ಈ ಪುಟವನ್ನು ಪ್ರಕಟಿಸಲಾಗಿದೆ



೨೪೪

ಅರಮನೆ

ಅನುಭವ ಕಡಿಮೆ.. ವಂದಲ್ಲಾ ವಂದು ದಿನ ದಾರಿಗೆ ಬಂದಾನು, ಬರುವಂತೆ
ತಾನು ಮಾಡಬೇಕು ಯಂದುಕೊಳ್ಳುತ್ತಿರು ವಾಗಲೇ ಹೆಂಡತಿಯನ್ನು ಕರೆತರಲು
ಹೋಗಿಬಿಡುವುದೇನು? ಯೀ ಯೇದ ಪಾರಂಗತರ ಹಣೆ ಬರಹವೇ ಯಿಷ್ಟು..
ಹೋದವನು ಹೋದ.. ಆದರೆ ತಮ್ಮನ್ಯಾಕೆ ಜೆನ್ನಿಫರಳಿಗೆ ಪರಿಚಯಿಸಬೇಕಿತ್ತು..
ಆಕೆಯನ್ನು ತಾನೋರ್ವಳ್ಳೇ ಪರಿಚಯ ಮಾಡಿಕೊಂಡರೆ ಸಾಕಿತ್ತು. ಆದರೆ ತನ್ನ
ಮಗಳು! ಯಿನ್ನು ಹೊಸ್ತಿಲು ದಾಟುತ್ತಿದ್ದಂತೆ ಆ ಪರಂಗಿ ಮಾಯಾವಿನಿ
ವಯ್ಯಾರದಿಂದ ಧಾವಿಸಿ ಬಂದದ್ದೇನು? ಯೇಂಜಲ್ ಎಂದು ವುದ್ಗರಿಸಿದ್ದೇನು?
ಅಪ್ಪಿ ಕೊಂಡದ್ದೇನು? ನಾನೂ, ನೀನೂ ಗೆಳತಿಯರು ತಿಳಿಯಿತಾ ಅಂದದ್ದೇನು?
ಅರೆಗಳಿಗೆಯೊಳಗ ತನ್ನ ಮಗಳನ್ನವಳು ವಶೀಕರಣ ಮಾಡಿಕೊಂಡು ಬಿಟ್ಟಳಲ್ಲಾ..
ಅಪರಿಚಿತ ಪರಂಗಿ ಹೆಂಗಸೊಡನೆ ಸೂಜಿಗೆ ಮುದ್ದು ಕೊಟ್ಟಂತಿರ ಬೇಕೆಂಬುದು
ತನ್ನ ಮಗಳಿಗೆ ತಿಳಿಯದಾಯಿತಲ್ಲಾ.. ಕೇಳಿದ ಬುಗುಡಿ ಕೂಡ “ಯಿದರಿಂದ
ನಮ್ಮ ಸಾಮಾಜಿಕ ದರ್ಜೆ ಹೆಚ್ಚುತ್ತದೆ ಬಿಡು.. ಅಂಥ ಗೆಳತಿ ದೊರಕಿರುವುದು
ನಮ್ಮ ಮಗಳ ಪುಣ್ಯ” ಯಂದು ಕುಮ್ಮಕ್ಕು ನೀಡುವುದೆ? ತನಗೆ ಹುಟ್ಟಿದ
ಮಗಳಾಗಿದ್ದಲ್ಲಿ ಯಿದಕ್ಕೆ ಅನುಮೋದಿಸುತಲಿದ್ದನೇ ಅವನು? ಯಾರು ಯೇನೇ
ಅನ್ನಲಿ, ಆಡಲಿ, ಅಡ್ಡಿ ಆತಂಕ ಮಾಡಲಿ.. ಚಿನ್ನೀನ ಅಲ್ಲಿಗೆ ಹೋಗದಾಂಗ
ತಡೆಯಬೇಕು ಯಂದು ತಾನು ನಿಲ್ದಾರ ಮಾಡಿದ್ದು ಪ್ರಾಯಶಃ ನೂರರ
ಆಜುಬಾಜು ಸಲ ಯಿದ್ದೀತು.
ಅತ್ತ ಸದರೀ ಪಟ್ಟಣದ ಕುಂಪಣಿ ಸರಕಾರದ ಬಂಗಲೆಯೊಳಗ
ಯಂದಿನಂತೆ ಡೋಲಿಯಿಂದ ಯಿಳಿದು ಜೆನ್ನಿಫರಮ್ಮಗೆ ಗೊತ್ತಿಲ್ಲದ ಆಟಗಳಾದ
ಪತ್ತೀಸು ಕಾಯಿ, ಕುಂಟೋಬಿಲ್ಲೆ ಆಟಗಳನ್ನು ರೂಪಕವಾಗಿ ಕಲಿಸುತಲಿದ್ದ
ಚಿನ್ನಾಸಾನಿ ತನ್ನ ತಾಯಿ ಯೋಚಿಸುತಲಿದ್ದುದರ ಮುಕ್ಕಾಲು ವಾಸಿಯನ್ನು
ಮಾಹಿಸಿಕೊಳ್ಳು ತಲಿದ್ದಳು. ಯರಡನೆ ಮನೆಗೆ ಜಿಗಿಯುವುದ ಬಿಟ್ಟು ವಂದನೇ
ಮನೆಗೆ ಜಿಗಿಯುತಲೋ, ವಂದನೆ ಮನೆಗೆ ಜಿಗಿಯುವುದ ಬಿಟ್ಟು ಯರಡನೇ
ಮನೆಗೆ ಜಿಗಿಯುತಲೋ ಪರಪಾಟು ಬೀಳುತಲಿದ್ದಳು. ತನ್ನ ತಾಯಿಯ
ಕಣ್ಣುಗಳು ತನ್ನನ್ನು ಹಿಂಬಾಲಿಸಿವೆ, ಕಾವಲು ಮಾಡುತವೆ ಯಂದು ಭಾವಿಸಲು
ಜೆನ್ನಿಫರ್ ಅವಕಾಶವೇ ಕೊಡುತ್ತಿರಲಿಲ್ಲ.. ನೀನು ನಿನ್ನ ಮನೆಯಲ್ಲಿ ಚಿನ್ನಾಸಾನಿ..
ಆದರ ನನಗೆ ಮಾತ್ರನೀನು ಯೇಂಜಲ್ ಯಂದು ಸಂಭೋದಿಸುತಲಿದ್ದುದಂತೂ
ಅಪ್ಯಾಯಮಾನ ವಾಗಿಲ್ಲದಿರಲಿಲ್ಲ... ಮೊದಮೊದಲಿಗೆ ತಾನು ಯೇಂಜಲ್