ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ

೩೦೫

ಕಲಾಕ್ರುತಿಯನ್ನು ದೂರಗೊಳಿಸಲು ಮನಸು ಮಾಡಿದಳೆಂಬಲ್ಲಿಗೆ..... ಅದೇ ಸದರಿ ಪಟ್ಟಣದೊಳಗೆ ಚಿನ್ನಾಸಾನಿ ತನ್ನ ತಂದೆ ಯಾರಾಗಿದ್ದಿರಬಹುದು ಯಂಬ ಪ್ರಸೇನ ಮನಸ್ಸಿಗೆ ಹಚಕೊಂಡು ಲಿಬಿಲಿಬಿ ವದ್ದಾಡುತಲಿದ್ದಳು.. ಯೂ ಪ್ರಶ್ನೆ ಅಷ್ಟು ಸುಲಭವಾಗಿ ಬಗೆಹರಿಯುವಂಥಾದ್ದು ಆಗಿರಲಿಲ್ಲ.. ಯೀ ವಂದು ಪ್ರಶ್ನೆಯ ಗರದೊಳಗ ನೂರಾರು ಪ್ರಶ್ನೆಗಳು... ವುತ್ತರಾತೀತ ಪ್ರಶ್ನೆಗಳು.. ಯಾವೊಂದು ಪ್ರಶ್ನೆಗೆ ಜವಾಬು ಯಿಲ್ಲ ಅಂದರ ಯಿಲ್ಲ, ಯಿದೆ ಅಂದರೆ ಯಿರುವುದು... ತಾನಿಂಥದ್ದೊಂದು ಹುಟ್ಟಿಗೆ ಸಂಬಂಧಿಸಿದ ಪ್ರಸ್ತೆಯಿಂದ, ಸಮಸ್ಯೆಯಿಂದ ವಳಗೊಳಗೇ ಸಂಕಟಪಡುತ್ತಿರುವ ಸಂಗತಿ ತಾಯಿಗೆ ಗೊತ್ತುಂಟು.. ಸಾಕು ತಂದೆ ನೀಲಕಂಠಪ್ಪನೇ ತನ್ನ ನಿಜವಾದ ತಂದೆಯಂದು ಸಾದರಪಡಿಸಲು ಯಣೆಯಿಲ್ಲದ ಪ್ರಯತ್ನ ಮಾಡುತ್ತಿರುವಳು.. ತಾನು ಖಂಡಿತ ಆತನನ್ನು ಹೋಲುತ್ತಿಲ್ಲ. ಆತನ ಮಕ್ಕಳೊಂದಿಗೂ ಹೋಲುತ್ತಿಲ್ಲ.. ಹಾಗಾದರೆ ತನ್ನ ತಂದೆ ಯಾರಾಗಿದ್ದಿರಬೌದು? ಚಹರೆಯೇ ಯಿಲ್ಲದ ಮುಖಗಳ ಪಯ್ಕೆ ಯಾವುದಿರಬೌದು ತನ್ನ ತಂದೆಯವರದು? ತನ್ನ ಮ್ಯಾಲ ಪಿತ್ರುತ್ವದ ಹಕ್ಕು ಚಲಾಯಿಸುತ್ತಿರುವವರು ವಬ್ಬರಿಗಿಂತ ಹೆಚ್ಚು ಮಂದಿ ಯಿರುವುದು ಯಾಕ? ಹಿಂಗs ತಲೆಯನ್ನು ಮೊಸರುಗಡಿಗೆ ಮಾಡಿಕೊಂಡು ಚಿನ್ನಾಸಾನಿ ಕಾಟಾಚಾರಕ್ಕೆ ಗ್ರುತ್ಯ ಸಂಗೀತಭ್ಯಾಸ ಮಾಡುತ್ತಿರುವಳು.. ತಾಳ ಲಯ ತಪ್ಪುತ ಗುರುಗಳ ಕಣೋಟದ ನಿಂದನೆಗೆ ವಳಗಾಗುತ್ತಿರುವಳು.. ಆಗೊಮ್ಮೆ ಹೀಗೊಮ್ಮೆ ಯೋಚನೆಗಳಿಗೆ ತೊಡರುತ್ತಿರುವ ಜೆನ್ನಿಫರಳ ನೆನಪು.. ವಬ್ಬರಿಗಿಂತ ಹೆಚ್ಚು ತಂದೆಗಳಿರುವುದು ಅದ್ರುಸ್ವವಲ್ಲವೇನು? ಯಷ್ಟು ಸಲೀಸಲಾಗಿ ಅಂದುಬಿಟ್ಟಳಲ್ಲ ಆಕೆ.. ಆಕೆಯ ಯದೆಯ ಮ್ಯಾಲ ತಲೆಯಿಟ್ಟು ಮತ್ತೊಮ್ಮೆ ಆಳಬೇಕೆಂದೆನ್ನಿಸುತ್ತಾ ಅದೆ. ತನ್ನ ಕಣ್ಣೀರನ ತಡಕೊಳ್ಳುವ ಶಕ್ತಿ ಆಕೆಯ ವಕ್ಷಸ್ಥಳಕ್ಕೆ ಮಾತ್ರಯಿರುವುದು, ಅಥವಾ ತಾನೇ ತನ್ನ ಗದೆಯ ಮ್ಯಾಲ ತಲೆಯಿಟ್ಟು ಗೊಳೋ ಯಂದು ಅತ್ತರೆ ಯಿನ್ನೂ ಚೆನ್ನ.. ಆದರೆ...... ತನ್ನ ಮಗಳ ಬೇಗುದಿ ತಾಯಕ್ಕ ಮೊಹಿಸದಿರಲಿಲ್ಲ.. ತಾನು ಯಾವ ಮಂಪರಿನಲ್ಲಿ ವಂಟೆ ಮ್ಯಾಲ ಬರಲಕ ಹೇಳಿದೆನೋ? ಆ ಮೀರಭೋಜನು ಯಾಕಾದರು ಬಂದನೋ? ಬಂದವನು ಸಾಂಪ್ರತು ನಾಕು ಮಾತಾಡಿ ಹೋದರಾಗುತ್ತಿರಲಿಲ್ಲವೇನು? ತನ್ನ ಮಗಳನ್ನು ತನಗೆ ತೋರಿಸು ಯಂದು 3