ಈ ಪುಟವನ್ನು ಪ್ರಕಟಿಸಲಾಗಿದೆ

೨೧೦

ಅರಮನೆ


ಅಪ್ಪಂದಿರ ಸರೀರಗಳೊಳಗಿನ ವುಪ್ಪು ಹುಳಿ ಖಾರ ಸತ್ವ ಕಳೆದುಕೊಂಡಿರಲಿಲ್ಲ,
ಚಿನ್ನಾಸಾನಿ ಮ್ಯಾಲಣ ಪಾರುಪತ್ಯೆ ಯಿಷಯದಲ್ಲಿ ಯಷ್ಟೋ ತಂದೆ ಮಕ್ಕಳ
ನಡುವೆ ಮಾತಿಗೆ ಮಾತು ನಡೆಯದೆ ಯಿರಲಿಲ್ಲ, ಕೆಲವು ಕಡೆ ಜಗಳ
ಹೊಡೆದಾಟ ನಡೆದು ಪಿತ್ರುತ್ವಕ್ಕೆ ಕಳಂಕ ತಗುಲದೆ ಯಿರಲಿಲ್ಲ, ಮದುವೆ ಅಂಬುದು
ಆದಲ್ಲಿ ಆಕೆಯನ್ನೇ ಆಗುವುದೆಂದು ಘೋರ ಪ್ರತಿಗ್ನೆ ಮಾಡಿ ನಿರಸನ
ರೊತಾರೂಢರಾದವರೆಷ್ಟೋ? ಮನೆ ಮಠ ತೊರೆದು ತಿಲ್ಲಾನ ತಾಯಕ್ಕನ
ಚಂದುಳ್ಳ ಮನೆಗನತಿದೂರದಲ್ಲಿ ಕುಂಡಿಗೆ ಗೆದ್ದಲು ಹತ್ತುವಂತೆ
ಕೂಕಂಡವರೆಷ್ಟೋ?
ಯಿದೇನೀ ಮುಂಡೇವು... ತಮ್ಮ ಮನಿ ಕಡೇಕ ಪಿಳಿ ಪಿಳಿ ನೋಡಿಕೋತ
ಕೂಕಂಡುಬಿಟ್ಟಿರುವವಲ್ಲಾ ಯಂದು ತಾಯಕ್ಕ ಅಂಥವುಗಳನ್ನಲ್ಲಿಂದ ವಕ್ಕಲೆಬ್ಬಿಸುವ
ಸಲುವಾಗಿ ನಾನಾ ನಮೂನಿ ಸಾಹಸಗಳನ್ನು ಪ್ರದರ್ಸಿಸಿ ಯಿಫಲಳಾದಳೆಂಬುದು
ಹಳೆಯ ಯಿಷಯ. ಬುಗಡಿ ನೀಲಕಂಠಪ್ಪನನ್ನು ಕಳುವಿ ಆದರ್ಸ ದಾಂಪತ್ಯದ
ರೂವಾರಿಯಾದ ರಾಯನಿಗೆ ದೂರು ಸಲ್ಲಿಸಿದ್ದೂ ಹಳೆಯ ಯಿಷಯ. ತನ್ನ
ಯೋಜನೆ ಯಿಷ್ಟೊಂದು ಯಿಷಮ ಪಡೆಯಬೌದೆಂದು ಯೀ ಮೊದಲು
ಯಣಿಸಿರದಿದ್ದ ರಾಯನು ಪಟ್ಟಾಗಳ ಕಡತ ತರಿಸಿಕೊಂಡು ಯಾರ್ಯಾರ ಮನೆ
ಯಷ್ಟೆಷ್ಟು ಯಿಸ್ತೀರ್ಣವುಂಟು ಯಂಬುದನ್ನು ಪರಿಸೀಲನೆ ಮಾಡಿ ಹರೇದ
ಹುಡುರು ನಿರಸನ ರೂತ ಸ್ವೀಕಾರ ಮಾಡಿ ತಪಸ್ಚರೈಯಲ್ಲಿ ತೊಡಗಿರುವುದು
ಪರಂಪೂಕು ಜಾಗದಲ್ಲಿ ಯಂಬ ನಿರ್ಣಯಕ ಬಂದು ದೂರಿನ ಯಡಮಗ್ಗುಲು
ಷರಾ ಬರೆದನು. ಸದರಿ ಪಟ್ಟಣದ ತಾರುಣ್ಯ ಪರಪಂಚದೊಳಗ
ಯಿಂಥಾದ್ದೊಂದು ಚಂಡಮಾರುತವನ್ನೆಬ್ಬಿಸಿರುವ ಚಿನ್ನಾಸಾನಿಂಯ ಬಗ್ಗೆ
ಅಯಿವತ್ತರ ಆಜುಬಾಜಿನಲ್ಲಿದ್ದ ತಾನೂ ಕುತೂಹಲ ತಳೆದನು. ಆಯಾ
ಪರಂಪೂಕು ಜಾಗವನ್ನು ಮುದ್ದಾಂ ಪರಿಸೀಲಿಸುವ ನೆಪದಲ್ಲಿ ಅವಯ್ಯನು
ಸಾಸ್ತ್ರೀಯವಾಗಿ ವುಡುಪು ಧರಿಸಿ ಫಲಾನ ಮೋಣಿಯನ್ನು ಪ್ರವೇಸ ಮಾಡಿದನು.
ಯೇನರಯ್ಯಾ? ಯಾಕರಯ್ಯಾ? ಎಂದು ಕೇಳುತ “ಯಾರಿದ್ದೀರಿ
ಮನೆಯೊಳಗ” ಯಂದು ಫಲಾನ ಮನೆಯನ್ನು ಪ್ರವೇಶ ಮಾಡೇ ಬಿಟ್ಟನು.
ಯೇನು ಸ್ವಾಮೀ.. ಬಡವಿಯ ಮನೆವರೆಗೆ ಪಾದ ಬೆಳೆಸಿರುವ ಕಾರಣವೇನು?”
ಯಂದು ಸ್ವಾಗತ ಕೋರಿದ ತಾಯಕ್ಕಳನ್ನೇ ಚಿನ್ನಾಸಾನಿ ಯಂದು ಭಾವಿಸಿ
ಹ್ಹಾಂ....ಹ್ಹಾಂ... ಸವುಂದರ್ಯದ ರಾಸಿಯೇ ಯಂದು ಮನದೊಳಗ ವುದ್ಗಾರ