ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಅರಗಳಿಗೆ ಹಿಂದ ಯೀ ಕಡೆ ಮುಖ ಮಾಡಿ ನಿಂತಿದ್ದ ಪಟ್ಟಣ ಯಂಬುವ ಪಟ್ಟಣವು ಸಿಡೇಗಲ್ಲು ಹಾದಿ ಕಡೇಕ ಮುಖ ಮಾಡಿಬಿಟ್ಟಿತು. ಯಿಡೀ ಪಟ್ಟಣವು ವಂದು ಸರೀರವಾಗಿ, ವಂದು ನಾದವಾಗಿ ಹೊಂಟೂ ಹೊಂಟೂ ಹಳ್ಳಕೊಳ್ಳ ದಾಟಿತು, ವುತ್ರಾಜಿ ವನ ದಾಟಿತು. ಬಾಳೆಯ ತೋಟ ದಾಟುವಷ್ಟರಲ್ಲಿ ಕುರಿಕ್ಕಿ ನಿಂಗನ ಮಗಳು ಮಯ್ರತಳು, ಜೋಳದ ಹೊಲ ದಾಟುವಷ್ಟರಲ್ಲಿ ಮಂಗೀರಪ್ಪನ ಹೆಂಡತಿ ಮಾದೇವಿ ಕಾಲರೀತವೆಯಂದು ಕುಂತುಬಿಟ್ಟಳು. ಸಜ್ಜೆ ಹೊಲ ದಾಟುವಷ್ಟರಲ್ಲಿ ಚಂಡರಜ್ಞನು ಕೆಳಗಣ್ಣು, ಮ್ಯಾಲಗಣ್ಣು ಮಾಡುತ ವುರುಳಿ ಬಿಟ್ಟನು. ಹೊಸದಾಗಿ ಮದುವೆಯಾಗಿದ್ದ ವಡ್ಡರ ರಂಗಯ್ಯನು ತನ್ನ ಹೆಂಡತಿಯಿದ್ದ ಬಡೇಲಡಕಿನ ಕಡೇಕ ಹೆಜ್ಜೆ ಹಾಕಿದನು. ನವಣೆ ಹೊಲ ದಾಟುವಷ್ಟರಲ್ಲಿ ಸಿಂಗಾರಯ್ಯನ ಸೊಸೆ ಬಿಮ್ಮನಸಿ ವಡೂರಪ್ಪಗೆ ಬ್ಯಾನೆ ಕಾಣಸಿಕಂತು. ಯಿಂಥಪ್ಪ ಹಲವು ಮುಟ್ಟು ಮಯ್ಲಿಗೆ, ಸಾವು, ಸೂತಕ, ಆಯಾಸ ಪ್ರಯಾಸ ವಾಂಛಗಳ ನಡುವೆಯೂ ಜನಸಾಗರವು ತನುವೆಂಬ ರೊಟ್ಟಿ ಸುಡುತ ಮುಂದ ಮುಂದಕ ಸಾಗಿತು. ಬಿಕ್ಕಿ ಮರಡಿ ದಿಬ್ಬವ ಹತ್ತಿಯಿಳುದು ಸಿರಿಗನ ಯೀರಗಲ್ಲು ತಲುಪುತ್ತಲೇ ಮೋಬಯ್ಯ ತಂದೆ ಯಲ್ಲದಿಯಾ.. ಯವ್ವಾ ಸಾಂಬವಿ ಯಲ್ಲದೀಯಾ ಯಂದಂಗಲಾಚಲಾರಂಭಿಸಿತು. ವಂದು ಮಾತss ವಂದು ಕಥಿಯಾsss ವಂದೊಂದು ಸಬುಧವಂದೊಂದು ದುಂಬಿಗಳಾದವು. ಜನಸಾಗರ ಮಾಡುತಲಿದ್ದ ಆರರವದೇಟಿಗೆ ಸಚರಾಚಗಳು ಪತರಗುಟ್ಟಲಾರಂಭಿಸಿದವು. ವಾಯುದೇವನ ಯಿಯಿಧ ರೂಪಗಳು ಯಲ್ಲಂದರಲ್ಲಿ ಬಿಚ್ಚಿಟ್ಟುಕೊಂಡವು. ಗಿಡಮರ ತುಣಲತೆ ಬರೆದ ಚಿತ್ರಗಳಾಗಿಬಿಟ್ಟವು. ವಾತಾವರಣದ ಮೂಕ ಯಿಸುಮಿತ ಹಾದಿಗುಂಟ.... ಅಲ್ಲೊಂದು ಹುಳವೇ.. ನರಹುಳವೇ! ಸಿವ..ಸಿವಾ... ಭೀಕರ ಮೌನ.. ಅಂಥ ಮವುನದೊಳಗ ಹಲೋಕದ ವುಸಾಬರಿಯೇ ತನಗಿಲ್ಲಯಂಬಂತೆ.. ಪಾಳು ಮಂಟಪದೊಳಗ ವಂದು ಕಂಭಕ್ಕೆ ತಲೆಕೊಟ್ಟು ಹೆಂಗೆ ಆರಾಮಸೀರು ಮಲಗಿಕೊಂಡಿರುವನಲ್ಲಾ.. ಪನ್ನಗ ಸಯನನಂತೆ ತನ್ನೋಟಕ ತಾನು ಆನಂದ ಅನುಭೋಸುತ್ತಿರುವನಲ್ಲಾ.. ತನ್ನ ಸುತ್ತಮುತ್ತ ಯೇನು ನಡೀತಾ ಆಯ್ಕೆ ಅಂಬುದರ ಪರಿಗನ್ಮಾನ ಅಯ್ಯೋ ಯಿಲ್ಲವಷ್ಟೇ? ನೀರು ಗುಡಾಣದೊಳಗಿನ ಗ್ರುತ ಬಿಂದುವಿನೋಪಾದಿಯಲ್ಲಿ ಅಳ್ಳಾಡದಂಗವನೆ.. ಅಲಲಾ.....