ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೬೬ ಅರಮನೆ ವಾಕ್ಯದಿಂದ ಅರ ಬ್ಯಾರೆ ಆಗೋದಯ್ಕೆ ಕೇಕರ್ಕss.. ಮುಂಡದಿಂದ ರುಂಡ ಬ್ಯಾರೆ ಆಗೋದಯ್ಕೆ ಕೇಕರ್ಕಶs.. ಯಂದು ಮುಂತಾಗಿ ಚವುಡಿಗಳು ತನ್ನೊಳಗ ಹಾಡಿಪಾಡಿ ಕೇಕೆ ಹಾಕುತಲಿದ್ದುದು ತನಗ ಹೆಂಗ ಅಗ್ಗವಾದೀತು..... ಅಗೋ! ಅಲ್ಲಿ! ಆಕೇನೇ ಜಗಲೂರೆವ್ವ! ಹೇಗೋ ಯಿಲ್ಲಿ ಲೀಕೇನೇ ಜಗಲೂರೆವ್ವ ಯಂದನಕಂತ ಮಂದಿ ತನ ಸುತ್ತಮುತ್ತ ಜಮಾವಣೆಗೊಳ್ಳುತಲಿದ್ದುದು ತನಗ ಹೆಂಗ ಅರವಾದೀತು? ಸೂರೆ ಪರಮಾತುಮನು ಮಮ್ಮಲನೆ, ವಾಯುದೇವನು ಮಮ್ಮಲನೆ.. ಕ್ರಿಮಿಕೀಟಗಳು ಮಮ್ಮಲನೆ, ರುತುಮಾನಗಳು ಮಮ್ಮಲನೆ.. ಹಿಂಗ... ಯಾವತ್ತು ತುಣ ಕಾಷ« ಯಿರುವೆ ಯಂಭತ್ನಾಕು ಕೋಟಿ ಜೀವರಾಶಿಗಳು ಮಮ್ಮಲನೆ ಮರುಗುತಲಿದ್ದುದು ತನಗೆ ಹೆಂಗ ಅಗ್ಗವಾದೀತು? ಅಗೋ ಆಟು ದೂರದಲ್ಲಿ ಬಾಯಿ ಮುಕ್ಕಳಿಸಿ ನೀರು ವುಗುಳೋಮೋಟು ದೂರದಲ್ಲಿ.. ವಬ್ಬಾಕಿ.. ಆಕೆ ಯಾರಿದ್ದಾಳಪ್ಪಾ ಅಂದರ ಕಳ್ಳಬುಳ್ಳವ್ವನ ಸೊಸೆ ದೇಯಿರಮ್ಮ, ಜಗಲೂರೆವ್ವ ಮಾಡಿದ್ದ ಅಡವಣಿಗೆಯಿಂದಾಗಿ ಸತ್ತು ಹುಟ್ಟಿದ್ದಂಥವಳು. ತನಗ ನರಕ ಪ್ರಾಪ್ತಿಯಾದರೂ ಚಿಂತೆಯಿಲ್ಲ. ತನ್ನ ಘಟ ಬಿದ್ದುಹೋದರೂ ಚಿಂತೆಯಿಲ್ಲ, ತಾನು ಯಿದ್ದದ್ದು ಯಿದ್ದಂಗ ಹೇಳುವಾಕೆಯೇ ಸಯ್ಯ.. ಯಂದನಕಂತ ಹಿಡಿಯ ಬಂದವರಿಂದ ಕೊಸರಿಕೊಂಡು ಮೋಡೋಡಿ ಬರುತಾಳ ..... ಬ೦ದು ರಮ್ಯಾ ರಂದು ಹೊನ್ನೇನು ಬಾಯಿ ತೆಗೆಯಬೇಕೆಂಬುವಷ್ಟರಲ್ಲಿ.. ನಾಲಗೆ ಸಡನ್ನ ಬಿದ್ದು ಹೋತು ಸಿವನೇ.... ಮಲಗಿದ್ದಲ್ಲಿಂದ ಜಗ್ಗಿಸಿ ನಿಂತೇಟಿಗೆ ಕಾಪಲಿದ್ದ ತೊಣಸಯಾ, ಯರಯ್ಯಾ, ಮುಗುಲಯ್ಯಾ, ಚಿತ್ತಾರಯ್ಯರು ಆಟು ದೂರ ವುರುಳಿಕೋತ ಹೋದರು. ಬಡಗಿಗಳನ್ನೆತ್ತಲಕ ಕಯ್ಯ ಯೇಳಲೊಲ್ಲದು.. ದುರುಗುಟ್ಟಿ ನೋಡಲಕ ತಮ್ಮ ಕಣ್ಣುಗಳು ಸಹಕರಿಸಲೊಲ್ಲವು. ಬಯ್ಯಲಕಂದರ ತಮ ತಮ್ಮ ನಾಲಗೆಗಳು ಸಹಕರಿಸಲೊಲ್ಲವು.. ಯಾಕ ಹಿಂಗ ತಮ್ಮ ತಮ್ಮ ಸರೀರಗಳು ವುಡುಗಲಕ ಹತ್ತಾವ.. ಅವರಿಗೆ ಘಜೀತಿಗಿಟ್ಟುಕೊಂಡು ಬಿಟ್ಟಿತ್ತು. ವಂದರಗಳಿಗೆ ಹಿಂದ ಯಿದ್ದಂಗ ಲೀಗ ಯಿಲ್ಲ ಅವರು.. ಯಿಂಥ ಮಹಿಮಾನ್ವಿತ ಮಹಿಷವನ್ನು ಹೊಡದು ಬಡದು ಪಳಗಿಸಲಂಕತ ಹೇಳ್ಳೆ ಪಡೆದು ಬಂದಿದ್ದೇವಲ್ಲಾ ತಾವು! ತಮ್ಮ ಬುದ್ದಿ ಯೇನು ತಿಂದಿತ್ತು ಆವಾಗ.. ಆ ನಾಕೂ ಮಂದೀನೂ ತಮ್ಮ ನಿಯಾಮಕದ ಮೂಲ ವುದ್ದೇಶವನ್ನು ಬದಿಗಿಟ್ಟು ಅದರ ಯದುರು ಪಿಳಿ