ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೦ ಅರಮನೆ ಯಂದು ತಮ್ಮ ತಮ್ಮ ಬಗಲ ಚವುಡಿಕೆಗಳನ್ನು ಮೀಟುತ್ತ ಯದೆ ತುಂಬಿ ಹಾಡತೊಡಗಿದರು.. ಸೊಲ್ಲು ಹೊಳೆಯೋಪಾದಿಯಲ್ಲಿ ಪಟ್ಟಣದ ಹಾದಿ ಬೀದಿಗಳಲ್ಲಿ ಅಷ್ಟೇ ಯಾಕೆ.... ಮಾಬಲಿಯ ಯಿಂಥಪ್ಪ ಲಕ್ಷಣಗಳನ್ನು ತಮ್ಮ ತಮ್ಮ ಕಿವಿಗಳಲ್ಲಿ ತುಂಬಿಕೊಂಡು ಕಿವಿಯಿಂದ ಕಿವಿಗೆ ವರಾವಣೆ ಮಾಡುತ, ಮಾಡಿಸೂತ ಹಿರೀಕ ಮಂದಿಯು ಯಡಗಯ್ಲಿ ದೋತರದ ಚುಂಗನ್ನು, ಬಲಗಯ್ಲಿ ಅನುವಾದ ಕೋಲನ್ನು ಹಿಡಕೊಂಡು ಮಾಲೀನ ಬೆದಕಲಕ ಬಯಲ್ಲೇರಿದರು. ಮೋಣಿಯಿಂದ ಮೋಣಿಗೆ, ಮನೆಯಿಂದ ಮನೆಗೆ, ಧಂಧಕ್ಕಿಯಿಂದ ಧಂಧಕ್ಕಿಗೆ ಅಲದಾಡತೊಡಗಿದರು.. ಯಿನಾಮಿನ ಆಸೆ ತೋರಿಸಿ ಅವರಿವರನ್ನು ಯಿಚಾರಿಸಿದರು.. ಟಾಮು ಟಾಮು ಹಾಕಿಸಿದರು ಹಿರೇಕ ಮಂದಿಗಿಂತ ಅಗದೀ ಕಾನ್ನೋನ್ಮುಖರಾಗಿದ್ದವರೆಂದರ ಅವ್ವನ ಖಾಸಾ ವಕ್ಕಲು ಮಕ್ಕಳಾದ ಥಳಗೇರಿ ಮಂದಿಯು, ಬಿಟ್ಟ ಬಾಣಗಳಂತೆ ವಂದೇ ಸಮಕ ಹುಡುಕಾಡುತ ಸುಳಿದಾಡಿದರು. ಸುಳಿದಾಡುವ ತಿಕ್ಕಲು ಪರಿಣಾಮವಾಗಿ ಅವನಿಗಿವನು, ಯವನಿಗವನು ಅಂಥಪ್ಪ ಮಾಬಲಿಯ ರೂಪದಲ್ಲಿ ಗೋಚರವಾಗತೊಡಗಿದರೆಂಬಲ್ಲಿಗೆ.... ಹೀಗಿರುತ್ತಿರಲಾಗಿ ತೆಗ್ಗಿನಮನಿ ದಿಬ್ಬಯ್ಯನ ಮಗನಾದ ಯಿರಯ್ಯನು ಅವ್ವ ಹೊಳೆಗೆ ಹೊಂದುವ ನಿಮಿತ್ತ ಅಕ್ಕ ತಂಗೇರನ್ನು ಕರೆತರಲೋಸುಗ ತುಪಾಕನಳ್ಳಿ ದಿಕ್ಕಿಗುಂಟ ಬಿದ್ದಿದ್ದ ಕಾಲು ಜಾಡುಗುಂಟ ಹೆಜ್ಜೆ ಹಾಕುತ್ತಿದ್ದವನು... ಹುಲುಲಿ ಹಳ್ಳ ದಾಟುತಲಿದ್ದ ಸಂದರದಲ್ಲಿ ವಯ್ಕ ವಯ್ಯ ಯಂಬ ರಾಗಾಲಾಪನೆ ಕೇಳಿ ಬರಲು ಗಕ್ಕನೆ ನಿಂತು ಕತ್ತು ಹೊರಳಿಸಲು ಗುಡುದಪ್ಪನ ಮಣಕಕ್ಕೆ ಗರದಾನ ಮಾಡುವ ನಿಮಿತ್ತ ಧ್ಯಾನಮಗ್ನವಾಗಿದ್ದ ಮಹಿಷಮೊಂದು ಛಟೀರನೆ ಕಣ್ಣಿಗೆ ಬಿತ್ತು. ಅದರ ನೊಸಲ ಮ್ಯಾಲ ಯಿದ್ದ ಚಂದ್ರಾಮ ಲಕಲಕನೆ ಹೊಳೆದನು.. ವಂದೊಂದಾಗಿ ಲಕ್ಷಣಗಳನ್ನು ನೋಡಿ ಕುಪ್ಪೆ ಹಾಕಿದನು. ಅದೇ ಯಿದು.. ಯಿದೇ ಅದು.. ಯನ್ನು ತನ್ನ ಮತ್ತು ತಮ್ಮ ಪಟ್ಟಣದ ಅದ್ರುಷ್ಟ ಕುಲಾಯಿಸಿತು.. ತಾನು ಯಿನಾಮು ಪಡೆವುದಾದಲ್ಲಿ ಮೋಕ್ಷ ಪ್ರಾಪ್ತಿಯನ್ನೇ ಬೇಡಬೇಕು... ಈ ಪಟ್ಟಣವನ್ನು ಸೇರಿಕೊಂಡೊಡನೆ ಹಿರೀಕರನ್ನು ಕಂಡು ಫಲಾನ ಹಿಂಗಿಂಗೇ ಅಂತ ಹೇಳಿದನು.. ಅದೇ ಗುಂಗಿನಲ್ಲಿದ್ದ ಅವರು ಜಯನ್ನಾಮ