ಈ ಪುಟವನ್ನು ಪರಿಶೀಲಿಸಲಾಗಿದೆ

xxiv


ಕೃಷಿ ಕಾರ್ಮಿಕರು. ಒಂದು ಹೊತ್ತು ಊಟಕ್ಕೂ ಪರದಾಡುತ್ತಿರುವವರು. ಅವರ
ಕುಟುಂಬ ತಿಂಗಳಿಗೆ ಅರ್ದ ಲೀಟರು ಖಾದ್ಯ ತೈಲ ಬಳಸಿದರೆ ಹೆಚ್ಚು. ವೀರಶೈವ
ಪಂಚಪೀಠಗಳಲ್ಲಿ ಒಂದೆನಿಸಿದ ಉಜ್ಜಿನಿ ಮರುಳಸಿದ್ಧೇಶ್ವರ ಜಾತ್ರಾಮಹೋತ್ಸವ
ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಿರುವುದಷ್ಟೆ.. ಈ ಭಾಗದ ಅಂದರೆ
ಕುಂತಳ ನಾಡಿನ ಅನೇಕ ಪುಣ್ಯಕ್ಷೇತ್ರಗಳಿಗೆ ಈ ಭಾಗದ ಪಾಳ್ಳೇಗಾರರು ಭಕ್ತರಷ್ಟೇ
ಅಲ್ಲದೆ ಮಹಾಪೋಷಕರೂ ಆಗಿದ್ದರೆಂಬುದು ಈಗ ಇತಿಹಾಸ. ಜಾತ್ರಾಸಂದರ್ಭದಲ್ಲಿ
ಉಜ್ಜಿನಿಯ ದೇವಾಲಯದ ಶಿಖರಕ್ಕೆ ತೈಲಾಭಿಷೇಕ ನಡೆಯುವುದು. ಅದಕ್ಕೆ
ಜರಿಮಲೆಯ ಪಾಳ್ಳೆಗಾರರು ಮಣಗಟ್ಟಲೆ ಎಣ್ಣೆ ತಂದು ಅಭಿಷೇಕ ಮಾಡಿದ
ನಂತರವೇ ಕಾರ್ಯಕ್ರಮ ವಿದ್ಯುಕ್ತವಾಗಿ ಆರಂಭವಾಗುವುದು. ಈಗಲೂ
ಜರಿಮಲೆಯ ಪಾಳ್ಳೆಗಾರರ ವಂಶಸ್ಥರು ತಮ್ಮ ಬಡತನ ಲೆಕ್ಕಿಸದೆ ಸಾಲಸೋಲ
ಮಾಡಿ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತಿರುವರು.. ಆಗ್ರಾದಲ್ಲಿ
ಮೊಘಲ್ ಚಕ್ರವರ್ತಿ ಬಹದ್ದೂರ್ ಷಾ ಜಫರ್‌ನ ವಂಶಸ್ಥರೆಂದು ಹೇಳಿಕೊಳ್ಳುತ್ತಿರುವ
ಅನೇಕ ಚಿಕ್ಕಪುಟ್ಟ ಕೆಲಸ ಮಾಡಿ ಬದುಕುತ್ತಿರುವರು.. ಅಕ್ಟರ್ ಭಾಷಾ (ಬಾದಷಾ)
ಎಂಬ ರಿಕ್ಷಾವಾಲಾನೊಂದಿಗೆ ಅಲ್ಲಿ ತಿರುಗಾಡಿದ್ದೇನೆ.. ಬುಂದೇಲಖಂಡದ ಛತ್ತರ
ಸಾಲ್‌ನ ವಂಶಸ್ಥರು ದೆಹಲಿಯ ರೇಲ್ವೆ ನಿಲ್ದಾಣದಲ್ಲಿ ಕೂಲಿಗಳಾಗಿರು ವುದನ್ನು
ನೋಡಿದ್ದೇನೆ. ಇಂಥ ಉದಾಹರಣೆಗಳು ಅನೇಕ. ಈ ಒಡನಾಟ, ಈ ಅನುಭವ
ನಿನ್ನೆ ಮೊನ್ನೆಯದಲ್ಲ.. ಎರಡು ಮೂರು ದಶಕಗಳಷ್ಟು ಹಳೆಯದು. ತಮ್ಮ ಇತಿಹಾಸ
ಸಂಬಂಧೀ ನೆನಪು ಗಳನ್ನು ಸ್ಥಿರಾಸ್ತಿ ಎಂಬಂತೆ ಕಾಪಾಡಿಕೊಂಡು ಬಂದಿರುವ
ಇವರವರು ಸ್ವಾತಂತ್ರ್ಯಪೂರ್ವವಾಗಿ ಬ್ರಿಟಿಷರನ್ನೂ, ಸ್ವಾತಂತ್ರ್ಯೋತ್ತರವಾಗಿ
ಮುಖ್ಯವಾಗಿ ದಿವಂಗತ ಇಂದಿರಾಗಾಂಧಿಯವರನ್ನೂ ಕೇಳಿದವ ರೆದುರು
ದೂಷಿಸುತ್ತಿರುವರು.
ದೇವರಾಜ ತನ್ನ ರಾಜಾವಳಿ ಕಥಾಸಾರದೊಳಗೆ ಹೇಳುವಂತೆ ಯಾರಷ್ಟಕ್ಕೆ
ಅವರೇ ತಮ್ಮನ್ನು ತಾವು ರಾಜರೆಂದು ಘೋಷಿಸಿಕೊಂಡಿದ್ದರು. ಜಿಸ್ ಕಿ ಲಾಠಿ
ಉಸ್ ಕೀ ಬೈಂಸ್ ಅಂತಾರಲ್ಲ ಹಾಗೆ.. ಕರ್ನಾಟಕದ ಪಾಳೇಗಾರರಿಗಿಂತ
ಆಂಧ್ರಪ್ರದೇಶದಲ್ಲಿ (ಮುಖ್ಯವಾಗಿ ರಾಯಲ ಸೀಮಾದಲ್ಲಿ ಅಂದರೆ ಕಡಪಾ,
ಕರ್ನೂಲು, ಅನಂತಪುರ ಜಿಲ್ಲೆಗಳಲ್ಲಿ) ಪಾಳೇಗಾರರು ಹೆಚ್ಚು ಶೋಷಕರಾಗಿದ್ದರು.
ಕಡಪಾ ಜಿಲ್ಲೆಯಲ್ಲಿ ಒಂದರಲ್ಲಿಯೇ ಎಂಬತ್ತಕ್ಕೂ ಹೆಚ್ಚು ಪಾಳೆಪಟ್ಟುಗಳಿದ್ದವು.
ಟಿಪ್ಪು ಮರಣಾನಂತರ ಹೈದರಾಬಾದಿನ ನಿಜಾಂ ಇವರನ್ನು ನಿಯಂತ್ರಿಸಲು
ವಿಫಲನಾದ. ಕಡಪ ಜಿಲ್ಲೆಯನ್ನು ಸಾಲಿಯಾನ ಎರಡು ಲಕ್ಷ ಪೊಗೋಡಾಗಳಂತೆ