ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೨೯ ಬಾರೆವ್ವಾ ಯಂದು ಗೋಗರೆಯದೆ ಯಿರಲಿಲ್ಲ. ಆದರ ಸತಿ ಕಂಕಣ ಮುಂಗಾಲಿಗೆ ಕಟ್ಟಿಕೊಂಡಿದ್ದ ಸಮಯ ವದಗಿದಲ್ಲಿ ಸೂರನೊಡನೆ ಸಹಗಮನ ಮಾಡಲು ಸಜ್ಜುಗೊಂಡಿದ್ದ ಅವು ಸ್ವಾಮಿನಿಷೆ« ಮೆರೆಯದೆಯಿರಲಿಲ್ಲ.. ಕಜ್ಜಿಪುಳ್ಳೆ ಕಂದಮ್ಮಗಳಾಗಿದ್ದಲ್ಲಿ ಹೊಡೆದು ಬಡದು ಯಳಕೊಂಡು ಬರಬವುದಿತ್ತು. ಆದರ ಅವು ಯಿರುವುದು ಸೂರ ಯಂಬ ಯೇಳು ಸುತ್ತಿನ ಕ್ವಾಟೆ ಸುಪದ್ದಿಯಲ್ಲಿ.. ತಮಗುಳಿದಿರುವ ದಾರಿ ಅಂದರ ಸೂರನನ್ನು ಹಿಡಿಸುವುದು.. ಸರೆ! ಅವರೆಲ್ಲ ಬಂದು ಪಟ್ಟಣಸ್ವಾಮಿ, ದಯವಸ್ಥ ಹಿರೀಕರನ್ನು ಕಂಡು ಫಲಾನ ಹಿಂಗಿಂಗೇ ಯಂದು ಅಳಲು ತೋಡಿಕೊಂಡೊಡನ..... ಫಲಾನ ಜಗೇವಳಗಿರುವ ಮಾಬಲಿಯನ್ನು ಹಿಡಿದೆಳತರುವಂತೆ ಆಗ್ಗೆ ಮಾಡಲು ತೊಲೆ ತುಂಡಿನಂಥವರು ಯಾಕಾಗಬಾರದೆಂದು ಹೋದರು.. ಆದರ ಸೂರನ ತೀಕ್ಷದ್ರುಸ್ಟಿಯನ್ನು ಯದುರಿಸಲಾಗದೆ ವಾಪಾಸು ಬಂದು ತಮ್ಮ ಕಯ್ಯಾಗಲ್ಲ ಯಂದರು. ತರುವಾಯ ಹೋದ ಹದಿನಝಿಪ್ಪತ್ತು ಮಂದಿ ಅದರ ಬಾಲದೇಟಿಗೆ ತತ್ತರಿಸಿ ಮರಳಿದರು.. ತರುವಾಯ ಹೋದ ಮುವ್ವತ್ತು ನಲವತ್ತು ಮಂದಿಯನ್ನು ಸೂರನು ಕೋಡಿನಿದ ತಿವಿದು ಮೋಡೋಡುವಂತೆ ಮಾಡಿದನು.. ಹೆಂಗಪ್ಪಾ ಅದನ್ನು ಹಿಡಿಯುವುದೆಂಬ ಯಸನ ತಗುಲಿಕೊಂಡು ದಯವಸ್ಥೆ ಮಂದಿ ಮಾಬಲಿಯನ್ನು ಹಿಡಿದೆಳೆದು ತಂದವರಿಗೆ ಕೂರಿಗೆ ಹೊಲವನ್ನು ಯಿನಾಮು ರೂಪದಲ್ಲಿ ಕೊಡುವುದಾಗಿ ಟಾಮುಟಾಮು ಹಾಕಿಸಿದರು. ಆದರ ಸಿಮ್ಲದೊಂದಿಗೆ ಹೋರಾಡಿದವರಿಗಾಗಲಿಲ್ಲ... ಹುಲಿಯೊಂದಿಗೆ ಹೋರಾಡಿದವರಿಗಾಗಲಿಲ್ಲ. ಕರಡಿಗಳೊಂದಿಗೆ ಕುಸ್ತಿ ಆಡಿ ಗೆದ್ದವರಿಗೂ ಆಗಲಿಲ್ಲ. ಹೋದವರೆಲ್ಲ ತಮ್ಮ ತಮ್ಮ ಮಯ್ಯಗಳನ ಮುಪ್ಪು ಮಾಡಿಕೊಂಡು ಬಂದರು. ಹೆಳವರಾಗಿ ಬಂದರು. ಅದು ಸಾಮಾನ್ಯ ಕೋಣವಲ್ಲ ತಂದೆಗೋಳಾ.. ಅಷ್ಟ ದಿಗ್ಗಜಗಳಿರುವುದು ವಂದೇಯಾ... ಅದೊಂದೆ ಯಿರುವುದು ವಂದೇಯಾ.. ಅದರ ಸರೀರದೊಳಗ ನೂರು ಮಂದಿ ರಾಕ್ಷಸರಿದ್ದಂಗದಾರ.. ತ್ರಿಮೂರಿಗಳಿದ್ದಂಗದಾರ.. ಸಪ್ತ ರುಷಿಗಳದಂಗದಾರ.. ಯಿನಾಮಿನಾಸೆಗೆ ಅದನ್ನು ಹಿಡಿಯಲು ಪ್ರಯತ್ನಿಸಿ ತಾವು ಪಾಪ ಮಾಡಿದೆವಲ್ಲಾ.. ಯಂದು ಕೆಲವರು ಹಲುಬೂತ ಮತಿಭ್ರಮಿತರಾದರೆ.. ಕೆಲವರು ಬೋಧ ಪಡೆಯಲೋಸುಗ ಅವಧೂತರನ್ನು ಹುಡುಕಿಕೊಂಡು ಅಲೆಯಲಾರಂಭಿಸಿದರೆಂಬಲ್ಲಿಗೆ ಸಿವಸಂಕರ ಮಾದೇವss