ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೩೭ ವಬ್ಬರಂತೆ ಸಲಹೆ ನೀಡಿದರು. ಅವರ ಪಯ್ಲಿ ಬಹುಪಾಲು ಮಂದಿ ನಾಯಕರ ಮಳಿಗದಲ್ಲಿದ್ದವರು. ಕೊನೆ ಗಳಿಗೇಲಿ ಯರಡು ಬಗೆದವರು, ವಂದು ಕಾಲದಲ್ಲಿ ತನ್ನ ಅಂಗಾಲನ್ನು ನೆಕ್ಕಲು ತುದಿಗಾಲಲ್ಲಿ ನಿಂತಿದ್ದಂಥವರು.. ಗವುಡ ಅವರತ್ತ ನೋಡಿದ. ಹೂ ಅಂದ, ಛೀ ಅಂದ.... ಮುಂದ ಯೇನಾಯಿತಪ್ಪಾ ಅಂದರ.. ಅದು ಆತು.. ಸತ್ರುವಿನ ಜನಪ್ರಿಯತೆಯನ್ನ ಮೊಹಿಸಿ ಸ್ಕೂವರನು ಗವುಡನಿಗೆ ಕುಂಚೂರು ಸೆರೆಮನೆಯಲ್ಲಿ ವಾಸ್ತವ್ಯ ಕಲ್ಪಿಸಿದ. ಅವನಿಗೆ ಸಂದಿದ್ದ ಯಿನಾಮು ಭೂಮಿಗಳನ್ನು ಸರಕಾರದ ಪರವಾಗಿ ಮುಟ್ಟುಗೋಲು ಹಾಕಿಕೊಂಡ. ಯೀ ಸಂಚಿನ ರೂವಾರಿಯನಿಸಿದ್ದ ಹಂಪರಸಪ್ಪಯ್ಯನನ್ನು ಕರೆಕಳಿಸಿಕೊಂಡು ಕುಂಪಣಿ ಸರಕಾರ ಕಛೇರಿಯ ಪ್ರಧಾನ ಕಾರಖನ ಪದವಿಯನ್ನು ನೀಡಿ ಆದೇಸ ಹೊಂಡಿಸಿದ. ಯಿಮ್ಮಡಿ ಸೋಮಶೇಖರನಾಯಕ ಫವುಜು ಮಾತ್ರಕುಂಪಣಿ ಸರಕಾರದ ಸಿಪಾಯಿಗಳ ಕಯ್ಯಗೆ ದೊರಕದೆ ತಲೆಮರೆಸಿಕೊಂಡಿತು. ಅದು ತೆರೆಮರೆಯಲ್ಲಿ ತನ್ನ ಕಾಠ್ಯ ಚಟುವಟಿಕೆಯನ್ನು ಆರಂಭ ಮಾಡದೆ ಯಿರಲಿಲ್ಲ. ಅದು ಕೂಲಿ ಕಾರಿಕರ ಯೇಷದಲ್ಲಿ ಕುಂಚೂರು ಕಡೇಕ ಪಾದ ಬೆಳೆಸಿತೆಂಬಲ್ಲಿಗೆ.. ಅವರಿಗೆ ಯಲ್ಲಾಪ್ರಕೊರಚರಟ್ಟಿಯ ಮೋಲಾರಮ್ಮನ ಕ್ರುಪೆಯಿತ್ತೆಂಬಲ್ಲಿಗೆ ಸಿವಸಂಕರ ಮಾದೇವss ತಮ್ಮ ಪಟ್ಟಣದ ಸವುಭಾಗ್ಯವು ಯಾಕ ಹೋಗಯೇ? ಮಲ್ಲಿಗೆ ಹೋಗಯ್ಕೆ? ಯಂಬ ತುರಿಕೆಯು ಅತ್ತ ಕೂಡ್ಲಿಗಿ ಪಟ್ಟಣದ ಮಯ್ಯತುಂಬ ಹಬ್ಬಿಬಿಟ್ಟಿತ್ತಷ್ಟೆ, ಯಸನ ಮಾಡುತ ಮಂದಿ ನೀನು ನೋಡಿದ್ಯಾ? ತಾನು ನೋಡಿದ್ಯಾ? ಯಂದು ಅವರಿವರನ್ನು ಯಿಚಾರಿಸಿ ನೋಡಿದರು. ಹಾದಿಗಳಲ್ಲಿದ್ದ ಹೆಜ್ಜೆ ಗುರುತುಗಳನ್ನು ಪರಾಂಬರಿಸಿದರು. ಹಾದಿಗಳ ಹಿಕ್ಕೆಲದಲ್ಲಿದ್ದ ಗಿಡಗಂಟೆಗಳನ್ನು ಕೇಳಿದರು, ಹಾರಾಡುತಲಿದ್ದ ಪಕ್ಷಿಗಳನ್ನು ಅಂಗಲಾಚಿದರು. ಕಲ್ಲು ಗುಂಡುಗಳನ್ನು, ಪಂಚಭೂತಗಳನು ಕೇಳಿ ನೋಡಿದರು. ಆದರೆ ಅವಾವುದರಿಂದಲೂ ಸರಿಯಾದ ಸಮಾಚಾರ ಲಭ್ಯವಾಗಲಿಲ್ಲ. ಯಲ್ಲಂತ ಹುಡುಕುವುದಪ್ಪಾ ತಮ್ಮ ಸಮುದಾಯದ ಸವುಭಾಗ್ಯವನ್ನು? ಫಜೀತಿಗಿಟ್ಟುಕೊಂಡಿತು.. ಸುಬ್ಬಣ್ಣನ ನೇತ್ರುತ್ವದಲ್ಲಿ ಯುವಕರ ತಂಡವೊಂದು ನಿರಸನ ಆರಂಭಿಸಿದರೆ, ಗುಂಡೂರಾಯನ ನೇತ್ರುತ್ವದಲ್ಲಿ ನಡು ವಯಸ್ಕರ ತಂಡವೊಂದು ಪಟ್ಟಣದಾಚೆಯಿದ್ದ ದಿಬ್ಬಗಳನ್ನೇರಿ ಹುಬ್ಬುಗಳ ಮ್ಯಾಲ ತಮ