ಈ ಪುಟವನ್ನು ಪ್ರಕಟಿಸಲಾಗಿದೆ



ಅರಮನೆ

೨೦೫


ಬುಡುಬುಡುಕ್ಯೋರು ಯಿದ್ದರು. ಅವರೆಲ್ಲ ಪ್ರತಿಯೊಂದು ಗ್ರಾಮಕ್ಕೆ ಚದುರಿ
ಪ್ರತಿಯೊಂದು ಹಾದಿಗೆ ಅಡರಿ ಹತ್ತು ಹಲವು ರೂಪಕಗಳ ದ್ವಾರ ಅನ್ನದ
ಮಹತ್ವವನ್ನು, ಅವುಸಧದ ಮಹತ್ವವನ್ನು, ಅಕ್ಕಸರದ ಮಹತ್ವವನ್ನು ಸಾರಿ
ಹೇಳಲೆತ್ನಿಸಿದವರಾದರೂ ವಬ್ಬೇ ವಬ್ಬ ಪ್ರೇಕ್ಷಕನಾಗಲೀ, ವಬ್ಬೇ ವಬ್ಬ
ಸ್ರವಣಕನಾಗಲೇ ಬಾರದ ಪರಿಣಾಮವಾಗಿ ತಮ್ಮ ಮನಸ್ಸೆಂಬ
ಪೆಟಾರಿಯೊಳಗೇನುಂಟು ಯಂಬುದರ ಗುಟ್ಟು ಬಿಟ್ಟುಕೊಡದ ಪರಿಣಾಮವಾಗಿ,
ಕೆಕ್ಕರಿಸಿ ನೋಡಿದ ಪರಿಣಾಮವಾಗಿ, ಛೀ ಥೂ ಯಂದು ವುಗುಳಿದ
ಪರಿಣಾಮವಾಗಿ....
ಮುನುಸೋಬಯ್ಯನ ಪ್ರಯತ್ನಗಳು ಹಿಂಗ ಬಂದು ಹಂಗ ಹೋದ
ಬೆನ್ನಲ್ಲೆ ಬೊಮ್ಮಲಾಟ ಪಲ್ಲಿಯಿಂದ ತೊಗಲುಗೊಂಬಿ ಆಡಿಸೋರು,
ಬುರ್ರಂಪಲ್ಲಿಯಿಂದ ಬುರ್ರಕಥಾ ಹಾಡುಗಾರರು ಬಂದು ಸಾವುರಾರು ಜನರು
ನೋಡುವಂತೆ, ಸಾವುರಾರು ಜನರು ಕೇಳುವಂತೆ ಗೊಂಬಿಗಳ ಕುಣಿಸುತಲಿದ್ದರು,
ಪದಗಳನು ಕಾಣುಕುಣುದು ಹಾಡುತಲಿದ್ದರು. ಜನರು ನೋಡು ನೋಡುತಾ
ಪರಂಗಿ ಸಕರಾಕ್ಕೆ ಧಿಕ್ಕಾರ ಯಂದು ಕೂಗುತಲಿದ್ದರು, ಬೊಬ್ಬಿಲಿನಾಗಿರೆಡ್ಡಿಗಾರಿಕಿ
ಜಯವಾಗಲಿ ಯಂದು ಜಯಕಾರ ಹಾಕುತಲಿದ್ದರು.. ಆ ಕಲಾಕಾರರು ಮೊದಲೇ
ಯಿಜಯನಗರದಧಿಪತಿ ಶ್ರೀ ಕ್ರುಸ್ನದೇವರಾಯನ ಕ್ರುವಾಪೋಷಿತ
ಆಸ್ಥಾನವಂದಿಗನಾಗಿದ್ದ ಬೊಮ್ಮಲಾಟದ ಪಿತಾಮಹ ಬೊಮ್ಮಯ್ಯನ ವಂಸರುಕ್ಷದ
ಮಂದಿ. ಆ ಕಲಾಯಿದರು ಮೊದಲೇ ಮೋರ೦ಗಲ್ಲಾದಿ ಪತಿ
ಪ್ರತಾಪರುದ್ರಗಜಪತಿರಾಯನ ಕ್ರುವಾಸೋಷಿತ ಆಸ್ಥಾನವಂದಿಗನಾಗಿದ್ದ ಬುರ್ರಕಥಾ
ಪಿತಾಮಹ ಬುರ್ರಬೆಮ್ಮನ ವಂಸರುಕ್ಷದ ಮಂದಿ, ಆ ಕಲಾಯಿದರ ಪೂರುವಿಕರು
ತುರುಕರ ದಾಳಿ ಕ್ರುತ್ಯದ ಯಿರುದ್ದ ತಮ್ಮ ಕಲೆಯನ್ನು ಝಳಪಿಸಿ
ಸೊರ್ಗಸ್ಥರಾಗಿದ್ದರು. ಯೀಗ ಪರಂಗಿಯವರ ಯಿರುದ್ಧ ತಿರುಗಿ ಬಿದ್ದವರೆ..
ಬೊಬ್ಬಲಿನಾಗಿರೆಡ್ಡಿಯಂಥ ಪರೋಪಕಾರಿ ಯೀರನನ್ನು ಬೆನ್ನಿಗೆ ಕಟ್ಟಿಕೊಂಡವರೆ,
ನಾಲಗೆ ಮಾಲ ವಟ್ಟಿಕೊಂಡವರೆ.. ಅವರ ದ್ರುಸ್ಟೀಲಿ ಬೊಬ್ಬಿಲಿನಾಗಿರೆಡ್ಡಿ
ಯಾರಪಾ ಅಂದರ.. ಥಾಮಸು ಮನ್ರೋ ಯಾರಪಾ ಅಂದರ..
ಪರಮಾತುಮಾ... ಭೂಲೋಕದೊಳಗ ಅನ್ಯಾಯ ಹೆಚ್ಚಲಕ ಹತ್ತಯಿತ್ಯೆ..
ದೇವತೆಗಳಿಂದ ಹತ್ಯೆಗೀಡಾದ ರಕ್ಕಸರು ರೆಡ್ಡಿ ಪಟುವಾರಿ, ಜಮೀಂದಾರಿ,
ಜಾಗೀರುದಾರಿ, ಪಾಳೇಗಾಂಡಲುಗಳಾಗಿ ಪ್ರಜೆಗಳಿಗೆ ಕಂಟಕಪ್ರಾಯರಾಗಿದ್ದಾರೈ...