ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೨೬೧ ಆದಂಥ ಅವಯ್ಯನು ಗವುರ ಸುಂದರ ಮಾರೆಮ್ಮ ದೇವತೆಯ ಕರುಣೆಯ ಕಂದಮ್ಮನಾದ ಕಾಡುಗೊಲ್ಲರೀರಯ್ಯನ ಕಡೇಕ ನೋಡುತಲಿದ್ದನು.. ವಂದು ಕಾಲಕ ವುಬ್ಬುತಾSS.. ಯಿಂದಿನ ಕಾಲಕs ಹೆಂಗ ವುಳಕೊಂಡು ಬಿಟ್ಟಿರುವ ಮತ್ತು ಚಲನವಲನ ನಿಷ್ಣಾತನಾದ ಅವಯ್ಯನು ತನ್ನ ಪೂರುವಾಸ್ರಮದ ಗೆಣೆಕಾರನಾದ ಹಂಪಜ್ಜನ ಕಡೇಕ ನೋಡುತ. ಆತನ ಆಂಗಿಕ ಕಂಪನಕ ವಂದೊಂದು ಅರ್ಥವನ್ನು ಕಟ್ಟುತ, ಕಿವಿಯಿಂದ ಕಿವಿಗೆ ಯಿಲೇವಾರಿ ಮಾಡುತಲಿದ್ದುದು ಬಲು ಜೋಜಿಗದ ದ್ರುಸ್ಯ ಅದಾಗಿತ್ತು... ಯಿದು ಮೊದಲೇ ಅವಧೂತ ಸಂಬಂಧೀ ಮಾಯಾದ ಲೋಕವು... ಯಾವ ಛಣದಲ್ಲಿ ಲಟಕ್ಕನ ಯದ್ದು ಕುಂಡುರುವುದೋ ಯಾರು ಬಲ್ಲರು? ಕರೆಯೋರನು ಕರೆದಿಟ್ಟುಕೊಬೇಕು? ಮಾಡೋದನು ಮಾಡಿಟ್ಟುಕೋಬೇಕು. ಹಂಪಜ್ಜ ಕಣ್ಣುಮುಚ್ಚಿ ತಾಯಿಯ ಯಿರಾಟ್‌ರೂಪವ ನೋಡುತಯ್ದಾನಂತೆ.. ಕಿವಿಮುಚ್ಚಿ ತಾಯಿಯ ಅಗ್ನೇವುಗಳನ್ನು ಕೇಳುತಲಯ್ದಾನಂತೆ.. ಬಾಯಿಯ ಹಂಗಿಲ್ಲದ ತಾಯಿಯೊಂದಿಗೆ ಮಾತಾಡುತಲಯ್ದಾನಂತೆ. ಕಾಲಿಲ್ಲದssನೆ ತಾಯಿಯ ರುನ್ಮಂದಿರದೊಳಗ ಅಡ್ಡಾಡುತಲಯ್ದಾನಂತೆ.. ಅದಕss ಮಿಜಿಮಿಜಿ ಮಾಡುತಿರೋದು ಬ್ಯಾಡ.. ಯಂಬ ಕಾರಣಕ್ಕ ಮಂದಿಯು.... ಪ್ರಯೇಸ ಮಾಡುದಕೂ ಪೂರುವದಲ್ಲಿ ತಾಯಿ ಸಾಂಬವಿ ಪಟ್ಟಣದ ಅಜುಬಾಜಕ ಯೇನೇನು ಗುರುತು ತೋರಿಸವಳೆ.. ಅಲ್ಲೆಲ್ಲ ಪ್ರಹರಿಗೋಡೆಗಳ ಕಟ್ಟಿಸಬೇಕು, ಅರಿಷಣ ಕುಂಕುಮ ಹಚ್ಚಿ ಮೂರು ಯ್ಯಾಳೆ ಪೂಜಿಪುನಸ್ಕಾರ ಮಾಡಬೇಕು. ಅಲ್ಲೆಲ್ಲ.. ಅದೆಲ್ಲ ಕಾಪಾಡಿ ಕೊಳ್ಳಬೇಕು.. ನರಮಂದಿಯಾದ ತಮ್ಮಿಂದ ಸಂಭವಿಸಿರುವ ಅಪಚಾರಗಳು ವಂದಾss ಮರಡಾss ತಾಯಿ ಸಾಂಬವಿ ಗುಡಿ ಹಿ೦ದಲ ಮೂಳೆಮೋಬಯ್ಯನ ಸರೀರದೊಳಗ ವಸ್ತಿಮಾಡಿದ ಚಣದಿಂದ ಸದರಿ ಪಟ್ಟಣವನ್ನು ಮಡಿವುಡಿಯಿಂದ ಯಿಡಬೇಕಿತ್ತಲ್ಲs... ಬೇಬಿಷ್ಟೆ ತಾಚ್ಚಾರ ಮಾಡಬಾರದಾಗಿತ್ತಲ್ಲಾ... ಪಟ್ಟಣಯಿರುವ ವಂದು ಮಯ್ಲಿ ಪಾಸಲೆಯೊಳಗೆ ವಂದವ ಮಾಡ ಬಾರದಾಗಿತಲ್ಲಾ.. ಯರಡವ ಮಾಡಬಾರದಾಗಿತ್ತಲ್ಲಾ... ಮುಟ್ಟು ಮಯ್ಲಿಗಿ ಸೂತಕ ಮಾಡಬಾರದಾಗಿತ್ತಲ್ಲಾ.. ಜನನ ಯಂಬ ಸೂತಕ, ಮರಣ ಯಂಬ ಸೂತಕ, ಹೊರಗಾಗುವ ಸೂತಕ, ವಳಗಾಗುವ ಸೂತಕ, ಮ್ಯಾಲಾಗುವ ಸೂತಕ, ಕೆಳಗಾಗುವ ಸೂತಕ, ಗರುಭ