ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೩೧ ಮೊದಲಿಗೆ ಸೊರಗ, ನರಕಲೋಕಗಳ ಕಡೇಲಿಂದ ಬಂದಿರಬೌದೆಂದೇ ತಾವು ಭಾವಿಸಿ ಅರಗಳಿಗೆ ಕಂಗಾಲಾದರು. ಯೀ ಗುಡುಗು ಸದ್ರುಸ ದ್ವನಿಯು ಸೊರಗ ಲೋಕದ್ದೂ ಅಲ್ಲ... ನರಕ ಲೋಕದ್ದೂ ಅಲ್ಲ.. ಯಿದು ತಮ್ಮ ಸದರಿ ಪಟ್ಟಣದ ಅದಾದ ಮೇಲೆ ಯಿಂದ ಹೊಂಟು ಗಾಳಿಗುಂಟ ಬಂದಂಗಿರುವುದು.. ಯಿದಾರದ್ದೋ ಯಿದ್ದಂಗಿರುವುದಲ್ಲಾ, ಯಂದವರವರು ತಮ್ಮ ತಮ್ಮ ಮುಂಗಾಲ ಪುಟುಗೀಲೆ ಯೋಚಿಸುತಾ ಯೋಚಿಸುತಾ.. ಆ ದ್ವನಿಯ ಆಧಾರದ ಮಾಲ ಆ ಯಕ್ತಿಯ ಆಕಾರ ಸೊರೂಪವನ್ನು ಕಲುಪಿಸುತಾ ಕಲುಪಿಸುತಾ.. ಆ ದ್ವನಿಯೇ ಹಿಂಗಿರುವುದೆಂದ ಮ್ಯಾಲೆ ಅದರ ಮೂಲಕಾರಕವಾಗಿರುವ ಮಾನವ ರೂಪವು ಹಂಗಿರಬೌದಾ ಯಂದು ಭಯಪಡುತಾ ಭಯಪಡುತಾ.. ಅಲಲಲಾ ಯಂಬ ವುದ್ದಾರ ವಾಚಕದ ವುತ್ತರಾದ್ದಕ್ಕಂಟಿರುವ 'ಸೂರ' ಯಂಬ ನಾಮವಾಚಕವನ್ನು ಗಟ್ಟಿಯಾಗಿ ಹಿಡಕೊಳ್ಳುತಾಳ ಹಿಡಕೊಳ್ಳುತಾ.. ಅರರೇ ಯೀಸ್ಟೋನಿಯು ಜಗಲೂರವೊಂದಲ್ಲಾ ಯಂದು ಯೇಕಧಂ ನಿರಣಯಕ್ಕೆ ಬಂದರು.. ಹಾ.. ಹಾ... ಜಗಲೂರವ್ವಾ.. ಹೊ ಹೋ ಜಗಲೂರೆವ್ವಾ.. ಯಂದು ಲಯದ ಸಾನ್ನಿಧ್ಯದಲ್ಲಿ ವುದ್ದಾರ ಮಾಡಿದರು. ಪ್ಲಾ.. ಪ್ಲಾ.. ತನ್ನ ಗಂಡನ ಸರೀರವನ್ನು ಸೊಯಂ ತ್ಯಾಗ ಮಾಡಿರುವಾಕೆ.. ಹೋಹೋ ಸೊಯಂ ಗಂಡನಿಂದ ಪರಿತ್ಯಕ್ತಗೊಂಡಿರುವಾಕೆ. ಬಿರುಗಾಳಿ ಸದುಸದ ತನ್ನ ಸರೀರದೊಳಗ ಅಪಾರ ತಂಗಾಳಿಯನ್ನು ಬಚ್ಚಿಟ್ಟುಕೊಂಡಿರುವಾಕೆ.. ಸೊಯಂ ಸಾಂಬವಿ ಯಂಬ ಪ್ರಳಯ ರೂಪೀ ಪ್ರವಾಹದೆದುರು ಯೇಜುತಿರುವಾಕೆ.. ದಯವದ ಸಾಪಗಳಿಗಾತೀತೆಯಾಗಿ ಬದುಕುತ್ತಿರುವಾಕೆ.. ನೂರು ಮಂದಿ ಗಂಡಸರ ತಾಕತ್ತನ್ನು ತನ್ನ ಸರೀರ ಪರಂತರ ಮುಡುಕೊಂಡಿರುವಾಕೆ, ತನ್ನ ಚೋಟುದ್ದ ನಾಲಗೆ ಅಟ್ಟದ ಮ್ಯಾಲ ಸಿಡಿಲುಗಳನ್ನು ವಟ್ಟಿಕೊಂಡಿರುವಾಕೆ, ತನ್ನೊಂದು ನೋಟ ಮಾತ್ರದಿಂದ ಭೂತ ಪ್ರೇತ ಪಿಶಾಚಿ ಬೇತಾಳ ಗಳನ್ನು ಹೆದರಿಸಿ ಮೊಡಿಸುವ೦ಥಾಕೆ .. ರೋಗ ರುಜಿನಗಳಿಗಾತೀತೆಯಾಗಿ, ಮುತ್ತುಂಜಯೆಯಾಗಿ ಬದುಕುತ್ತಿರುವಂಥಾಕೆ.. ತನ್ನೆದೆಯೊಳಗ ಹತ್ತಾರು ರಣರಂಗಗಳನ್ನು ಹುಟ್ಟಿದಾರಾಭ್ಯ ಪೋಷಿಸಿಕೊಂಡು ಬರುತ್ತಿರುವಂಥಾಕೆ.. ಪ್ಲಾ.. ಹಾ... ಜಗಲೂರೆವ್ವ.. ನೀನೇ ಕಣ ನಮ್ಮವ್ವನೇ, ಕುಂಪಣಿ ಸರಕಾರಕ್ಕೆ ಸರಿಯಾದ ಹುದ್ದರಿಯು. ಹಿರೀಕರು ಸಡನ್ನಂತ ಯದ್ದದ್ದಾಗಲೀ, ಕುಂಡಿ ಅಡೀಲಿದ್ದ ವಲ್ಲಿಗಳನ್ನು ಕೊಡವಿ ತಮ್ಮ ತಮ್ಮ ಹೆಗಲ ಮ್ಯಾಲ ಯಿಳಿಬಿಟ್ಟುಕೊಂಡಿದ್ದಾಗಲೀ, ಕಂಕುಳೊಳಗ ಕೂಸಿಟ್ಟುಕೊಂಡು ಊರೆಲ್ಲಾ