ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೨ ಅರಮನೆ ರಾಜಮನೆತನದಲ್ಲಿ ಹುಟ್ಟಿಸಿ ಬೆಳೆಸಿದಿ ಯಿಧಿಯೇ.. ಯಂದು ಮುಂತಾಗಿ ಭಮ್ರಮಾಂಬೆಯು... ತನ್ನ ಕಣ್ಣಳಗಿಂದ ಅರಮನೆ ಯಲ್ಲಿ ವುದುರಿ ಹೋಗುವದೋ ಯಂದು ಮುಂತಾಗಿ..... ಅದೇ ಕಾಲಕ್ಕೆ ಕೂಡ್ಲಿಗಿಯಿಂದ ಹೊಂಟವರೆ ಯಡ್ಡವರು ದಂಪತಿಗಳು, ಬ್ಯಾಡ ಬ್ಯಾಡಾಂದರೂ ಕೇಳದೆ ಹೊಂಟವಳೆ ಗಂಡನ ಸಂಗಾಟ ಜೆನ್ನಿಫರೂ.. ಆಕೆಯ ಕಣ್ಣೂಳಗ ಬೆಳೆಯಲಕ ಹತ್ತಯ್ಕೆ ಜಗಲೂರೆವ್ವ ಯಂಬ ಮೂರಿಯು. ಮದುವೆ ಆದ ಯೇಸೋ ವರುಷಗಳ ನಂತರ ತಾನು ಕಾಡಿನ ಹಾದಿಗುಂಟ ಪಯಣಿಸುತ್ತಿರುವುದು.. ಅಗೋ ಅಲ್ಲಿ ಆ ಮರ.. ಯಗೋ ಯಲ್ಲಿಯೇ ಮರ. ಆಗೋ ಅಲ್ಲಿ ಆ ಪಕ್ಷಿ.. ಯಗೋ ಯಲ್ಲಿ ಯೀ ಪಕ್ಷಿ.. ಅಗೋ ಅಲ್ಲಿಂದ ಕೇಳಿ ಬರುತ್ತಿರುವುದು ಹುಲಿಯ ಘರನೆಂದು.. ಹೊಗೊ ಯಲ್ಲಿ ವುಯಿಲಿಡುತ್ತಿರುವುದು ನರಿಯು.. ಆಹ್ಲಾ.. ತನ್ನ ಕಾಡಿನ ಪ್ರಯಾಣವೇ? ತನ್ನೊಳಗೆ ಕಲಾಯಿದನೋ... ತನ್ನೆದೆಯೊಳಗೆ ಕವಿಯೋ ಬಣ್ಣದ ಕುಡಿಕೆಯೊಳಗೆ ತಾನು ಕುಂಚವ ಅದ್ದದೆ ಯೇಸುಕಾಲವಾಯಿತು. ಲಂಡನ್ನಿನೊಳಗೆ ನಡೆಯಲಿರುವ ಚಿತ್ರಕಲಾ ಸ್ಪಧೆಗೆ ತಾನು ಕಲಾಕ್ರುತಿಯನ್ನು ಕಳಿಸುವ ದಿನ ದೂರವಿಲ್ಲ. ಕಾಡಿನ ಪರಿಸರದೊಳಗೆ ಹಗುರವಾಗವಳೆ ಜೆನ್ನಿಫರು.. ಆಕೆಯ ಆನಂದೋದ್ದಾರಕ್ಕೆ ಸರಿಯಾಗಿ ಸ್ಪಂದಿಸುತಾಯಿಲ್ಲ ಯಡ್ಡವರು.. ತಾನು ಮ್ಯಾಂಚೆಸ್ಟರೊಳಗೆ ಶಿಕ್ಷಕಿಯಾಗಿರುವ ರೋಜುಮೇರಿಯನ್ನು ಮದುವೆಯಾಗಿದ್ದಲ್ಲಿ ಯಂದು ಯೋಚಿಸುತ್ತಿದ್ದಾನವನು, ಯಿಗೋ ಯಚ್ಚೇಕಡೇಕ ಕುದುರೆಡವಳಗ ಮುಂಜಾಗ್ರತಾ ಸಲುವಾಗಿ ವಂದಿಬ್ಬರು ಕುಂಪಣಿ ಸಯೀಕರು ಬಂದು ಹೋದ ಲಗಾಯ್ತು ಮಂದಿಯು ಮದೆರಡು ತುತ್ತು ಕಡಿಮೆ ಮಾಡಿದರು. ಕುಂಪಣಿ ಮಂದಿ ಹೆಂಗಿರುವರೆಂಬುದರ ಬಗ್ಗೆ ತಲಾಕೊಂದೊಂದು ಕಥೆ ಕಟ್ಟಿ ಬಿತ್ತಿ ಬೆಳೆಯತೊಡಗಿದರು.. ಅವರೆದುರು ಯಾರು ಹೆಂಗ ನಡಕೋ ಬೇಕು ಯಂದು ಲೋಕಲ್ಮಾನ ಬಲ್ಲವರು ವುಳಿಕೇ ಮಂದಿಗೆ ಪರಿಪರಿಯಿಂದ ತಾಕೀತು ಮಾಡುತ್ತಿದ್ದುದೂ, ವಂದು ಸೆರೆ ಮುಕ್ತ ಹಾಲು ಕಾಣದೆ ನಿಲುಗಣ್ಣಿಗೆ ಬಿದ್ದಿದ್ದ ಮಕ್ಕಳು ಮರಿಗಳನ್ನು ಕುಂಪಣಿ ಸಾಹೇಬನೆದುರು ವಸ್ತುವಿನೋಪಾದಿಯಲ್ಲಿ ಪ್ರದರನ ಮಾಡುವ ಸಲುವಾಗಿ ತಾಯಂದಿರು ಬಗೆಬಗೆಯ ದುಕ್ಕದ ಯಿನ್ಯಾಸಗಳನ್ನು ತೊಡುತ್ತಿದ್ದುದೋ..? ನಾಯಿ ಅಡ್ಡ ಬಂದು ಬೊಗಳಿದರೇನು ಗತಿ? ಯಂಬ ಕಾರಣಕ್ಕೆ ನಾಯಿಗಳನ್ನೂ, ಬೆಕ್ಕು ಅಡ್ಡ ಬಂದು ಮ್ಯಾಂವೆಂದು ಅರಚಿ ಅಪಸವ್ಯ