ಈ ಪುಟವನ್ನು ಪ್ರಕಟಿಸಲಾಗಿದೆ

೨೦೨

ಅರಮನೆ


ಬೆತ್ತಲರಾಯ.. ಆತನ ಮಗ ಅಂಬೇರಾಯ, ಆತನ ಮಗ ತುಂಬೇರಾಯ..
ತುಂಬೆರಾಯನ ಹೊಟ್ಟೆಯಲ್ಲಿ ಗವುರಸಂದ್ರಮಾರೆಮ್ಮನ ದಯದಿಂದಾಗಿ ವಂದು
ಕೂಸು ಜೆನಿಸಿತು. ಅದು ಮುಂದ ಕಾಡುಗೊಲ್ಲರೀರಯ್ಯ ಎಂಬ ಹೆಸರಲ್ಲಿ
ಲೋಕ ಪ್ರಸಿದ್ಧವಾಯಿತು. ಆ ಮಾನುಭಾವನೇ ಯೇವಯ್ಯನು.. ಯೀವಯ್ಯಗೂ
ಮಕ್ಕಳ ಫಲ ಯಿರಲಿಲ್ಲ.. ಯಾಕ ತಾಯಿ ನನಗೆ ಮಕ್ಕಳ ಫಲಯಿಲ್ಲ ಯಂದು
ಗವುರಸಂದ್ರಮಾರಮ್ಮನ್ನ ಕೇಳಿದ್ದಕ್ಕೆ ಆ ತಾಯಿಯು ವಂದು ಮುಷಿ «
ಅಲಸಂದಿಕಾಳನ್ನು ಕೊಡುತ ಮಗನೇ.. ಯಿವನ್ನೊಯ್ದು ಮಣ್ಣಿನ ಚಟಿಗ್ಯಾಗ
ಮೂರು ದಿವಸ ನೆನಿಡಪ್ಪಾ. ನಾಕನೇ ದಿವಸ ಮುಂಜಾನೆ ತೆಗೆದು ನೋಡಪ್ಪಾ
ಯಂದು ಅಪ್ಪಣೆ ಕೊಡಿಸಿದಳು. ಅದರಂತೆ ಮಾಡಿ ನೋಡುತ್ತಾನೆ..
ಚಟಗೀವಳಾಗೆ ಮುದ್ದಾದ ಹೆಣ್ಣು ಕೂಸೊಂದು ಅಲಸಂದೆ ಕಾಳೊಳಗ
ಮೊಳಕೆಯೊಡೆದಂತೆ ಆಡುತಲಿತ್ತು. ಅದಕ್ಕೆ ಜೆಲುಮನಾಮ ಮಾರೆಮ್ಮ
ಯಂಬುದಿತ್ತು. ವಂದೊಂದು ವರುಷಕ ವಂದೊದು ಹೆಸರು ಮುಡಕೋತ
ಬೆಳೆದು ದೊಡ್ಡದಾತು. ಆಕೆಯ ಮುಂದಿನ ಕಥಿ ಸರುವರಿಗೂ ಗೊತ್ತಿದ್ದs
ಅಯ್ತೆ. ಕಾಟಯ್ಯ ನಾಯಕನೆಂಬುವವ ಯೇನವನೆ.. ಯಿವನ ತಾಯಿಯೇ
ಆಕೆ.. ಮಾರಮ್ಮನ ಸಾಪ ಹೆಂಗೆಂಗಿತ್ತೋ ಹಂಗಂಗss ನಡೀತು.. ನಮ್ಮ
ನಾಯಕಂಗೆ ಮಗಳೆಂಬ ಮಮಕಾರಯಿಲ್ಲ.. ಮೊಮ್ಮಗ ಯಂಬ
ಮಮಕಾರಯಿಲ್ಲ.. ಆದಿಸುತಿಯು ಕಾಲಾನುಕಾಲಕ್ಕೆ ಯತ್ತಿದ ಸಾವುರಾರು
ಅವತಾರಗಳಲ್ಲಿ ವಬ್ದಾಕೆಯೂ, ಸಾವುರ ವಕ್ಕಲ ವಡತಿಯೂ, ಆದ
ಗವುರಸಂದ್ರಮಾರೆಮ್ಮ ಮೊಮ್ಮೊಂದಿವಸ ನಾಯಕನ ಕಣಸೊಳಗ ಮೂಡಿ
ಕಾಣಿಸಿಕೊಂಡು “ಮಗ ಯಚ್ಚರಾಗಪ್ಪ.” ಯಂದು ಯಬ್ಬಿಸಿ ತಾನು ಫಲಾನ
ಮೂರಲ್ಲಿ, ಫಲಾನ ಸರೀರದೊಳಗ ವಸ್ತಿ ಮಾಡಿರುವ ಸಾಂಬವಿಯ ಹೊಳೆಗೆ
ಹೋಂಡಿಸೋ ಕಾರ್ಯ ನಡೆಸಿಕೊಡಬೇಕೆಂದೂ, ತಾನಲ್ಲಿರೋ ಮಟ ಸೇವೆ
ಮಾಡಿಕೊಂಡಿರ ತಕ್ಕದೆಂದೂ ಆಗ್ನೆ ಮಾಡಿದಳು.. ಅದರಂತೆ ನಾಯಕನು
ನೂರು ಹರದಾರಿ ಸವೆಸಿ ಬಂದಿರುವನೆಂದೂ..”
ಅದನ್ನು ಕೇಳಿ ಭಕುತಾದಿ ಮಂದಿ ವುಘೇ ವುಫೇ ಅಂತು.
ಗವುರಸಂದ್ರಮಾರೆಮ್ಮ ಭೋಪರಾಕ್, ಸಿವನ್ನಾಮ ಪಾರೋತಿಪತಿ ಹರಹರ
ಮಾದೇವ ಯಂದು ಕೊನೆಯಾಡಿತು. ನೂರಾರು ಮಂದಿ ಜೋಗತೇರ
ಕಂಠದಿಂದ ಸಾಂಬವಿ, ಮಾರೆಮ್ಮ ಅಕ್ಕ ತಂಗೇರಾಗಿ ವಡಮೂಡಿ ನಾದದ