ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೨೬೫ ಮರವಾ.. ಜಾಲಿ ಮರವಾ ಯಂದು ಸಂದೇಹಪಟ್ಟುಕೊಂಡರು... ಯಾಕೋ ಸದರಿ ರುಕ್ಷವು ತಮ್ಮನ್ನು ಬಿಟ್ಟುಕೊಳ್ಳುತ್ತಿಲ್ಲ. ಮುಟ್ಟಿದರ ಜಾಡಿಸಿ ವರೆಸಿಕೊಂಡಂತ ಅನುಭವವಾಗುತ್ತಿರುವುದು.. ಯಿದು ಬ್ಯಾಡ ಅಂತ ಯಿನ್ನೊಂದು ಮರದವ್ವನ ಸನೀಕ ಹೋದರ.. ಅಲ್ಲಿ ಕೂಡ ಯದೇ ಗತಿಯಾ! ಮರದಿಂದ ಮರಕ್ಕೆ ಅಲದೂ ಅಲದೂ ಅಂಗಾಲ ಸವೆಸಿಕೊಂಡರು. ಬೇಯಿನ ಮರಗಳೆಲ್ಲ ವಟ್ಟಾಗಿ ಅಸಹಕಾರ ಚಳುವಳಿಯನ್ನು ಆರಂಭಿಸಿವೆ ಯಂದು ಅವರು ಜಡೆತಾತನ ದ್ವಾರ ಹಂಪಜ್ಜಗೆ ಅರಕೆ ಮಾಡಿಕೊಂಡರು.. ಆಗಿದ್ದು ಹಂಪಜ್ಜನು ತನ್ನ ಕಣ್ಣುಗಳನು ಮಕಾಡೆ ಮುಚುಕೊಂಡು ಧ್ಯಾನಸ್ಥಗೊಂಡನಂತೆ.. ಆತನ ಕಣ್ಣಪಾಸಲೆಯೊಳಗ ಬೇಯಿನ ಮರಗಳೆಲ್ಲ ಸಜೀವಗೊಂಡು ಮೂಡಿ ದುಕ್ಕ ತೋಡಿಕೊಂಡವಂತೆ.. ಸಾಂಬವಿ ಮಾಡಿದ್ದು ಸರಿ ಅಯ್ತಾ ಯಂದು ಪ್ರಶ್ನೆಯನ್ನು ಹಾಕಿದವಂತೆ... ಮುಂಗೋಪತನಕ್ಕೆ ಯುಗಯುಗಗಳಿಂದ ಹೆಸರಾಗಿರುವ ಸಾಂಬವಿಯದೇ ತಪ್ಪೆಂದು ನಿಕ್ಲಾರಕ್ಕೆ ಬಂದ ಆ ಮುದೇನು ಕುಂತ ಬಂಟಕ್ಕೀಲೆ ತಾಯಿಗೂ, ಬೇಯಿನವರ ದವ್ವಗಳ ನಡುವೆ ವುದ್ಯವಗೊ೦ಡ೦ತಿರುವ ಮನಸ್ತಾಪವನ್ನು ಪಂಚಾತಿ ಮೂಲಕ ಬಗೆಹರಿಸಬೇಕೆಂದುಕೊಂಡನಂತೆ. ತನ್ನೆಡಗನ್ನೊಳಗ ಸಾಂಬವಿಂಯನ್ನು ತರುಬಿದನಂತೆ ಅವಯ್ಯ. ಬೇಯಿನಮರದಮ್ಮಿದಿರನ್ನು ತರುಬಿಟ್ಟನಂತೆ.. ತನ್ನ ಬಲಗಣ್ಣ ಪಾಸಲೆಯಲ್ಲಿ ಜಗಲೂರೆವ್ವಗ ಆಶ್ರಯ ಕೊಟ್ಟಿದ್ದು ತಪ್ಪೆಂದು ಸಾಂಬವಿಯೂ, ಅದರಲ್ಲಿ ತಪ್ಪೇನು ಯಂದು ಬೇಯಿನ ಮರದಮ್ಮದಿರೂ ವಾದ ಮಾಡಿದರಂತೆ. ಪರಸ್ಪರ ಪಟ್ಟು ಸಡಿಲಿಸಲಿಲ್ಲವಂತೆ.. ವಬ್ಬರಾರ ಸದ್ದುಕೊಂಡು ವಂದು ಮೆಟ್ಟಿಲು ಯಿಳುದು ಬನ್ನಿ ಯಂದು ಮುದೇನು ಹೇಳಿದ್ದನ್ನು ಯಾರೊಬ್ಬರು ಕಿವಿಮ್ಯಾಲ ಹಾಕ್ಕೊಳ್ಳಲಿಲ್ಲವಂತೆ. ಬೇಯಿನ ಮರದಮ್ಮದಿರ ಸಾಂಗು ಸಾಕಾರಯಿಲ್ಲದ ತಾಯಿಯನ್ನು ಹೊಳಗೆ ಹೊಂದಿಸೋದು ಆಗದ ಮಾತು.. ಹೊಳಗೆ ಹೊಂಡದ ತಾಯಿಯು ಯಿಷ್ಟೆಲ್ಲ ಮಾಡಿ ಯೇನು ಸಾರಕ? ಹೆಂಗಾರ ಮಾಡಿ ಸಾಂಬವೀನ ವಪ್ಪಿಸವ್ವಾ ಯಂದು ಮುದೇತನ ಆತುಮವು ದಯನಾಸದಿಂದ ಕೇಳಿಕೊಂಡಿದ್ದಕ್ಕೆ ಸಮಸ್ತ ತುಣಲತೆ ತರುಗಳನ್ನು ಕಕ್ಕುಲಾತಿಯಿಂದ ದೊರೆಯುವಂಥಾಕೆಯಾದ ಸಾಲುಮರದವ್ವ ಮದ್ಯಸ್ಥಿಕೆ ವಹಿಸಲು ವತಿ ಕೊಂಡಳಂತೆ.. ಸಾಂಬವಿಯ ಮುಂಗೋಪದಿಂದ

3