ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೨೮೯ ಬೇರಿನಿ ಯಂದನಕಂತ ತಬ್ಬಿಕೊಂಡು ಮಲಗಿದಳು. ತನ್ನ ತಾಯಿಯ ಯದೆಯನ್ನು ಕುಷ್ಟೋ ಹೊತ್ತಿನ ತನಕ.... ಯವ್ವಾ.. ನೀನು ನನ್ನ ತಂದೆ ಕೂಡ ಮಾತಾಡಲಿಕ್ಕೆ ಯಾಕ ಅನುವು ಮಾಡಿಕೊಡಲಿಲ್ಲ” ಯಂದು ತಡೆಯಲಾರದೆ ಕೇಳಿದಳು. ಅದಕ್ಕೆ ತಾಯಿಯ ಬಾಯಿಯಿಂದ ಮರು ಮಾತು ಹೊಂಡಲಿಲ್ಲ.. ಯಾವ ಖಾತರಿಯಿಂದ ತಾನು ಅನುವು ಮಾಡಿಕೊಡಬೇಕಿತ್ತು? ಮೀರಭೋಜ ಗದರಿಸಿದ, ಅಂಗಲಾಚಿದ.. ತಾನು ತನ್ನ ಮಗಳನ್ನು ನೋಡುವ ಸಲುವಾಗಿ, ಅಪ್ಪಾ ಯಂದು ವಂದೇ ಎಂದು ಸಲ ಕರೆಯಿಸಿಕೊಳ್ಳುವ ಸಲುವಾಗಿ ಯಿಡೀ ತನ್ನ ರಾಜ್ಯ ಕೊಡುತೀನಂದ.. ಅದಕ್ಯಾಕೆ ತಾನು ಸಮ್ಮತಿಸಲಿಲ್ಲ..? ಮುಂದ ಹಕ್ಕುದಾರಿಕೆಯನ್ನು ಚಲಾಯಿಸಿದರೇನು ಗತಿ? ಮಗಳನ್ನು ತನ್ನಿಂದ ದೂರ ಮಾಡಿದರೇನು ಗತಿ? ಯಂಬ ಭಯದಿಂದ ತಾನು ನಿರಾಕರಿಸಿದ್ದುಂಟು. ಆತನೋ, ತನೋ, ಯಿನ್ಯಾವಾತನೋ ಯಂಬ ಸಂದೇಹದಿಂದ.. ಯಷ್ಟು ವರುಷಂಗಳ ಕಾಲ ತಾನು ಪರಂಬೋಕು ಜಮೀನಾಗಿದ್ದನು ನಂಬ ಅವಮಾನದಿಂದ.. ತಾನು ಸಮ್ಮತಿಸಲಿಲ್ಲ.. ಸಾಮಾಜಿಕವಾಗಿ ಆತನು ತಂದೆ ಸ್ಥಾನದಲ್ಲಿ ನಿಂತು ಮಗಳ ಕರಿಕೆ ದೇಕರಿಕೆ ನೋಡಿಕೊಳ್ಳುವುದಾಗಿ ಮನವರಿಕೆ ಮಾಡಿಕೊಟ್ಟಿದ್ದಲ್ಲಿ ತಾನು ಬಾಯಿಯಿಂದ ವುದುರಲಿಲ್ಲವಲ್ಲಾ... ಮುಂದೊಂದಿವಸ ಬಂದು ಕೇಳಿದರ ತಾನೇನು ಮಾಡುವುದು? ಪಿತ್ತು ಅನಿಶ್ಚಿತ.. ತನಗೂ ಆತಗೂ ವಾಗ್ವಾದ ನಡೆಯದೆ ಯಿರಲಿಲ್ಲ... ತನ್ನ ರುದಯ ಕರಗದೆ ಪೆಡಸು ಆಗುತ ಹೋಯಿತು.. ಬಸುರು ಹೊತ್ತು ವನವಾಸ ಪಡುತ್ತಿದ್ದಾಗ ಯಲ್ಲಿದ್ದನೀತ..? ಹಡವಣಿಗೆ ಮಾಡಿಕೊಳ್ಳುತ್ತಿದ್ದಾಗ ಯಲ್ಲಿದ್ದನೀತ.? ಮಗಳು ಜೆನಿಸಿದಾಗ ಯಲ್ಲಿದ್ದನೀತ? ಕೂಸನ್ನು ವುಡಿಯೊಳಗ ಕಟ್ಟಿಕೊಂಡು ತಾನಲೆದಾಡುತಲಿದ್ದಾಗ ಯಲ್ಲಿದ್ದನೀತ? ಯಿದ್ದಕ್ಕಿದ್ದಂತೆ ಹದಿನೇಳು ಹದಿನೆಂಟು ವರುಷಂಗಳ ನಂತರ ವಂಟೆ ಮ್ಯಾಲ ಬಂದಾಕ್ಷಣ... ಛೇ... ಛೇ.... “ಮಗಳೇ.. ತಾನು ನಿನಗ ಕೇವಲ ತಾಯಿ ಮಾತ್ರ ಅಲ್ಲವ್ಯಾ. ತಂದೆಯೂ ಅವುದು” ಯಂದು ತಾಯಕ್ಕೆ ಸೋಲುಪ ದೂರ ನಿಟಾರನೆ ನಿಂತಳು ನೋಡಿಕೋ ಯಂಬಂತೆ.. ಚಿನ್ನಸಾನಿ ನೋಡಿದಳು, ತಾಯಿಯ ಸರೀರದಿಂದ ತನ್ನ ತಂದೆ ವಡ ಮೂಡಿದ.. ಅದರಾತಗೆ ವಂದು ಚಹರೆ ಮಾತ್ರೆಯಿರಲಿಲ್ಲ.. “ಅವ್ವಾ.. ನನ್ನನ್ನು ಕ್ಷಮಿಸು' ರಂದನಕಂತ ಮುಖವನ್ನು ಮೆಲ್ಲಗೆ