ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೭೧ ಕೇಳಿಸುವಂತೆ ಕೂಗಿದರು. ದುಡು ದುಡನೆ ಮೋಡಿದ ಬೊಬ್ಬುಳಿಯು ಯಿರಗಲ್ಲನ್ನವುಚಿಕೊಂಡು “ಸಿರಿಗರಾಯ.. ನೀನೀಗ ಬೊದುಕಿರಬೇಕಿತ್ತು ಕನಪ್ಪಾ.. ತಾಯಿ ಹೊಂಡುವ ಪರಿಯ ನೋಡುವ ಸಲುವಾಗಿ...” ರಂದು ಗದ್ಗದಿತನಾದನಲ್ಲಿ.... ಮೋಬಯ್ಯನ ಸರೀರವು ಕುದುರೆಡವ ತುಂಬುವುದೆಂದರೆ ಸೊರಗಲೋಕವೇ ತಮ್ಮ ಪಟ್ಟಣ ಪ್ರವೇಶ ಮಾಡಲಿರುವುದೆಂದೇ ಲೆಕ್ಕ... ಆ ಸುದ್ದಿಯು ಮುಗಸಿರ ಮಳೆಯಂತೆ ಜಿಟಿಜಿಟಿ ಹಿಡಕೊಂತು, ಹಿಡಕೊಂಡದು ಹಳ್ಳಗಳನ್ನು ನುಂಗುವ ಹೊಳೆಗಳಂತೆ.. ಹೊಳೆಗಳನ್ನು ನುಂಗುವ ನದಿಗಳಂತೆ. ನದಿಗಳನ್ನು ನುಂಗುವ ಸಮುದ್ರಗಳಂತೆ.. ಸಮುದ್ರಗಳನ್ನು ನುಂಗುವ ಸಾಗರಗಳಂತೆ.. ಜನ ಯಂಟೂ ದಿಕ್ಕುಗಳಿಂದ ಹರಕೋತ ಹರಕೋತ ಅಲ್ಲಿಗೆ ಬಂದರು ಸಿವನೇ.... ನೂರಾರು ದೀವರರ ಕಲ್ತಿದ್ದ ತುಪ್ಪದ್ದೀವಿಟಿಗಳು ದಗ್ಗಂತ ವುರಿದ ಬೆಳಕಲ್ಲಿ ಗಂಟಲಯ್ಯನು ಪ್ರಜ್ವಲಿಸಿದ ಗುಗ್ಗುಳದ ಬೆಳಕಲ್ಲಿ... ಸಾವುರಾರು ಕಣ್ಣುಗಳ ಬೆಳಕಲ್ಲಿ ಮೋಬಯ್ಯನ ಸರೀರವು ನವರತುನ ಖಚಿತಮೋಯಂಬಂತೆ ದೇದೀಪ್ಯಮಾನವಾಗಿ ಕೋರಯಿಸಲಾರಂಭಿಸಿದೊಡನೆ ಪ್ಲಾ.. ಪ್ಲಾ.. ಸಾಂಬವೀ.. ಹಾ... ಹಾ.. ದುರುಗೇ.. ಯಂದು ಮುಂತಾಗಿ ಗಂಟಲಯ್ಯನು ತನ್ನ ರಣಗಂಟಲನ್ನು ತೆರೆದೇಟಿಗೆ.. ಬಗೆ ಬಗೆ ಹುಮ್ರಗಳಿಂದಲೂ, ತಲೆ ತೊಪ್ಪಲಿಂದಲೂ, ಗಿಡಗರಿಗಳಿಂದಲೂ, ಮುತ್ತಿನ ಗೊಂಡೇವುಗಳಿಂದಲೂ ಸಿಂಗಾರ ಮಾಡಲ್ಪಟ್ಟಂಥ ಪಲ್ಲಾಕಿಯು ಥಳಥಳ ಹೊಳೆಯಲಾರಂಭಿಸಿತು. ಅದರೊಳಗ ಯೇನೇನಿತ್ತು..? ಯೇನೇನಿರಲಿಲ್ಲ..? ಮೋಬಯ್ಯ ಪಲ್ಲಾಕಿಯೊಳಗೆ ಪವಡಿಸುವ ಕಾಲಕ್ಕೆ ಪವಡಿಸಿ ಮರ ಕಡೆ ಬಿಜಯಂ ಗಯ್ತಿರೋ ಕಾಲಕ್ಕೆ ಯಾರಾರು ಯಾವ್ಯಾವ ಕಾರೈವುಗಳನ ನಿಭಾಯಿಸಬೇಕು? ಯಾರಾರು ಹೆಂಗೆಂಗೆ ನಡಕೋಬೇಕು? ಯಂದು ಮುಂತಾಗಿ ಪಟ್ಟಣ ಸೋಮಿಗಳು ಅವರವರಿಗೆ ನಿರೇಸನ ನೀಡುತ್ತಲೇ ಜನಸ್ತೋಮ ವುಫ್ ವುಫ್ ಅಂತು. ವುಧೋ ವುಧೋ ಯಂಬ ನಿನಾದವು ಮುಗುಲ ಹುದುವಿನಲ್ಲಿ ನಾದದ ನದಿಯಾಗಿ ಹರಿಯಿತು. ನೂರಾರು ವಾದ್ಯಗಳ ಮೊಳಗು ಕುಂತಳ ಪ್ರಾಂತದಾದ್ಯಂತ ಹರಿದಾಡಿತು.