ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೬ ಅರಮನೆ ಯಾರ ಬಾಯೊಳಗಿಣುಕಿದರೂ ಚಿನ್ನಾಸಾನಿ ಸವುಂದರದ ಯಿರಾಟ್ ಸ್ವರೂಪವು.. ಯಾರ ಕಿವಿಯೊಳಗಣುಕಿದರೂ ಚಿನ್ನಾಸಾನಿಯ ಮಧುರ ಮಂಜುಳ ನಿನಾದವು.. ಯಾರ ಕಳಗಣುಕಿದರೂ ಚಿನ್ನಾಸಾನಿಯ ಸಿರಿಗಂಧದ ಗೊಂಬಿಯು.. ಕಣ್ಣು ಮುಚ್ಚಿದೊಡನೆ ಬೀಳುತಲಿದ್ದ ಕಣಸುಗಳ ತುಂಬೆಲ್ಲ ತಾನೇ ತಾನಾಗಿ ಯಜ್ರುಂಭಿಸುತಲಿದ್ದ ಚಿನ್ನಾಸಾನಿಯ ಕಣ್ಣುಗಳನ್ನು ಹುಡುಕಿಕೊಂಡು ಕೋಲಿಂಚುಗಳು ಬಂದವು. ಆಕೆಯ ಮುಖದಲ್ಲಿ ನೆಲಸಲಕಂತ ಸೊರಗಲೋಕದ ನಂದನ ವನದಿಂದ ಪಾರಿಜಾತವೇ ಮೊದಲಾದ ಪುಷ್ಟಗಳು ಬಂದವು. ಆಕೆಯ ಸೊಂಟದಲ್ಲಿ ತಳವೂರಲಕಂಠ ಸಿಂಹದ ನಡು ವಲಸೆ ಬಂತು. ಆಕೆಯ ಸ್ತನದ್ವಯಗಳಲ್ಲಿ ಬೀಡು ಬಿಡಲಕೆಂದು ತರಾವರಿ ಹಣ್ಣು ಹಂಪಲ ಗಳು ಬಂದವು. ಕೋಗಿಲೆಗಳ ಕಂಠಗಳಿಂದ ಯಿಂಪು ವಲಸೆ ಬಂದು ಆಕೆಯ ಕೋಮಲ ಕೊರಳೊಳಗೆ ಬೀಡುಬಿಟ್ಟಿತು.. ಹಿಂಗ ಕಿನ್ನರ, ಕಿಂಪುರುಷ, ಗಂಧತ್ವ ಸೊರಗಲೋಕ, ಸಸ್ಯಲೋಕ, ಜೀವಲೋಕ ಗಳಲ್ಲಿದ್ದಂಥ ಸಮಸ್ತ ಸವುಂದರತನವು ನಾ ಮುಂದು ತಾ ಮುಂದು ಯಂದು ಅವಸರ ಬವಸರದಿಂದ ಬಂದು ಠಿಕಾಣಿ ಹೂಡಿದ ಪರಿಣಾಮವಾಗಿ ಚಿನ್ನಾಸಾನಿಯ ಸರೀರವು ಸವುಂದರದ ವಸ್ತುಸಂಗ್ರಹಾಲಯವಾಯಿತು ಸಿವನೇ.. ಅಲ್ಲಲ್ಲಿಂದ, ಯಿಲ್ಲಲ್ಲಿಂದ, ಯಲ್ಲೆಲ್ಲಿಂದಲೋ ಆಗೋಚರ ಸವುಂದರತ್ತನಗಳು ಹೇಳದೇ ಕೇಳದೇ ಬಂದು ತನ್ನ ಸರೀರವನ್ನು ತುಂಬಿಕೊಂಡ ಫಲವಾಗಿ ಚಿನ್ನಾಸಾನಿಗೆ ಕಣ್ಣುಗಳೊಳ ಗೊಂದು ನಮೂನಿ ಆಗತೊಡಗಿದವು. ಕಿವಿಯೊಳಗೆ ಅನಿರಚನೀಯ ನಾದತರಂಗಗಳು ವುಲ್ಬಣಿಸ ತೊಡಗಿದವು. ಯದೆಭಾರ ಯಂದೆನ್ನಿಸಲಾರಂಭಿಸಿತು. ನಡುವಿನೊಳಗೊಂದು ನಮೂನಿ, ತೊಡೆಗಳೊಳಗೊಂದು ನಮೂನಿ, ರೆಪ್ಪೆಗಳೊಳಗೊಂದು ನಮನಿ ಅನಿರಚನೀಯ ಅನುಭೂತಿ ಆಗಲಾರಂಭಿಸಿತು. ಚಿಟ್ಟೆ ಪತಂಗ, ದುಂಬಿಗಳು ತನ್ನ ಮುಖವನ್ನೆ ವಂದು ಹುಟ್ಟೆಂದು ಭಾವಿಸಿ ಮುತ್ತತೊಡಗಿದವು.. ಯಾರಾರದೋ ಕಣ್ಣುಗಳು ತನ್ನನ್ನು ನೋಡುತ್ತಿರುವವು, ಯಾರಾರದೋ ಕಿವಿಗಳು ತನ್ನನ್ನಾಲಿಸುತ್ತಿರುವವು.. ಗಾಳಿ ತನ್ನ ಗಲ್ಲಕ್ಕೆ ಮುದ್ದು ಕೊಟ್ಟಂಗಾಗತಯ್ಕೆ... ಗಾಳಿ ತನಗೆ ಚಕ್ಕಟೆಗುಳ್ಳಿಯಿಟ್ಟಂಗಾಗತಯ್ಕೆ. ಗೋಡೆ ಮ್ಯಾಲಿರೋ ಸ್ತ್ರೀ ಕುಷ್ಟ ಪರಮಾತುಮ, ಶಂಭುತ ಮಾರಾಜ, ದುಶ್ಯಂತ ಮಾರಾಜ, ಸ್ತ್ರೀ ಕುಷ್ಣದೇವರಾಯ, ಪರಮೇಶ್ವರ ಯಿವರೆಲ್ಲ ತಮ್ಮ ತಮ್ಮ ಚಿತ್ರಪಟಗಳಿಂದ ಹೊರ ಹಾಯ್ದು ತನ್ನನ್ನು ಜುಲುಮಿ ಮಾಡಿದಂಗಾಗತಯ್ಕೆ.. ತಾನು ಕಲಿಯುತ್ತಿರೋ ತರಾವರಿ ರಾಗಗಳು