ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೮ ಅರಮನೆ ತೆರದಂಗಯ್ತಿ.. ಕಿವಿ ತೆರೆದದ್ದು ತೆರದಂಗಯ್ತಿ.. ಬಾಯಿ ತೆರದದ್ದು ತೆರದಂಗಯ್ತಿ.. ಆ ತಂಬೂರಿ ಸದ್ರುಶ ಸರೀರದಾಳದಿಂದ ಗುಮ್ss ಯಂಬ ನಾದವು ಹೊರಗೆ ಬಂದು ಹಂಗss ಅಂತಸ್ಥಾನವಾಗಲಕ ಹತ್ತಯ್ಕೆ ಸಿವನೇ.. ನೀನ್ಯಾರಪ್ಪಾ ತಂದೆಯೇ.. ನೀನ್ಯಾಕ ಹಿಂಗ ಅಂಡಾವರನ ಮಲಕ್ಕೊಂಡದೀಯಪ್ಪಾ ಯಂದು ಕೇಳುವಂಥ ಮಾನುಭಾವರು ಅದರ ಯಡಕಿಲ್ಲ, ಬಲಕಿಲ್ಲ ಸಿವನೆ.. ಅದು ಯೀಗ ಮಗ್ಗುಲು ಬದಲಿಸೀತು? ಆಗ ಮಗ್ಗುಲು ಬದಲಿಸೀತು, ಯಂಬ ಗ್ಯಾನ ಯಿಟ್ಟುಕೊಂಡು ಅಷ್ಟದಿಕ್ಕುಪಾಲಕರು ಯಂಟು ನಮೂನಿ ಗೊದ್ದಿಗೆ ರೂಪದೊಳಗೆ ಅದರ ರುಂಟು ದಿಕ್ಕಿನಲ್ಲಿ ಕಾವಲು ಕಾಂಯುತ ಕೂಕಂಡಿರುವರಂತೆ, ಸ್ತ್ರೀ ಯಸ್ತು ಪರಮಾತುಮನ ಪಾಂಚಜನ್ಯ ಸರಸೊತಿಯ ಮೀಣೆ, ಕುಸ್ಥನ ಕೊಳಲು, ತುಂಬುರನ ತಂಬೂರಿ ಯವೇ ಮೊದಲಾದ ದಯವಸಂಪನ್ನನಾದ ವಾದನಾ ಪರಿಕರಗಳು ಗುಂಗಾಡಿ ರೂಪಧಾರಣ ಮಾಡಿ ಗುಯ್‌ಗುಡುತ ಹಾರಾಡುತಲಿವೆ ಸುತ್ತಮುತ್ತ ದೇವಲೋಕದ ಸುಂದರಿಯರು ಬಣ್ಣ ಬಣ್ಣದ ಪತಂಗಗಳ ರೂಪಧಾರಣ ಮಾಡಿ ಹಾರಾಡುತ ಕಳೆಗಟ್ಟವರೆ.. ವಾಯುದೇವನು ಚಾಮರ ಸೇವೆ ಸಲ್ಲಿಸುತಲವನೆ, ಸೂರೆ ಪರಮಾತುಮನು ಆಗಾಗ್ಗೆ ತನ್ನ ಕಿರಣಗಳನ್ನು ಕಳುವಿ ಪರಾಂಬರಿಸುತಲವನೆ, ಮಿಂಚುಳುಗಳು ಮಂಗಳಾರತಿಗಳನ್ನು ಬೆಳಗುತಲವೆ, ಕೂಗಳತೆ, ಕಣ್ಣಳತೆ ದೂರಗಳ ನಡುವೆ ಮೋಬಯ್ಯನ ಪ್ರಾಣವನ್ನು ಯೀಗ ವಯ್ಯುವುದೋ? ಆಗ ವಯ್ಯುವುದೋ ಯಂದು ಗುಣಾಕಾರ, ಭಾಗಾಕಾರ, ಸಂಕಲನ ಯವಕಲನ ಮಾಡುತಲವನೆ ಜವರಾಯ... ಆ ಸರೀರದೊಳಗೋ ಸಾಂಬವಿ ಯಂಬುವ ಅಯ್ದು ಬಡಕೊಂಡಿದ್ದ ಮೋಬಯ್ಯನಿಗಾಟು ದೂರದಲ್ಲಿ ಕಾಗೆಮ್ಮಗೆ ಗುಬ್ಬಿಮ್ಮ ಯೇನು ಹೇಳುತಯ್ಕೆ ಯಂದರ... “ಕಾಗೆ ಮೈss ಕುದುರೆ ಡವು ನಂಬೊ ಪಟ್ಟಣವು ಕಾದ ಕಾವಲಿಯಂಗಾಗಯ್ಕೆ ವಂದೊಂದು ನರಹುಳವು ವಂದೊಂದು ಬೆಂತರಾಗಯ್ಕೆ. ಅರಮನೆಯೊಳಗ ಅರೆಮನೆತನ ಯಂಬುದಿಲ್ಲ.. ಅದು ದುಗ್ಗಾಣಿ ಪ್ರಮಾಣದಲ್ಲಿ ಬೀದಿಗುಂಟ ತೆವಳಾಡಲಕ ಹತ್ತಯ್ಕೆ. ರಾಜಮಾತೆ ಭಮ್ರಮಾಂಬೆಯು ಭೂತ ಮೆಲಕು ಹಾಕುವ ಅಡುಗೂಲಜ್ಜಿ ಆಗ್ಯಾಳ.. ಪ್ರತಿಯೊಂದು ನರ ಹುಳದ ಯದೆಗೂಡು ಪೂಜಾ ಖೋಲಿ ಆಗಯ್ತಿ ಕಾಗೆಮ್ಮ... ಜಗಲೂರೆವ್ವ ಯಂಬ ಮೇಟಿಗೂಟದ ಸುತ್ತಮುತ್ತ ಸಂತರಸ್ತ ಮಂದಿ ವುಸುರಾಡುತ ತಿರುಗುತ್ತಿರುವ