ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೭೩ ಯಂದನಂತೆ.. ಹಾಂ.. ಹೊಲೇರು ಪಲ್ಲಾಸೀನ ಮುಟ್ಟುವುದೆಂದರೇನು? ಅನಾಹುತ ಆದೀತು ಬ್ಯಾಡ ಕಣಾ ಕತ್ತಲಾ.. ಅರೀದ ಹುಡುರನು ಆಚೆ ಕರೆದೊಯ್ಯಪ್ಪಾ ಯಂದು ಗೊಂಜಾಡಲರಡವಯ್ಯನು ತರುಬುತ್ತಲೇ ಹತ್ತಾರ ಊರುಗಳ ನೂರಾರು ಮಂದಿ ಹೊಲೇರು ಅದ್ಯಾಕಾಗಬಾರದಪ್ಪಾ ಯಂದು ಮುಂದಕ ಬಂದರಂತೆ.. ನಿಮಗ ಸಾಂಬವಿಯಾಗಿರಬೌದಪ್ಪಾ.. ನಮಗ ಯೀಕಿ ನಮ್ಮವ್ವ ಅದಾಳ.. ನಾವು ಯೀಕಿಯ ವಕ್ಕಲು ಮಕ್ಕಳದೀವಿ. ಯೀ ಹುಡುರು ತಮಗ ತಾವ ಮುಂದಕ ಬಂದಾವ.. ಇವು ಸುಟ್ಟು ಭಸುಮ ಆದರೂ ಚಿಂತೆಯಿಲ್ಲ. ಯyಲಕ ಬುಡ್ತಿ.. ವಳೇದು ಕೆಟ್ಟದ್ದನ್ನೆಲ್ಲಾ ತಾಯಿ ನೋಡಿಕೋತಾಳ.. ನಿಮಗ್ಯಾಕ ಹದರ ವುಸಾಬರಿ.. Jಂದು ಜುಲುಮಿಂಯ ಮಾತುಗಳನ್ನಾಡಿದರಂತೆ. ತಾಯಿ ಮ್ಯಾಲ ಭಾರ ಹಾಕಿ ಬಿಡಿರಿ.. ಯಂದು ಜನಸ್ತೋಮವು ಮುಂದಕ ಮುಂದಕ ಜರುಗಿತಂತೆ. ಆಗ ಆ ಹುಡುರು ಮೋಬಯ್ಯನ ಪಾದ ಮುಟ್ಟಿ ಸಣು ಮಾಡಿ ಯತ್ತಿದರೋ ಯಿಲ್ಲವೋ.. ಪಲ್ಲಾ ಕಿಂತು ಸಟಕ್ಕನ ಬ೦ದು ಅವರ ಹೆಗಲ ಮಾಲ ಯಿರಾಜಮಾನಗೊಂಡಿತಂತೆಂಬಲ್ಲಿಗೆ ಸಿವನ್ನಾಮಪಾರೋತಿss ಪತಿ ಹರಹರ ಮಾದೇವಾsss ಯಂದು ಜನಸಾಗರವು ವಕ್ಕೊರಲಿನಿಂದ ಕೂಗಿತೆಂಬಲ್ಲಿಗೆ.. ಫಲಾನ ಗಳಿಗೆಯಂದು ಹೊಂಟ ಆ ದಿಬ್ಬಣವು ಫಲಾನ ಗಳಿಗೆಗೆ ಸರಿಯಾಗಿ... ಸಿವಸಂಕರ ಮಾದೇವಾ... ವಂದು ಹಳ್ಳಿಯಾ, ವಂದು ಮೂರಾ.. ವಂದು ಹೋಬಳಿಯಾ? ಗುಂಡುಕಲ್ಲು, ಯಡಪಿನಕಲ್ಲು ಕಂಬಳಾಪುರ, ಕಸಾಪುರವೇ ಮೊದಲಾದ ಪಂಚಯಿಂಸತಿ ಮೂರುಗಳಲ್ಲೆಲ್ಲಾ ಸುತ್ತಾಡಿ, ಕೆಲವು ನೂರು ವರುರ್ಷಗಳ ಹಿಂದೆ ಶ್ರೀಮದ್ ವ್ಯಾಸರಾಯ ಮುನಿಸೇಷ«ರಿಂದ ಪ್ರತಿಷ್ಠಾಪಿಸಲ್ಪಟ್ಟಿರು ವಂಥ ನೇಮಕಲ್ಲು ಆಂಜನೇಯಸ್ವಾಮಿ ದೇವುಳದ ಪ್ರಾಂಗಣದೊಳಗ ದಣುವು ಆರಿಸಿ ಕೊಳ್ಳುತಲಿದ್ದ ಥಾಮಸು ಮನೋ ಸಾಹೇಬನೆದುರು ಜಾಬಾಲದ ಜಂಗಳರೆಡ್ಡಿ, ಕಂಬಾಳದ ಕರೆಪ್ಪನಾಯ್ಡು, ಹಲಗೇರಿಯ ಮೀರಾರೆಡ್ಡಿ, ಯಂಟಾಪುರದ ಪನ್ನಗ ಸಯನರೆಡ್ಡಿ, ಸಂಗಾಲದ ಜಾಗೀರುಗಾರಿ ಚೆನ್ನಮ್ಮರೇ ಮೊದಲಾದ ಜಮೀಂದಾರರೆಲ್ಲ ತಮ್ಮ ತಮ್ಮ ಮುಖಗಳ ಮ್ಯಾಲ ಬೊಬ್ಬಿಲಿರೆಡ್ಡಿಯ ವುಪಟಳವನ್ನು ಬರೆವುತ ಮಾನತೆಯಿಂದ ಕೂಕಂಡಿದ್ದರು ಅಲ್ಲಲ್ಲಿ... ಕಲೆಟ್ಟರು