ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೧೮೭

ಯಂಬುತಲಿದ್ದನೋ, ತನ್ನ ಗಂಜಲಿ ಗಾಗಿ ಯಾವಾತನು
ಅಡ್ಡಬುರಿಸುತಲಿದ್ದನೋ, ಯಾವಾತನು ತನ್ನ ಕಾಲ ಕೆಳಗೆ ಕಸದೋಪಾದಿ
ಯಲ್ಲಿ ಬಿದ್ದುರತಿಲಿದ್ದನೋ ಅಂಥವನ ಸರೀರದೊಳಗ ಸಾಂಬವಿಯ ಸಯನ
ಮಂದಿರ ಯಿರುವುದೆಂಬ ಮಹಾ ಗಾನದ ಕಾರಣಕ ರಾಜಮಾತೆಯಾದ
ತಾನು ಅವಯ್ಯನ ಪಾದಕ ಮುಟ್ಟಿ ಸಣು ಮಾಡುವುದಾದರೂ ಹೆಂಗ?
ಮಾಡದಿದ್ದರೆ ಸಿಟ್ಟಾಗುವ ಸಾಂಬವಿಯನ್ನು ತರ್ಮಣಿ ಮಾಡುವುದಾದರೂ ಹೆಂಗ?
ಯೀಗ ವಾಪಾಸಾಗಿಬಿಟ್ಟಲ್ಲಿ ಪಟ್ಟಣದ ಪ್ರಜೆಗಳ ದ್ರುಸ್ಟೀಲಿ ತಾನು
ಅಪಮವುಲ್ಯಗೊಂಡು ಬಿಡುವೆನೇನು? ಚಲಾವಣೀನ ಕಳಕೊಂಡು ಬಿಡವೆನೇನು?
ನಾಕಾರು ಮಂದಿ ನಾಲಗೇನ ಹಾರವಾಗುವನೇನು? ಹಿಂಗ ss
ಜಾವಜಾವಕ್ಕೊಂದೊಂದು ಯಿದದಲ್ಲಿ ಯೋಚನೆ ಮಾಡುತ.. ತನ್ನ ಸರೀರದ
ಅಂತರಂಗ ಬಹಿರಂಗಗಳಲ್ಲಿ ವರದು ಕಿಲುಬಿಡಿದಿದ್ದ ರಾಜಸತ್ತೆಯ
ಡಂಭಾಚಾರವನ್ನು ವುತಾರ ಮಾಡಲು ಮಿಕ್ಕು ಯಿಫಲ ಪ್ರಯತ್ನಂಗಳ
ಮಾಡುತಲಿದ್ದಳು. ಯಾಕ ತಾನು ರಾಜಮಾರಾಜರ ಹೊಟೇಲಿ ಹುಟ್ಟಿದೆನೋ?
ಯಾಕ ತಾನು ರಾಜಮಾರಾಜರ ಕನ್ನ ಹಿಡಿದೆನೋ? ಯಾಕ ತಾನು
ಅರಮನೆಯ ಸುಪ್ಪತ್ತಿಗೆ ಮ್ಯಾಲ ಬೆಳೆದೆನೋ? ಯಾಕ ತಾನು ಭಂಗಾರದ
ತಳಿಗೆ ಮ್ಯಾಲ ಬೋನ ನೀಡಿಸಿಕೊಂಡು ವುಂಬುತ್ತಿದ್ದೆನೋ...? ಹಿಂಗss
ಹುಟ್ಟಿಸಿದ್ದು... ಹಿಂಗs ಬೆಳೆಸಿದ್ದು... ಹಿಂಗs ತರತಮ ಯೋಚನೆ ಮಾಡೋ
ಬುದ್ದೀನ ಕೊಟ್ಟಿದ್ದು ನಿನ ತಪ್ಪು ತಾಯಿ..? ಯಿದೆನೆಲ್ಲ ಹೋಗಲಾಡಿಸುವುದು,
ಅದನ್ನೆಲ್ಲ ಹೋಗಲಾಡಿಸುವುದು ತಾಯಿಯ ಕರತವ್ಯಾ ಅದು ಯೀಗಲುs
ಅದನ್ನು ಕಳೆದು ಮಾಮೂಲು ಮನುಳನ್ನು ಮಾಡಿದೀ ಅಂದರ ಆಗಲ
ಅದನ್ನು ತಾನು ಸಿರಸಾವಹಿಸಿ ಪಾಲನ ಮಾಡುತೇನವ್ವಾ ಯಂದನಕಂತ ಅಲ್ಲೇ
ವಂದು ಕಡೇಕ ಯೇಟೋ ಹೊತ್ತಿನ ತನಕ ತಾನು ಕೂಕಂಡೇ ಯಿದ್ದ ಳೆಂಬಲ್ಲಿಗೆ
ಸಿವಸಂಕರ ಮಾದೇವss

****

ಬಾಲಮೀರಾರೆಡ್ಡಿ ಅತ್ತ ವುರವ ಕೊಂಡದ ವಳಿತದೊಳಗಿದ್ದ
ಗೊನೆಗೊಂಡ್ಲಯಂಬ ಸಮುಸ್ಥಾನದ ವುಸ್ತುವಾರಿಯನ್ನು ಕುಂಪಣಿ ಸರಕಾರದ
ಬೆಂಬಲದಿಂದ ಹಿಡಿದಿದ್ದನು. ಸದರಿ ಸಮುಸ್ಥಾನ
ಮೋಡೋಣಿಗೊಬ್ಬಬ್ಬರಂತೆಯಿದ್ದ ಸಾಮಂತರೊಂದೇ ಅಲ್ಲದೆ ತನ್ನ ಸೊಂತ