ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೨೨೭


ಸತ್ಯನಾರಾಯಣ ಪೂಜೆ ಮಾಡಲೆಂದು ಹೋಗುತಿರುವುದಾಗಿ ಹೇಳಿ ಹೋದ
ತನ್ನ ಗಂಡ ತುಂಬಿದ ಸಂಚಿಗಳೊಡನೆ ಮರಳಿ ಬಂದದ್ದು ಪೂರಾ ವಂದೂವರೆ
ದಿನ ನಂತರವೇ, ಮುನಿದಿದ್ದ ತನ್ನೆದುರಿಗೆ ಆತ ವಸ್ತುಪ್ರದರ್ಸನ
ಯೇರುಪಡಿಸಿದೊಡನೆ ಸಯ್ರಣೆ ಕಳೆದುಕೊಂಡಳು. ಪ್ರಮಾಣ ಮಾಡಿಸಿ
ಹಕೀಕತ್ತನ್ನುದುರಿಸುವ ಸಲುವಾಗಿ ಮಕ್ಕಳನ್ನೂ, ಪಯಿತ್ರಸಾಲಿಗ್ರಾಮವನ್ನೂ
ಯದುರಿಗಿರಿಸಿ ಜಬರದಸ್ತಿನಿಂದ ಕೇಳಿದಳು. ಆತ ಬಾಯಿ ಬಿಡದಿದ್ದರೂ ಸಂಚು
ಹೊಂಚು ಮೋಸಗಳಿತ್ಯಾದಿ ಗ್ರಹಿಸಿದ ತಾನು.
ತನ್ನ ಕುಟುಂಬದ ಸಲುವಾಗಿ, ವರ್ತಮಾನ ಅಯ್ಭೋಗವನ್ನು
ಅನುಭವಿಸುವ ಸಲುವಾಗಿ, ಹೇಳಲೆಂದಿದ್ದ ಗಂಡನೆದುರೇ ಯರಡು
ಮಡಿಸೀರೆಗಳನ್ನು ದರ್ಬೆಯ ಬುಟ್ಟಿಯೊಳಗಿಟ್ಟುಕೊಂಡು ತವರುಮನೆಗೆ
ಹೋಗುವುದಾಗಿ ಹೇಳಿ ಹೊಸ್ತಿಲು ದಾಟಿದಳು, ಶಾಸ್ತ್ರಕ್ಕೆ ಹೋಗದಿರು ಅಂದ,
ತರುಬಲಿಲ್ಲ, ಹೊರ ಹೋದ..
ರಿಂದಮ್ಮ ಹುಡುಕ್ಕೋತs ಹುಡುಕ್ಕೋತ ಫಲಾನ ಜಾಗವನ್ನು ಸೇರಿ
ನಾಗಿರೆಡ್ಡಿಯನ್ನು ಕಂಡು ಸಂಭವಿಸಲಿರುವ ಘಾತ ಕುರಿತು ಹೇಳದೆ ಯಿರಲಿಲ್ಲ.
ಆಗಿದ್ದು ನಾಗಿರೆಡ್ಡಿ ವಂದೇ ವಂದು ನಿಟ್ಟುಸಿರು ಬಿಡದೆ ಸಮಾಧಾನಚಿತ್ತದಿಂದ
“ನಿನ್ನಂಥ ತಂಗೇರು ಯಿರುವಾಗ..” ಯಂದು ಮುಂತಾಗಿ ಯೇನು
ಹೇಳಿದನೆಂದರೆ..
ಫಲಾನಗ್ರಾಮ ಯಂದರ ಕುರೇಕುಂಪೆಯು. ನೂರಾರು ಮಂದಿ ಭಕುತರ
ಸಮಚ್ಛಮದಲ್ಲಿ ಗಮಕ ಕಲಾವರೇಣ್ಯನೆನಿಸಿರುವಂಥ ಮುಷೂ«ರು ಮುದ್ದು
ಭರುಮನ ಗವುಡನು ಗಡೇಕಲ್ಲ ತವನಿಧಿ ಸ್ತ್ರೀ ಭೀಮಲಿಂಗೇಶ್ವರ ಸ್ವಾಮಿಯ
ಪುರಾಣದ ಯೇಳನೇ ಚರಣವನ್ನು ತನ್ನ ಬಾಯಿಗೆತ್ತಿಕೊಂಡಿದ್ದಾನೆ. ಕೇಳಲೆಂದು
ಬ್ಯಾರೇ ಬ್ಯಾರೇ ಲೋಕಗಳಿಂದ ಆಗಮಿಸಿ ಆಗೋಚರ ಸ್ಥಿತಿಯಲ್ಲಿ
ವುಪಸ್ಥಿತರಿದ್ದಂಥ ಪುಣ್ಯಜೀವಿಗಳು ವಬ್ಬರೇ ಯಿಬ್ಬರೇ. ಕಯ್ಲಾಸದಿಂದ ಸಾಚ್ಚಾತ್
ಪರಮೇಶ್ವರನೇ ತನ್ನ ಕುಟುಂಬ ಪರಿವಾರ ಸಮೇತನಾಗಿ ಆಗಮನ
ಮಾಡಿದ್ದನೆಂದರೆ ಪುರಾಣಕತ್ರುವಾದ ಸಚ್ಚಿದಾನಂದ ಶಾಸ್ತ್ರಿಗಳ
ಆತುಮಮಾವಯಕುಂಠ ಲೋಕದಿಂದ ಆಗಮನ ಮಾಡಿರದೆ ಯಿರಲಿಲ್ಲ.
ಆದಿಸೇಸ ಸ್ವಾಮಿಯ ಅಪರಾವತಾರವಾದ ನಾಗಿರೆಡ್ಡಿ ಅಲ್ಲಿದ್ದಾನೆ ಗಂಡುಗಲಿ..
ಅರರೆ ಸ್ವಾಮಿಯ ಪರಮ ಭಕುತನನ್ನು ಬಂಧಿಸಲೆಂದೊಂದು ಸಂಚು