ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೨೪ ಅರಮನೆ ಬಾಯಿ ಮುಕ್ಕಳಿಸಲಿಲ್ಲ.. ರೆಪ್ಪೆಗೆ ರೆಪ್ಪೆ ಅಂಟಿಸಿ ವಂದಃ ವಂದು ಜಾಮು ನಿದುರೆ ಮಾಡಲಿಲ್ಲ... ವಂದ... ವಂದು ಬಾರಿ ಮಮ್ಮ ಲಟಲಟಾಂತ ಮುರೀಲಿಲ್ಲ.. ಸೂರಾss ಸೂರಾ ಯಂಬ ಮಂತರವನ್ನು ಜಪ ಮಾಡದೆ ಯಿರಲಿಲ್ಲ.. ನೋಡಿದವರಿಗೆ ಸುಬ್ರಸಾಗರದಂಗ ಗೋಚರ ಮಾಡುತಲಿದ್ದ ತಾನು ಅಂತರಂಗಿಕವಾಗಿ ಅಂಡಾವರನಾಗಿಬಿಟ್ಟಿದ್ದಳು. ಆಕೆಯು ಮಾಡಿದ ಬಾಣಂತನದ ರುಣದಲ್ಲಿದ್ದಂತವರು ಆಕೆಯನ್ನು ನಿಂತ ನಿಲುವುಕೀಲೆ ತರುಬಿ ವಂದಃ ವಂದು ತುತ್ತುಣ್ಣವ್ವಾ ಯಂದು ಬಗೆಬಗೆಯಿಂದ ಪೀಡಿಸಿ ನಿರಾಶರಾದರು.. ಆಕೆಯಿಂದ ವಂದಲ್ಲಾ ಎಂದು ಯಿಧದ ಸಾಯ ಪಡದಿದ್ದಂಥೋರು ವಂದವಂದು ಬೊಗುಸೆ ನೀರು ಕುಡಿಯವ್ವಾ ಯಂದು ಆಕೆಯನ್ನು ಕುಂತ ಕುಲುವು ಕೀಲೆ ತರುಬಿ ಪೀಡಿಸಿ ನಿರಾಶರಾದರು.. ಆಕೆಯ ಹಡದಪ್ಪನಾದ ಅಂತಾಡೆಪ್ಪನೂ ಮಸ್ತು ಹೇಳದೆ ಯಿರಲಿಲ್ಲ. ಆಕೆಯ ಯದೆಯೊಳಗೆ ದುಕ್ಕ ಯಂಬುದು ಜಲಪಾತ ದೋಪಾದಿಯಲ್ಲಿ ದುಮ್ಮಿಕ್ಕಲಾರಂಭಿಸಿತ್ತು.. ಆಕೆಯ ಅರಣ್ಯರೋಧನದಿಂದಾಗಿ ಭೂತಬಿಲ್ಲೆ ದ್ಯಾಮಯ್ಯನ ವಸ್ತಿಯು ಬರು ಬಲವಂತೆಪ್ಪನ ಬಿಡದಿ ಮನೆಗೆ ವಾವಣೆಗೊಂಡು ಬಿಟ್ಟಿತ್ತು. ಅಳಿದುಳಿದಿದ್ದ ದುಕ್ಕದಲ್ಲಿ ಬೇಯಿನ ಮರದವ್ವ ಯಂಥ ಬಿರುಗಾಳಿಗೂ ವಂದಃ ವಂದು ಯಲೆ ಅಲಗಾಡಿಸದೆ ಆಕೆಯ ದುಕ್ಕದಲ್ಲಿ ಮಿಂದುಪಡಕೊಂಡಿತ್ತು. ಮರದ ಮ್ಯಾಲಿದ್ದ ಬಾನಾಡಿಗಳಾದರೂ ಅಷ್ಟೇಯಾ?.... ದುಕ್ಕ ಮತ್ತು ಕ್ರೋಧಗಳೆಂಬ ನದಿಗಳ ಸಂಗಮರೂಪಿಯಾಗಿ ಆಕೆ ಪಡುವಲ ಕಡೆ ಮುಖ ಮಾಡಿ “ಯಲಾಂಯ್ ಸೂಯ್ಯಾಮನೇ.. ನನ್ನೆದಿ ಸಂಕಟ ನಿನಗ ಅರ ಆಗುವಲ್ಲದೇನು? ಮುಳುಗಾ ಮುಳುಗು ” ಯಂದು ಗದರಿಸಿದೇಟಿಗೆ ನಾಕು ಮಾರು ಯತ್ತರದಲ್ಲಿದ್ದ ದಿನಕರನು ದುಬುಕ್ಕಂತ ಮುಳುಗಿಬಿಡಲು ಕತ್ತಲ ಸಾರಣೆಯಾತು. ಆಗಸದ ತುಂಬ ಯಲ್ಲಂದರಲ್ಲಿ ಚುಕ್ಕಿಗಳು ತಮ್ಮ ತಮ್ಮ ಕಣ್ಣುಗಳನುಜ್ಜಿಕೊಳ್ಳುತ್ತ ಕಾಣಿಸಿಕೊಂಡವು.. ನಾಯಿ ರೂಪದಲ್ಲಿದ್ದ ಸಿವಸರಣೆ ಚನ್ನವ್ವ ಯಲಾಯ್ ತಾರೆ ನಿಹಾರಿಕೆಗಳಿರಾss ಮಾಸತಿಯಾದ ಜಗಲೂರೆವ್ವ ದುಕ್ಕ ಯಂಬ ನೋಂಪಿಯನ್ನು ಆಚರಣೆ ಮಾಡುತಲಿದ್ದಾಳೆ.. ನೀವೆಲ್ಲ....' ಯಂದು ಆಗ್ಗೆ ಮಾಡಿದೊಡನೆ ಅವೆಲ್ಲ ಕಾವಳದ ಕಂಬಳಿಯನ್ನು ಹೊದ್ದು ಮರೆಯಾದವು. ವಂದಾರ ಚುಕ್ಕಿಯಿಲ್ಲುದುದನು ಕಂಡು ಚಂದ್ರಾಮ ಯಲಾಯ್ ಬೆಳ್ಳಿ ಯಲಾಯ್ ಮಂಗಳೀ.. ಯಲಾಯ್ ಬುಧ