ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೫೧ - ದಯಾನಿಧಿಯ ಅಸಲು ಹೆಸರು ಕೊಂಡಪಲ್ಲಿ ವಜ್ವರಯ್ಯನು. ಮರಣದಂಡನೆಯ ಯಿಧಿಸುವುದರಲ್ಲಿ ಗೋಲ್ಗೊಂಡದ ಅಲಿ ಕುತುಬ್‌ಷಾನ ಕಲ್ಕಿಯಿಂದ ತರಬೇತು ಪಡಕೊಂಡಿದ್ದನು. ಅಕ್ಕಿ ರಾಜಪಲ್ಲೆಯ ಜಮೀಂದಾರು ಪದುಮನಾಭ ನಾಯುಡು ತಾನು ಕೊಲೆಯಾಗುವ ವಂದರಗಳಿಗೆ ಪೂರೈದಲ್ಲಿ ತನ್ನ ಕೊಲೆಗಡುಕನಾದ ವಜ್ವರಯ್ಯಗೆ ದಯಾನಿಧಿಯಂದು ಪುನರ್ ನಾಮಕರಣ ಮಾಡಿ ಅಸುನೀಗಿದ್ದನು. ಅವನೆದೆಯೊಳಗ ತಿಲಗಾತುರದಷ್ಟಾದರೂ ಕರುಣೆಯಿಲ್ಲ ಯಂಬುದನ್ನು ಪರಿಶೋಧನೆ ಮಾಡಿದ ನಂತರವೇ ಅವುಕಿನ ಹಾರೈರನ ಸಿಫಾರಸ್ಸಿನಿಂದಾಗಿ ಕುಂಪಣಿ ಸರಕಾರವು ಅವನಿಗೆ ಪ್ರಥಮ ದತ್ಸೆಯ ಕೊಲೆಗಡುಕನ ಸ್ಥಾನ ಮಾನ ನೀಡಿ ಯಿಟ್ಟುಕೊಂಡಿತ್ತು. ಬ್ರೆಮಾಸ್ತರ ಸೊರೂಪೀ ತೀಕ್ಷ ನೋಟ ಮಾತ್ರದಿಂದ ಅಪರಾಧಿಯ ಅಡ್ಡ ಪ್ರಾಣ ತೆಗೆಯಬಲ್ಲಂಥವನಾದ ಅವನು ಸದರಿ ಪಟ್ಟಣ ಸೇರಿಕೊಂಡದ್ದು ಯರಡು ದಿನಗಳ ಹಿಂದೆಯೇ... ಯಂದಿನಂತೆ ರೆಡ್ಡಿಯ ಮೂರುವಾಪರ ತಿಳಿದುಕೊಂಡು “ಅಯ್ಯೋ ಯಿಧಿಯೇ, ಅನ್ಯಾಯವನ್ನು ಸರಕಾರವು ತನ್ನಿಂದ ಕೊಲೆ ಮಾಡಿಸುತ್ತಿರುವುದು” ಯಂದುಕೊಂಡ. ಆದರೇನು ಮಾಡುವುದು? ಯಿದು ತನ್ನ ಕಸುಬು. ಬದುಕಿರುವಾಗಲೇ ಪುರಾಣ ಪದವಿಯನ್ನಲಂಕರಿಸಿರುವ ರೆಡ್ಡಿಯನ್ನು ತಾನು ಕೊಲ್ಲಬೇಕಿರುವುದಿಲ್ಲಾ!.. ಸಾವಿರ ಕೊಲೆ ಯಿಂದೊದಗುವ ಪಾಪವು ಕೇವಲ ಯೀ ವಂದು ಕೊಲೆಯಿಂದಲೇ ಲಭ್ಯವಾಗುತ್ತಿರುವುದಲ್ಲಾ.. ತಾನೀ ಕಸುಬಿಗೆ ಯಾಕ ಅಂಟಿಕೊಂಡೆನೋ? ಬಂದೋಬಸ್ತಿನ ನಡುವೆ ಹೋಗುತ್ತಿದ್ದ ತನ್ನನ್ನು ನೋಡಿದವರು ತನ್ನನ್ನು ತುಂಬಿದ ಕೊಡಕ್ಕೆ ಹೋಲಿಕೆ ಮಾಡಿದ್ದುಂಟು.. ಅನ್ವರನಾಮವು ಯಂದುಕೊಂಡದ್ದುಂಟು.. ಕೊಲ್ಲೋದು ಕೊಂದೇ ಕೊಳ್ತಿದ್ದೀಯಾ! ಆದರ ರೆಡ್ಡಿಯ ಮನಸ್ಸಿಗೆ ನೋವನ್ನುಂಟುಮಾಡದಂಗ ಕೊಲ್ಲು ಯಂದು ಕಣ್ಣಂಚಲ್ಲೇ ಬೇಡಿಕೊಳ್ಳುತ್ತಿದ್ದುದುಂಟು..... ನಿಲುವಂಗಿ ವುಡುಸಿಕೊಂಡು ಬಂದು ರೆಡ್ಡಿಯನ್ನು ತನ್ನ ಮುಂದ ನಿಲ್ಲಿಸಿದರು. ಮೊಟ್ಟಮೊದಲ ಸಲ ತಲೆಯೆತ್ತಿ ನೋಡಿದ್ದು ಆಗಲೇ.. ಹೆಂಗವನಲ್ಲ ಪುಣ್ಯಾತುಮ? ಯೇವಯ್ಯ ಭೀಮಲಿಂಗೇಶ್ವರ ಸ್ವಾಮಿಯ ವರಪ್ರಸಾದವೇ ಸಖ್ಯ. ಕನ್ನೊಳಗ ರವ್ವಂತಾದರೂ ಭಯವಾ!.. ಮುಖದೊಳಗ ರವ್ವಂತಾದರೂ ಅಳುಕss ತುಂಟಿ ನಡುವೆ ನಂದಾದೀವಿಗೆ ಹಚ್ಚಿದ್ದು ಹಚ್ಚಿದಂಗೇ ಯಿರುವುದು,