ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೭೯ ಕುದುರಡವನ್ನು ತನ್ನ ಕಯ್ಯಾಸ ಮಾಡಿಕೊಂಡಾಳಂತ ತಾನು ಸಾರುತ್ತಿದ್ದುದೇನು? ಹುಲು ನರಮಾನವರಿಂದ ಪೂಜಿಪುನಸ್ಕಾರ ಮಾಡಿಸಿಕೊಳ್ಳಲು ಹಾತೊರೆಯುತ್ತಿರುವಳೂಂತ ತಾನು ಹೇಳುತಲಿದ್ದುದೇನು? ಅವಯ್ಯನಾಡುತಲಿದ್ದ ದಯವ ಸಂಬಂಧೀ ಮಾತುಗಳಿಗ್ಯಾಪಾಟಿ ಕಿಮ್ಮತ್ತುಯಿತ್ತೆಂದರೆ..... ಆಕೆಯ ದಿವ್ಯ ನೆನಪಿಗೆ ಅಪಚಾರ ಮಾಡಬಾರದೆಂದೆಣಿಸಿ ಸದರಿ ಪಟ್ಟಣದ ಯಾವತ್‌ ಮಂದಿಯು ತಮ್ಮ ತಮ್ಮ ಅಂತರಂಗ ಬಹಿರಂಗಗಳನ್ನು ಸಾರಿಸಿ ಚೊಕ್ಕಟಮಾಡುತಲಯ್ತಾರೆ.. ಕುಲ, ಸೀಲ, ಧನ, ರೂಪ, ಯವ್ವನ, ಉದ್ಯ, ತಪಸ್ಸು, ರಾಜ್ಯ ತುಂಬಿವೇ ಮೊದಲಾದ ಅಷ್ಟ ಮದಗಳಿಗಾತೀತರಾಗಿರಲಕಂತ ಪ್ರಯತ್ನ ಮಾಡುತಲಯಾರ.. ಕಾಮಾದಿ ರಿಪುಗಳನ್ನು ಜಯಿಸಲು ಯತ್ನವ ಮಾಡುತಲಾರ.. ಯೇಕವಚನ ಸಂಭೋದನೆಗಳಿಗೆ ವಗ್ಗಿ ಹೋಗಿರುವ ತಮ್ಮ ತಮ್ಮ ನಾಲಗೆಗಳಿಗೆ ಬಹುವಚನದ ಮಹತ್ವವ ಹೇಳಿಕೊಡುತಲಯ್ತಾರೆ, ಮೊಲೆ ಜಮಡುವ ಹೆಣ್ಣು ಗೂಸುಗಳಿಗೂ ಅವ್ವಾ ಅಂಬುತಲಲಾರೆ, ತಮ್ಮ ತಮ್ಮ ಸರೀರಗಳೊಳಗಿನ ಅಟ್ಟಂಬಟ್ಟಾರಣ್ಯಗಳನ್ನು ಅಭಯಾರಣ್ಯವು ಗಳನ್ನಾಗಿ ಮಾಲ್ವಡಿಸಿಕೊಳ್ಳುತಲಯ್ತಾರೆ. ಪ್ರಾತಃಕಾಲದಿ ಯದ್ದು ಅವ್ವಾ ಅಂಬುತಲಯ್ತಾರೆ... ತಾಯಿಯ ನಾಮಸ್ಮರಣೆ ಮಾಡುವ ತಮ್ಮ ತಮ್ಮ ಬಾಯಿಗಳು ಸುಚಿ ಸುಬ್ರವಾಗಿರಬೇಕೆಂಬ ವುದ್ದೇಸದಿಂದ ಅತ್ತಿ, ಆಲ, ವುತ್ತರಾಣಿ, ನೇರಲ, ಬೇವು ಮುಂತಾದ ಜಾತಿಯ ಕಾಷ«ಕಡ್ಡಿಗಳಿಂದ ದಂತ ಧಾವನ ಮಾಡಿಕೊಳ್ಳುತಲಯ್ತಾರೆ. ಮತ್ತೂ ಸಾಣಾದಿ ಕರುಮಗಳನ್ನೂ ಸಹ.... ಯಿತ್ತ ಕರಗಲ್ಲಿಗಷ್ಟು ದೂರಯಿದ್ದ ಹಾಸು ಬಂಡೆಯ ಮ್ಯಾಲ ಕೆತ್ತಲಕಂತ ಸಿಲುಪಿ ಮಾಂಯಾಚಾರಿಂರು ತಾಯಿಯ ಪಾದಗಳ ನಕ್ಷೆಯನ್ನು ಬಿಡಿಸುತಲಿರುವಾಗ್ಗೆ ಪಟ್ಟಣ ಸೋಮಿಗಳು, ದಯವಸ್ತರು, ಹಿರೀಕರು ಜಡೆತಾತನ ನೇತ್ರುತ್ವದಲ್ಲಿ ತಾಯಿ ಹೊಳೆಗೆ ಹೊಂಡುವ ಕಾರಕ್ರಮದ ರೂಪುರೇಷೆ ತಯಾರಿಸುತಯಿರುವಾಗ್ಗೆ, ತಾಯಿಯ ಕಿವಿಗಿಂಪು ಮಾಡಲಕಂತ ಪದ ಹಾಡುವವರೆಲ್ಲವರೆ? ತಾಯಿಗೆ ಸೆಕೆ ಆಗದಿರಲಂತ ಚಮರಿಯಿಂದ ಗಾಳಿ ಬೀಸುವವರು ಯಲ್ಲವರೆ? ತಾಯಿಯನು ಜುವ್ವಾಲಿಯೊಳಗ ಮಲಗ ಹಾಕಿ ಲೋಳ್ಕೊಳ್ಳಾಯಿ ಯಂದು ತೂಗಿ ಮಲಗಿಸುವವರು ಯಲ್ಲವರೆ? ಮಲಗಿರುವ ತಾಯಿಯನ್ನು ಯಚ್ಚರಿಸುವವರು ಯಲ್ಲವರೆ? ಕಾಚು ಸುಣ್ಣ ಹಚ್ಚಿದ ಯಲೆಯ