ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೧೯೭


ದೇವತೆಗಳು ನಸಿಗ್ಗೀಲೆ ಹೊಂಟಿದ್ದರು ಕುದುರೆಡವಲ್ಲಯ್ತೆ.. ಕುದುರೆಡವೆಲ್ಲಯ್ತೆ
ಯಂದು ಕೇಳಿಕಂತ.. ತಾವು ಹೊಂಟಿರೋ ಪರಿಣಾಮವಾಗಿ ತಮ್ಮ ತಮ್ಮ
ಮೂರುಗಳು ಅನಾಥವಾಗುತಾವಲ್ಲ.. ತಮ್ಮ ತಮ್ಮ ದಿಕ್ಕುಗಳು
ಅನಾಥವಾಗುತಾವಲ್ಲ. ತಾವು ಕರನಾಟ ದೇಸಕ್ಕ ಗುಳೇ ಹೊಂಟು ಬಂದಿರುವ
ಪರಿಣಾಮವಾಗಿ ತಮಕೊಂಗ ನಾಡೇ ಅನಾಥವಾಗತಯ್ತಲ್ಲಾ... ವಬ್ಬರಿಗೊಬ್ಬರು
ನಮ ಮೂರು ಪಾಡs ತಮ ಮೂರು ಪಾಡs ಯಂದು ವಾದಾಡಿಕೋತ
ಕಾಲು ಹರಿಯೋ ಹಂಗ ನಡೀತಾರ. ಆದರ ಕುದುರೆಡವು ಯಂಬ ಹೆಸರಿನ
ಮೂರು ಕಣ್ಣಿಗೆ ಬೀಳುತಾಯಿಲ್ಲ... ಅವರನ್ನು ಕೇಳಿದರ ಹಂಗs ಹ್ವಾಗಿರಿ
ಅಮುತಾರ.. ಯಿವರನ್ನು ಕೇಳಿದರ ಹಿಂಗss ಹ್ವಾಗಿರಿ ಅಮುತಾರ..
ಯಲ್ಲಿದ್ದೀತಪ್ಪಾ.. ಕುದುರೆಡವು? ಯಾವ ಕಡೇಕ ಯಿದ್ದೀ ತಪ್ಪಾ ಕುದುರೆಡವು?
ಯಿನ್ನೇಸು ದೂರ ಯಿದ್ದೀತಪ್ಪಾ ಕುದುರೆಡವು? ತಮ್ಮ ಕಾಲಿಗಟೆವಲ್ಲದಲ್ಲಾ
ಕುದುರೆಡವು? ತಮ್ಮ ಕಣ್ಣಿಗೆಟಕುವಲ್ಲದಲ್ಲಾ ಕುದುರೆಡವು.. ಮಾತಾಯಿ
ಸಾಂಬವಿಯು, ಮಾ ಮಾಟಗಾರ್ತಿ ಸಾಂಬವಿಯು ಕುದುರೆಡವು ಯಂಬ
ಪಟ್ಟಣವನ್ನು ಸುರುಳಿs ಸುತ್ತಿ ಬಗಲಾಗ ಯಿಟುಕೊಂಡು ದೇವಲೋಕದ ಕಡೆಕ
ಹೊತಾ ಹೋಗಿರುವಳೋ ಹಂಗೆ ? ಯಂದು ಮುಂತಾಗಿ
ಗಳಿಗ್ಗಳಿಗೊಂದೊಂದು ಸಲ ಮಾತಾಡಿಕೊಳ್ಳುತ.. ಜಾವ ಜಾವಕ್ಕೊಂದೊಂದು
ಸಲ ಯಸನ ಮಾಡುತ.. ಮರ ಬಂದಲ್ಲಿ ದಣುವಾರಿಸಿಕೊಳ್ಳುತ.. ಹಣ್ಣು
ಹಂಪಲ ಕಂಡಲ್ಲಿ ತಿಂದು ಹಸಿವೆ ತೀರಿಸಿಕೊಳ್ಳುತ.. ನೀರು ಕಂಡಲ್ಲಿ ಕುಡಿದು
ಬಾಯಾರಿಸಿಕೊಳ್ಳುತ...
ಅತ್ತ ಕುದುರೆಡವು ಪಟ್ಟಣದ ತುಂಬೆಲ್ಲ ಮಡಿಯುಡಿತನವು.. ಸಖೇದ
ಸಂಭರಮಾಶ್ಚರ್ಯವು.. ಆನಂದೋದ್ಗಾರವು.. ತಾಯಿ ಪಟ್ಟಣದೊಳಗೆ ಪಾದ
ಮೂಡಿಸುವಳೋ ಯಿಲ್ಲಮೋ ಯಂಬ ಭಯ ಆತಂಕವು.. ಆಕೇನ
ಸಂಪ್ರೀತಿಗೊಳಿಸಲಕೆಂದು.. ಆಕೆಯ ಮುನುಸನ್ನು ತಮಣಿ ಮಾಡಲಕೆಂದು..
ಆಕೇನ ಬಗೆಬಗೇಲಿ ಮೊಲಯಿಸಲಕೆಂದು..ಆಕೆಯ ಕ್ರುಪಾಕಟಾಕ್ಷಕ
ಭಾಜನರಾಗಲಕೆಂದು.. ಆಕೆಯ ಪಾದಗಳ ಬುಡಕ ಕಡಕೊಂಡು ಬೀಳಲಕೆಂದು..
ಆಕೆಯ ಕರುಣೆಯ ಕಡಲೊಳಗಿಂದ ವಂದು ಬಿಂದು ಪಡೆದು ಧನ್ಯರಾಗಲಕೆಂದು..
ಸದರಿ ಪಟ್ಟಣದ ಮಂದಿ ವಂದೇ ಅಲ್ಲ ಸಿವನೇ...
ಆಜು ಬಾಜೂಕಿದ್ದ ಹಳ್ಳಿ ಹಳ್ಳಿ ಗ್ರಾಮ ಗೀಮ ಹೋಬಳಿ