ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೮ ಅರಮನೆ ಮೊದಲಾದವರು ಕಸುವು ಕಿತ್ತು ಹಲಿಗೆ ಭಾರಿಸಲಾರಂಭಿಸಿದ್ದೇನು? ವುರುಪ, ಕುರುಪ, ಯರಪರೆಂಬ ತ್ರಿವಳಿ ಸೋದರರು ಕಸುವು ಕಿತ್ತು ಕಹಳೆ ಮೊದಿದುದೇನು? ಸವುಡ, ಕಿವುಡ, ಮರಿಯ, ಕರಿಯ, ಬರೆಯ, ಬಳಪರೇ ಮೊದಲಾದ ಛಲವಾದೇರು ಸೊನಾಯ ಮೊದಿದುದೇನು? ಯೇತಲ, ಪೀತಲ, ಅಂಯ್ಯಲ, ಬಂಗ್ಯೂಲರೇ ಮೊದಲಾದವರು ರುಮುರುವು ರುಮಿ ಭಾರಿಸಿದುದೇನು? ತಡಿಕೆವ್ವ ಮಡಕೆವ್ವ ಕೆಸರವ್ವ ತಂಗಳವ್ವ, ತಿಂಗಳವ್ವಂದಿರೇ ಮೊದಲಾದ ಜೋಗತೇರು ತಮ್ಮ ತಮ್ಮ ಬಗಲ ಚವುಡಿಕೆಗಳನ್ನು ಭಾರಿಸೂತ ಸಿಪಾಯಿಗಳು ಯೇಳಯ್ಯಾ ಮೋಬಯ್ಯ ಯೇಟೊತ್ತು ಸುಖನಿದ್ದೆ” ಯಂಬ ಛಂದನೆಯ ಹಾಡುಗಳನ ಹಾಡಿದುದೇನು? ನಿಂಬೆಹಣ್ಣಿನ ಪೂಜೆ, ಬನ್ನಿ, ಚಿಲುವ, ವುತ್ರಾಣಿ ಪೂಜೆಗಳನು ಮಂದರ ಮ್ಯಾಲೊಂದರಂತೆ ಮಾಡಿದುದೇನು? ಕಣ್ಣುಗಳಿಂದ ಹನಿ ಹನಿ ವಕ್ರಾಣಿ ತುಂಬಿಸಿದುದೇನು? ಮಲಕ್ಕೊಂಡವರನ ಯಬ್ಬಿಸಬಹುದು ಯಚ್ಚರಯಿರೋರನ ಯಬ್ಬಿಸಲಕಾತದೇನು?... - ಯವರು ಯಬ್ಬಿಸಲಕಾದೀತಾ? ಅವಯ್ಯನು ಯದ್ದೇಳಲಕಾದೀತಾ? ಮಂದಿಯಂಬುವ ಮಂದಿ ತಮ್ಮ ತಮ್ಮ ಮುಖಗಳ ಮ್ಯಾಲ ಚಿಂತಿಯೆಂಬ ಹುವ್ವ ಮುಡಕೊಂಡಿತು. ಕುದುರೆಡವ ವಾಲ ಮೋಬಲಯ್ಯ ಮುನುಸುಕೊಂಡವನೋ, ಮೋಬಯ್ಯನ ಸರೀರವೇ ಮುನುಸುಕೊಂಡಯ್ಯೋ, ಸರೀರದೊಳಗ ವಸ್ತಿ ಮಾಡಿರುವ ಆದಿ ಸಗುತಿ ಮುನುಸು ಕೊಂಡವಳೋ, ತಮ್ಮದು ಯೇನು ಕರುಮ ಯಿದ್ದೀತು? ತಾಯಿಯ ಮುನುಸು ಬಗೆ ಹರಿಯಲಕಂದರ ತಾವೇನು ಮಾಡಬೇಕು? ಬಲಿ ಬಗಸಿದಲ್ಲಿ ತಾವು ತಮ್ಮ ತಮ್ಮ ಸರೀರಗಳನ ಅಡ್ಡಡ್ಡ, ವುದ್ದುದ್ದ ಕುಯ್ದು ಬಲಿ ಕೊಡತೇವಿ ತಾಯೇ. ಅಂದರೂ ಯಿವಯ್ಯನ ರುದಯ ಕರಗವಲ್ಲದಲ್ಲಾ.. ಅಯ್ಯೋ ತಾಯಿ ತಾವೇನು ಮಾಡಬೇಕೆಂಬುದನ್ನಾರ ಅಪ್ಪಣೆ ಕೊಡುವಲ್ಲಿಯಲ್ಲಾ.. ಸಾವುರ ಸಂಖ್ಲಿದ್ದ ಮಂದಿ ಎಂದು ಬಾಯಾಗಿ ಗಲಗಲಾ ಅನಕಂತಿರುವಾಗ್ಗೆ, ಅದರ ದುಕ್ಕದ ಕಡಲು ವುಕ್ಕಿ ಸುತ್ತನ್ನಾಕಡೇಕ ಹರಿತಿರುವಾಗ್ಗೆ ತುಣ ಲತೆಗಳು ಬಾಡಿದವು, ಹುಲ್ಲುಗಳು ಬಾಡಿ ಬಸವಳಿದವು, ಯಲ್ಲಿ ಸದರಿ ಪ್ರದೇಶ ಬರತಗುಲಿ ಬೆಂಗಾಡಾಗುವುದೋ ಯಂದು ಭೂಮ್ರಾಯಿ ಹಲ್ವಾರಿದಳು. “ಯದ್ದೇಳು ಮಾರಾಯ.. ಯದ್ದು ಹೊಂಡೋ ಮಾರಾಯ.. ನಮ ಜಗೇವನ ಕಬ್ಬಾ ಮಾಡಿಕೊಂಡೇಸು ದಿನವಾದುವು, ಯೇನು ಕಥಿ” ಎಂದು