ್ಮ ಚಿರತೆಗಳ ವುಪಟಳ ರಗಡಯ್ಕೆ ಕಣವ್ವಾ. ಯಂದು ಮತ್ತೊಬ್ಬ ಹಿರೀಕನೂ.. “ನೀನು ಮುಪ್ಪಾನು ಮುದೇಕ ಅದಿs ನಿನಗ ಅನ್ನಲಕ ಬರತದಾ.. ಆಡಲಕ ಬರತದss” ಯಂದು ಮಗುದೊಬ್ಬ ಹಿರೀಕನೂ ಯೇಕ ಪ್ರಕಾರವಾಗಿ ಅಂದಾಡಿದರು. ಅವರು ಆಡಿದ ಮಾತುಗಳ ತಳಬುಡ ಅಗ್ಗವಾಗದೆ.. ಅವರು ತನ್ನನ್ನು ಹೊಗಳುತ್ತಿರುವರೋ, ತೆಗಳುತ್ತಿರುವರೋ ಯಂಬ ಸಂಗತಿ ತಿಳೀವಲ್ಲದೆ ರಾಜಮಾತೆಯು ಅಯ್ಯೋ ತಾನು ಚಲಾವಣೆ ಕಳಕೊಂಡಿರೋ ಸವಕಲು ನಾಣ್ಯದ ಚೂರು ಆಗಿರುವನಲ್ಲಾ.. ಯಂದು ವಳಗೊಳಗೆ ಹಲುಬುವುದು ಮಾಡಿ “ನೀವೆಲ್ಲರು ಪುವುಲ ರಾಜವಮುಸದ ಹಿತಚಿಂತಕರದೀರಿ.. ನಿಮ್ಮ ಮಾತನು ತೆಗೆದು ಹಾಕಲಾಗದು.. ನಾನು ಹೋಗೋದು ಬ್ಯಾಡ ಅಂಬುತೀರಿ.. ಸಿಸರೆ.ನಮ್ಮ ರಾಜಕುಮಾರ ಕಾಟನಾಯಕರನ್ನು ಕಳುವಿದರ ಹೆಂಗೆ?” ಯಂಬ ಪ್ರಶ್ನೆಯನ್ನು ಯಿಟ್ಟಳು.. ವಬ್ಬರ ಮುಖವನ್ನು ವಬ್ಬರು ನೋಡಿಕೊಳುತಲಿದ್ದ ಹಿರೀಕರ ಪರವಾಗಿ ಅಡುವಯ್ಯನು ಅದೆಂಗಾಯತ್ತೆ ತಾಯಿ? ಬೋಳಾಗಿರುವ ಅವಯ್ಯನನ್ನು ಕಡ್ಡವರು ಸಾಹೇಬ ತಿರಸ್ಕಾರದ ದ್ರುಸ್ಟಿಯಿಂದ ನೋಡದಿರುತ್ತಾನೆಯೇ?. ಬ್ಯಾಡವೇ ಬ್ಯಾಡ..” ಯಂದು ಕಯ್ಕ ತಿರುವಾಡುತ ಹೇಳಿಬಿಟ್ಟನು. ಆತನ ಮಾತು ಕೇಳಿದ ಮಂದಿ 'ಚಾಂಗು ಬಲಾ'ಯೆಂದು ಕೂಗಿತು.. (ಜರಿಮಲೆಯ ಸುಸಮ್ಮಿಕರು ಕುದುರೆಡವು ಮ್ಯಾಲ ಆಕ್ರಮಣ ಮಾಡಿದ್ದಾಗ ಕೂಗಿದ್ದ ಕೂಗು ಅದಾಗಿತ್ತು... ಅಡುಮಯ್ಯನ ಕಡೇಕ ದುರುಗುಟ್ಟುವ ಪ್ರಯತ್ನ ಮಾಡುತ ರಾಜಮಾತೆಯು “ನೀವು ಯಾರನ್ನಾದರು ಕೂಡ್ಲಿಗೀಗೆ ಕಳುವಿದರ ನನ್ನ ತಕರಾರಿಲ್ಲ ಕಣರಪ್ಪಾ. ಅವರ ದಾರಿ ಖರು ಬುತ್ತಿರೊಟ್ಟಿ