ಈ ಪುಟವನ್ನು ಪರಿಶೀಲಿಸಲಾಗಿದೆ

೨೮೨

ಅರಮನೆ

ಮನ್ರೋ ಮತ್ತು ನಾಗಿರೆಡ್ಡಿಯರೀರ್ವರ ಪಯ್ಕಿ ಪುಣ್ಯಕೋಟಿ
ಯಾರಾಗಿದ್ದಿರಬೌದೆಂಬ ಸಂದೇಹ ಮೂಡಿತು. 'ಓಹ್.. ದೇವರೇ ನಾಗಿರೆಡ್ಡಿಯ
ಜೀವ ಕಾಪಾಡು.. ಹಾಗೆಯೇ ಮನ ಮಾನಸಿಕ ಸ್ವಾಸ್ಥ್ಯ ಕಾಪಾಡು” ಯಂದು
ಅವಯ್ಯನು ಯೇಸು ಪ್ರಭುವಿನೆದುರು ಮುಂಬತ್ತಿ ಬೆಳಗಿಸಿ ಮಂಡೆಯೂರಿ
ಪ್ರಾರ್ಥೀಸುತ್ತಿರುವಾಗ್ಗೆ....
ಸದರೀ ಸೀಮೆ ಮಂದಿಯ ಯಾರ ಬಾಯಿಯನ್ನು ಹೋಳು
ಮಾಡಿದರಲ್ಲಿ ನಾಗಿರೆಡ್ಡಿ ರೂಪದಲ್ಲಿರುವ ಮನ್ರೋನು, ಮನ್ರೋ ರೂಪದಲ್ಲಿರುವ
ನಾಗಿರೆಡ್ಡಿಯೂ ಗೋಚರವಾಗುತಲಿದ್ದರು. ಅವರು ಬಿಟ್ಟು ಯಿವರು ಯಾರು?
ಯಿವರು ಬಿಟ್ಟು ಅವರು ಯಾರು? ಅವರೀಶ್ವರ ನಡುವೆ ವಂದು ವಪ್ಪಂದವು
ಯೇರುಪಟ್ಟಿದ್ದಿರಬೌದಾ? ಅವರಿಬ್ಬರು ಸೇರಿ ತಮಗೆ ಮೋಸ ಮಾಡುತ್ತಿರಬೌದಾ?
ಯಿತಿಹಾಸದೊಳಗ ಮೂಡಣ ಪಡುವಣ ವಂದಕ್ಕೊಂದು ಕೂಡಿರುವ
ವುದಾಹರಣೆಗಳುಂಟಾ? ಪ್ರಕ್ರುತಿ ನಿಯಮದೊಳಗೆಲ್ಲಾದರೂ ಅರ್ಬುದನೆಂ
ಯಾಘ್ರನೂ, ಪುಣ್ಯಕೋಟಿ ಯಂಬ ಹಸುವಟ್ಟಿಗೆ ಭೋಜನ ಮಾಡಿರುವ
ದ್ರುಸ್ಟಾಂತ ವುಂಟಾ? ಯಂಬಿವೇ ಮೊದಲಾದ ಸಂದೇಹಗಳಿಗೆ ತಮ್ಮ ತಮ್ಮ
ದಿನಚರಿಗಳನ್ನು ಬಲಿಕೊಟ್ಟಿದ್ದರು ಸಿವನೇ.. ಬಹಳಷ್ಟು ಮಂದಿ ಲೆಕ್ಕ
ಹಾಕುತಲಿದ್ದುದು ಮನ್ರೋನು ಕುಂಪಣಿ ಸರಕಾರದ ಕಲೆಟ್ಟರನಾಗಿಯೇ
ಯಿರಬೇಕೆಂಬುದಾಗಿತ್ತು.. ನಾಗಿರೆಡ್ಡಿಯು ಸದಾ ಬಡವರ ಪರ ಹೋರಾಡುತ್ತ
ಕುಂಪಣಿ ಸರಕಾರದ ಯಿರೋಧವನ್ನು ಕಟ್ಟಿಕೊಳ್ಳುತ್ತಲೇ ಮುಂದುವರೆಯಬೇಕು
ಯಂಬುದಾಗಿತ್ತು. ಆ ಯರಡೂ ದಿಕ್ಕಗಳ ನಡುವೆ ರಾಜಿ ಕಬೂಲಿ ಬಹಳಷ್ಟು
ಮಂದಿಗೆ ಸುತಾರಾಂ ಯಿಷ್ಟಯಿರಲಿಲ್ಲ. ವುಂಬುವ ಬಾನದೊಳಗ ಮಿಷ ಕಲೆಸಿಟ್ಟು
ಮನೋನನ್ನು ಬಲಿ ತೆಗೆದುಕೊಂಡಿದ್ದಲ್ಲಿ ನಾಗಿರೆಡ್ಡಿಯನ್ನು ಸಯ್ಯ ಅನುತಿದ್ದೆವವ್ವಾ..
ಆ ಯರಡೂ ಗುಂಪುಗಳ ನಡುವೆ ಕಾಳಗ ಸಂಭವಿಸಿ ನೂರಾರುಮಂದಿ
ಸತ್ತಿದ್ದಲ್ಲಿ ಸಯ್ಯಿ ಅನುತಿದ್ದೆವಪ್ಪಾ.. ಯಿತಿಹಾಸದೊಳಗ ಮನ್ರೋ
ಖಳನಾಯಕನಾಗೇ ಮುಂದುವರೆವುದು ತಮ್ಮ ಕಣಸಾಗಿರುವುದಪ್ಪಾ..
ಯಿತಿಹಾಸದೊಳಗ ನಾಗಿರೆಡ್ಡಿಂರು ಹುತಾತುಮನಾಗುವುದು ತಮ್ಮ
ಕಣಸಾಗಿರುವುದಪ್ಪಾ.. ತಾವು ಕಂಡ ಕಣಸು ಮಣ್ಣುಪಾಲಾಗಿ ಬಿಟ್ಟಿತಲ್ಲಾ.. “ಓಹ್..
ಭೀಮಲಿಂಗೇಶ್ವರ ಸ್ವಾಮಿಯೇ. ನಮ್ಮ ಗಂಡುಮೆಟ್ಟಿನ ನಾಡಾದ ರಾಯಲ
ಸೀಮೆಯ ಜಾಯಮಾನ ಬದಲಾಗದಂತೆ ನೋಡಿಕೋ. ಯೀ ನೆಲದ