ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೨೭೭ ಯಿಂಥ ರಾಜರಿಗೆ ಸೇರಿದ್ದೆಂದು ಹೇಳದಿರುವಂತೆ ಅಂಗಲಾಚಿ ವತ್ತೆ ಯಿಡಲಕ ಯಂದೋ, ಮಾರಾಟ ಮಾಡಲಕ ಯಂದೋ ಬಾಜಾರಕ ಕಳುವುತ್ತಿದ್ದರು. ವತ್ತೆ ಯಿಡಿಸಿಕೊಂಡರುಂಟು, ಯಿಲ್ಲದಿದ್ದರ ಯಿಲ್ಲ. ಚವುಕಾಸಿಯಿಂದ ಕೊಂಡು ಕೊಳ್ಳುತ್ತಿದ್ದುಂಟು, ಯಿಲ್ಲದಿದ್ದರ ಯಿಲ್ಲ.. ಯಿಂಥ ನೂರಿನ ರಾಜರನದಾರಪ್ಪಾ ಯಂದಲ್ಲಿ ಯಾವೂರ ರಾಜನಾದಾರ ನಮಗೇನು.. ಯೇನು ಕಲಿಯುಗವೋ ಯೇನೋ.. ಕಾಸಿಗೊಬ್ಬ ರಾಜನದಾನ. ಕೊಸರಿಗೊಬ್ಬ ರಾಜನದಾನ ಯಂದು ಲೇವಾದೇವಿಗಾರರು ಕೊಸರಿ ನುಡಿದು ವಾಪಾಸು ಮಾಡುತಲಿದ್ದುದು ಮಾಮೂಲು ದ್ರುಸ್ಯವಾಗಿತ್ತು ಕಣ ಸಿವನೇ.. ರಾಜಾ ಪರತಕ್ಷ ದೇವತಾ ಯಂಬ ಸಮುಸಕ್ರುತ ಸಂಜಾತ ನಾಣ್ಣುಡಿ ಮಂದೀಯ ಬಾಯೊಳಗ ಕಸವಾಗಿ ನುರಪಡಿಗೊಂಡುಬಿಟ್ಟಿತ್ತು ಸಿವನೇ.. ಯಡ್ಡವರ ಸಾಹೇಬನ ದರುಸನಾರವಾಗಿ ವಂದೆರಡು ದಿನಗಳ ಮಟ್ಟಿಗೆ ಯಂದು ಅಯ್ತಾರು ಹರದಾರಿ ದೂರದ ತಮ ತಮ್ಮ ದೇಸದೇಸಗಳಿಂದ ಬಂದಿದ್ದಂತ ರಾಜರು ವಾರ ದಿನಮಾನ ಯಂದರ ಹುಡುಗಾಟವೇನು ಸಿವನೇ, ಕುಂಪಣಿ ಸರಕಾರವು ತಮ್ಮಂಥ ರಾಜರುಗಳಿಗೆ ಕವುಡೆ ಕಿಮ್ಮತ್ತು ಯಿಲ್ಲದಂಗ ಮಾಡಿ ಬಿಟ್ಟಿರುವುದಲ್ಲಾ ಯಂದವರು ವಾಚಾಮಗೋಚರವಾಗಿ ಹಲುಬುತಲಿದ್ದುದೇನು ಸಿವನೇ, ಯಿನಾ ಕಾರಣ ಹಿಡಿ ಹಿಡಿ ಸಾಪ ಗೊಣಗುತಲಿದ್ದುದೇನು ಸಿವನೇ... ಕೆಲವರು ಯಿನ್ನೂ ತಾವು ರಾಜರೇ ಯಂದು ಮುಖಮಾರಿ ಬಿಕ್ಕೊಂಡು ನಟನ ಮಾಡುತಲಿದ್ದುದೇನು? ಕೆಲವರು ತಮ್ಮ ತಮ್ಮ ರಾಜತನವನ್ನು ಮರೆಮಾಚಿಕೊಂಡು ಮಾಮೂಲು ಮನುಷ್ಯರಂಗ ಅವರಿವರ ಚಾಕರಿ ಮಾಡುತ್ತ ತಮ್ಮ ತಮ್ಮ ಪಾಡಾ ಖರಚುಗಳನ್ನು ನಿಭಾವಣೆ ಮಾಡಿಕೊಳ್ಳುತಲಿದ್ದುದೇನು ಸಿವನೇ. ರಾಜ ರಾಜನಂದರ ಅದಕ ಮಯ್ಯಮಾಲ್ಯ ಯೇನಯ್ಕೆ ಪುರಾವೆ, ಮಯ್ಯ ವಳಗೇನುಂಟು ಪುರಾವೆ ಯಂದು ಕೇಳುತಾರಲ್ಲ ಸಿವನೇ, ಹಿಂಗಾಗಿ ರಾಜರು ತಾನು ರಾಜ ಅಂಬಲು ಭಲೇ ಮಜುಗುರಪಟ್ಟು ಕೊಂಡರಾ ಪಟ್ಟಣದೊಳಗ.. ಯಲ್ಲಾ ರಾಜರು ಹಿಂಗ ಯಿರಲಿಲ್ಲ.. ಪೂರುವಿಕರು ಮಾಡಿಟ್ಟಿದ್ದ ಗಂಟು ಕರಗಿಸಲೆಂದೇ ಬಂದಂಥವರು ಯಿದ್ದರು. ಕುಂಪಣಿ ಸರಕಾರದ ಯಂಜಲು ತಿಂಬುವುದು ಥರವಲ್ಲ ಯಂಬ ಅಭಿಮಾನದಿಂದ ತಾವಾ ಸದರಿಪಟ್ಟಣದೊಳಗ ಬದುಕಲಕೆಂದು, ಮನರಂಜನಾ ಸಂಸ್ಥೆಗಳ ವಡೆಯರಾಗಲಕೆಂದು ಆಯಕಟ್ಟಾದ ಜೆಗೇವುಗಳ ತಲಾಷಿಯಲ್ಲಿದ್ದರು. ಆಗಲೇ ಯಿದ್ದ ಜೂಜಾಟದ ಕೇಂದ್ರಗಳೊಳಗ ಸರುವನ್ನೊಂದು ಮಾಡುತ