ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೨೧೯


ದ್ವಾರಾ ಹಂಪಜ್ಜನ ಮ್ಯಾಲ ವತ್ತಡ ತಂದದ್ದುಂಟಂತೆ. ಅದಕ್ಕಿವಯ್ಯನು ತಾನು
ಮಾರಮ್ತಾಯಿಯ ನಿಷಾ<<ವಂತ ಭಕುತನದೀನಿ.. ಹೆಣ್ಣು ದೇವತೆಗಳ ಹೊರತು
ತಾನು ಮತ್ತಾವ ದೇವರಿಗೆ ಕಯ್ನ ಯತ್ತಿ ಮುಗಿಯಾಕಿಲ್ಲ ಯಂದು
ಖಡಾಖಂಡಿತ ಹೇಳಿದನಂತೆ. ಪ್ರತಿ ದಿವಸ ಆಂಜನೇಯಸ್ವಾಮಿ ಅವಯ್ಯಗ
ವಂದಲ್ಲಾವಂದು ಕಿರುಕುಳ ಕೊಡುತ್ತಲೇ ಬಂದಿರುವುದುಂಟಂತೆ.. ತಾಯಿ
ಸಾಂಬವಿ ಅವನ್ನೆಲ್ಲ ನಿವಾರಣೆ ಮಾಡುತ್ತ ತನ್ನ ಪರಮ ಭಕುತನಿಗೆ ರಕ್ಷಣೆ
ಕೊಡುತ ಬಂದಿರುವಳಂತೆ..
ಆ ಕಾಲದಿಂದ ಯೀ ಕಾಲದವರೆಗೆ ತಾಯಿಯ ಸ್ರದ್ಧೋಪಾಸಕನಾಗಿ
ಮುಂದೊರೆದುಕೊಂಡು ಬಂದಿರುವ ಯಷ್ಟೋ ಪಾಳ್ಳೆಪಟ್ಟುಗಳ ಪತನಗಳನ್ನು
ಕಣ್ಣಾರೆ ನೋಡಿರುವ, ಮೂಗ ಪ್ರಾಣಿಗಳೊಳಗ ವುದರ ವಯ್ರಾಗ್ಯ ಮೂಡದಂತೆ
ನೋಡಿಕೋತಿರುವ, ಹೆಣ್ಣು ಯಂಬ ಸಬುಧಕ್ಕೆಲ್ಲಿ ಅಪಚಾರವಾಗುತದೋ
ಯಂಬ ಲೆಕ್ಕಾಚಾರದಿಂದ ಲಗ್ಗುನವಾಗದೆ ಯಿದ್ದು ಪರನಾರಿ ಸೋದರನೆಂದೇ
ಪ್ರಸಿದ್ಧಿ ಪಡೆದಿರುವ ಹಂಪಜ್ಜ ತಾನು ಹುಟ್ಟಿದಾರಾಭ್ಯದಿಂದ ತನ್ನ ಸರೀರದ
ವಂದೇ ವಂದು ರೋಮವನ್ನು ಕತ್ತರಿಸಲಕ ಯಾವ ನಾದಿರಯ್ಯನಿಗೂ ಅವಕಾಸ
ಕೊಟ್ಟಿಲ್ಲ.. ಯಾಕ ಕೊಟ್ಟಿಲ್ಲ ಅಂದರ ಅದಕss ಕೊಟ್ಟಿಲ್ಲವು. ಅದರಿಂದಾಗಿ
ಯಿವಯ್ಯನ ಸರೀರದಾದ್ಯಂತ ರೋಮರಾಜಿ ಬೆಳಕೋತ ಬೆಳಕೋತ ವಂದು
ಕಾಡೇ ಸ್ರುಷ್ಟಿಯಾಗಿಬಿಟ್ಟಿರುವುದು. ಮೂಗಿನಡಿ, ಗದ್ದದಡಿ, ತಲೆ ಮ್ಯಾಲ,
ಕಂಕುಳದಡಿ, ತೊಡೆಸಂಧೀಲಿ ಹಿಂಗs ಯಲ್ಲಂದರಲ್ಲಿ ರೋಮರಾಜಿ ಸುರುಸುರಳಿ
ಸರಗಂಟಿಗೆ ಬಿದ್ದು ಗಡ್ಡೆ ಕಟ್ಟಿಬಿಟ್ಟಿರುವುದು. ಹಿಂಗಾಗಿ ಅವಯ್ಯನನ್ನು ದೂರಕೆ
ನಿಂತು ನೋಡುವುದು ಎಂದು ಛಂದ, ಹತ್ತಿರಕ ಬಂದು ನೋಡುವುದು ವಂದು
ಛ೦ದ, ಚುಟುಕ ಲಕ ನ೦ದ೦ತೋಳ ಗ ಮಂಗಳವಾರ ನಸಿಗ್ಗೆ
ಮುಳುಗೇಳುವುದೊಂದು ಬಿಟ್ಟರೆ ತನ್ನ ಯಾವ ಅಂಗವನ್ನು ವುಜ್ಜಿ
ಪರಾಂಬರಿಸುವುದಿಲ್ಲ ಅವಯ್ಯನು.. ಹಿಂಗ ಯೇಸು ಕಾಲವಾತೋ? ಯೇನು
ಕಥಿಯೋ? ನೂರಾರು ಹಾಡು ಕಥೆ ಕಥೆ ಕಬ್ಬುಗಳೊಳಗ ರಸ ತುಂಬವನೆ
ಸಿವಸಂಕರ ಮಾದೇವಾ....
ಬ್ಯಾನೆ, ಬ್ಯಾಸರಿಕೆ, ರೋಗ, ರುಜಿಣ, ಯಿವೇ ಮೊದಲಾದ ತರಾವರಿ
ವುಸಾಬರಿಗಳನ್ನು ಅನುಗಾಲ ಮಯ್ಯಿ ಮ್ಯಾಲ ಯಳಕೊಂಡು, ಸಾವುರದೆಂಟು
ಸುಕ್ಕುಗಳಿಂದ ನಗುತಲಿದ್ದ ಸಕಲೊಂದು ಮಂದಿಯ ಯೋಗಕ್ಷೇಮಗಳನ್ನು