ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೨೨೫


ಮಾಡಲಿಲ್ಲ.. ಚಿರತಪ್ಪ ಯದುರಿಗೆ ಬಂದು ಮ್ಯಾಂವ್ ಅನ್ನಲಿಲ್ಲ. ನರಿಯಣ್ಣ
ಯದುರಿಗೆ ಬಂದು ಮಾಳಿಡಲಿಲ್ಲ.. ವಂದಾರ ಅಪಸಗುನ ವದಗಲಿಲ್ಲ..
ವಂದು ಹಗಲss ವಂದು ಘನಘೋರ ರಾತ್ರಿಯಾss ಜೀಂಗುಡತಲಿದ್ದ
ಅಟ್ಟಂಬಟ್ಟಾರಣ್ಯೇವಿನೊಳಗ ಹೊಟ್ಟೆಯೊಳಗಿನ ನೀರು ಅಳ್ಳಾಡದಂಗ ಪ್ರಯಾಣ
ಮಾಡೀss ಮಾಡೀ ಅಗೋ ನುಂಕೀಮಲೆ.. ಯೀಗೋ ಗಾದರಿಮಲೆ ಯಂದು
ವುದ್ಗಾರ ಮಾಡುತ ಅವರು ಚುಟುಕಲಕನಂದನೆಯನ್ನು ಸುಸೂತ್ರವಾಗಿ
ದಾಟಿದೊಡನೆ ಮುರುಡಿ ಯಂಬ ಗ್ರಾಮವು ಕಾಣಿಸಿಗಂತು, ಸೂರಾಂಜನೇಯ
ಸ್ವಾಮಿಯ ಗುಡಿಗಂಟೆ ಢಣಾರಂತ ತನಗೆ ತಾನೆ ಬಡಕಂತು, ವಂದ್ನಾಕು ಮಂದಿ
ಸಾರೋಟು ನೋಡಿ ಅಂಜುತಳುಕುತ ಬಂದು “ನಿಮ್ಮದು ಯಾವೂರಪ್ಪಾ?..
ಯದಕ ಬಂದೀರಪ್ಪಾss?” ಯಂದು ಕೇಳಿದ್ದಕ್ಕೆ ಬೋಸಯ್ಯನು ತಾವು ಫಲಾನ
ಯಿಂಥ ಪಟ್ಟಣದವರೆಂದೂ, ತಾವು ಬಂದಿರುವುದು ಫಲಾನ ಯಿಂಥ
ಕಾರ್ಯೇವಿಗೆಂದೂ ಯಿದ್ದದ್ದು ಯಿದ್ದಂಗೆ ಹೇಳಲು ಕೇಳಿದ ಅವರು ಹಿರಿ ಹಿರಿ
ಹಿಗ್ಗಿ ಯೀರೇಕಾಯಿಯಾದರು. ಯೀ ಯಿಷಯ ನಾಯಕಗೆ ತಿಳಿಯಲು ತಡ
ಹಿಡಿಯಲಿಲ್ಲ. ಆತನು ಅತಿಥಿ ಅಭಾಗತರನ್ನು ತನ್ನರಮನೆಗೆ ಬರಮಾಡಿಕೊಂಡು
ವುಂಬಲಕಿಟ್ಟಿದ್ದಾಗಲೀ, ಕುಡಿಯಲಕ ಕೊಟ್ಟಿದ್ದಾಗಲೇ ತಡಾ ಆಗಲಿಲ್ಲ. ತಾನೇ
ಖುದ್ದ ಹೋಗಿ ಗುಡ್ಡದೊಂದು ಗುಬ್ಬಚ್ಚಿ ರೂಪ ತಳೆದಿರುವಂತೆ
ಗೂಡಿಸಿಕೂಕಂಡಿದ್ದ ಹಂಪಜ್ಜನ ಕಿವಿಯೊಳಗ ಫಲಾನ ಸಂಗತಿಯನ್ನು
ಧಾರೆಯರೆದನು. ತಾಯಿಯೇ ತನಗಾಗಿ ಯದುರು ನೋಡುತವಳೆ ಯಂದು
ತಿಳಿಯುತ್ತಲೇ ಆ ಮುದೇತನ ಸರೀರ ಬುರುಬುರುನೆ ಮಾದಿತು. ಸುಕ್ಕುಗಳೆಲ್ಲ
ಮಾಯವಾದವು. ಆತನು ಮುಂದ ಪ್ರಯಾಣಕ ಹೆಂಗ ಸಜ್ಜುಗೊಂಡನಂದರ
ಹಂಗs ಸಜ್ಜುಗೊಂಡನ
. ಮುರುಡಿ ಗ್ರಾಮಕ್ಕೆ ಗ್ರಾಮವೇ ಕಣ್ಣೀರನ್ನು ಕಪಾಳಕ ತಂದುಕೊಂಡು
ತಾಯನ್ನಗಲುವ ಯಳೆಗರುವಿನಂತೆ ಬಿಕ್ಕಿತು. ವಂದೇ ಸರೀರವಾಗಿ, ವಂದೇ
ಬಾಯಿಯಾಗಿ ಯಜ್ವೋ ಯಂದು ತೆಗೆದ ವುದ್ಗಾರವು ಯಲ್ಲಿಮಟ ಕೇಳಿಸಿತಂದರ
ಅಲ್ಲಿಮಟ ಕೇಳಿಸಿತು.
****
ಅತ್ತ ಗುಂತಕಲ್ಲೊಳಗೆ ಕ್ಯಾಥರೀನಳ ಕಪಾಟಿನೊಳಗಿದ್ದ ತಾನು
ಸುಂದರಿಯಾಗಿದ್ದ ಕಾಲದಲ್ಲಿ ಲಭಿಸಿದ ಕಿರೀಟವನ್ನೂ, ಆಪದ್ಧನವನ್ನು ತನ್ನ