ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩ರ್೫ ಅಂಥವ ಸಾಲಂಕೃತಗೊಂಡು ಬೀದಿಗೆ ಬಂದನೆಂದರೆ ಸಾಮಾನ್ಯವೇನು? ಅಪಾರ ಸಂಖ್ಲಿ ಜನ ನೆರೆದು ನೋಡುನೋಡುತ್ತಿದ್ದಂತೆ, ನಿನ್ನ ವಾಕ್‌ಸಕ್ತಿಗೆ ಮಾಬಲಿ ಮರುಳಾಗಲಿ ಯಂದು ಸುಭ ಕೋರುತ್ತಿದ್ದಂತ.. ಹೋ ಹೋ.. ಹಾ... ಹಾ... ಯಂದು ವುದ್ದಾರ ತೆಗೆಯುತ್ತಿದ್ದಂತೆ.. ಆತನು ಧೀರೋದಾತ್ತ ಹೆಜ್ಜೆ ಹಾಕುತಃs ಹಾಕುತss.. ನಡಕೋತ ನಡಕೋತ.... “ಅಗೋ! ಅದೇ ಮಹಿಷ, ಮಹಿಷಿಣಿಯರ ಆಡುಂಬೊಲಕ್ಕೆ ಹೇಳಿ ಮಾಡಿಸಿದಂತಿರುವ ಯೇಕಾಸೂರಿಯ ಗುಡ್ಡವು. ಮಹಿಷಿಕಾ ಸ್ತ್ರೀ ಸಮೂಹದ ನಡುವೆ ಮೀರಬಾಹುಕನೋ ಯಂಬಂತೆ ಯಿರಾಜಮಾನನಾಗಿರುವ ಸೂರ ಮಾಶಂತನು. ಯೇನೋ? ರತ್ತೋ? ಅಂತ ಆತಂಕಗೊಂಡ ತನ್ನ ಲಲನಾಮಣಿಯರಿಗೆ ಧಯಲ್ಯದಿಂದಿರಿ ಯಂದು ಹೇಳಿದನು..... ಕೆಕ್ಕರಿಸಿ ನೋಡುತ್ತಿರೋ ಅದರ ಕಡೀಕೆ ಬೊಟ್ಟು ಮಾಡಿ ತೋರಿಸೂತ ಕಾಡುಗೊಲ್ಲರೀರಯ್ಯನು ಗಾಂಡ್ರಬೊಮ್ಮಯ್ಯನ ಹಿಂದ ಸರಕೊಂಡನು.. ಚಂಡಾಲಯ್ಯನು ಬೊಮ್ಮಯ್ಯನ ಬೆನ್ನ ಹಿಂದಕ ಜರುಗಿಕೊಂಡನು.. ಹಿಂಗss ವಬ್ಬರ ಹಿಂದಕ ವಬ್ಬರು ಸರಕೊಂಡು ರಾಮರಾಜುವನ್ನು ಮುಂದಕ ಬಿಟ್ಟು ನಡಕೋತ ನಡಕೋತ ಅದರ ಸಮೀಪಕ್ಕೆ ಬಂದರು. ಗುಡ್ಡದ ಹಿಂದಣ ಗುಂಡುಕಲ್ಲುಗಳಂಗ.... - ರಾಮರಾಜು ಸೂರನ ಅಪಾದಮಸ್ತಕ ದಿಟ್ಟಿಸಿದನು.. ಯಿದು ಕೋಣಮೋ ಅಥವಾ ಸಪ್ತರುಷಿಗಳ ಸಾಕಾರಮೋ ಯಂದು ಅನುಮಾನ ತಾಳಿದನು.. ಯಷ್ಟು ಧಯರ ತಂದುಕೊಂಡರೂ ನಡುಗು ಹುಟ್ಟದೆ ಯಿರಲಿಲ್ಲ. ಅದಕ ಅಗ್ಗವಾಗುವ ಭಾಷೆ ದೇಸ ಬಾಸಲಂದು ತೆಲುಗು ಲೆಸ್ಸಾಯಿದ್ದಿರಬೌದೇ? ಕಸ್ತೂರಿ ಕಂಪಿನ ಕನ್ನಡ ಯಿದ್ದಿರಬೌದೆ? ದೇವಾನುದೇವತೆಗಳ ಭಾಷೆಯಾದ ಗೀರುವಾಣಿ ಯಿದ್ದಿರಭೌದೇ ಯಂದು ಯೋಚಿಸುತ ಸಡನ್ನಂತ ವಂದು ನಿಲ್ಲಯಕ್ಕೆ ಬಾರದಾದನು.... ಹೊಗಳಲಕಂತ ಬಂದಿರೋನು ಯಾಕ ಸುಮ್ಮಕ ನಿಂತಿರುವನಲ್ಲಾ.. ವಸೀಕರಣ ಮಂತ್ರಹಾಕಲಿರುವವನಂತೆ ದಿಟ್ಟಿಸಿ ನೋಡುತ್ತಿರುವನಲ್ಲಾ... ಜೀವಯ್ಯನ ಮನದೊಳಗ ಯಿರುವುದಾದರೂ ಯೇನು? ಹೊಗಳುವಿರೋ? ಯಿಲ್ಲಾ ಕೋಡಿನಿಂದ ತಿವಿದು ಪರಲೋಕಕ್ಕೆ ಅಟ್ಟಿಬಿಡಲೋ ಯಂಬರದಲ್ಲಿ ತುರುಕಿ ಹಾಕಿ ಮುಂಗಾಲಿನಿಂದ ನೆಲ ಕೆದರಿ