ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೭೬ ಅರಮನೆ ಕೆಲಸಕ್ಕೆ ಕಯ್ಯನ ಹಾಕಿದರಾಯಿತು ಯಂದು ಹೇಳಿ ತಪ್ಪಿಸಿದನು. ಲೂಟಿ ಮಾಡಿದ್ದನ್ನೆಲ್ಲ ತಂದು ಬೀದೇ ಗುಡ್ಡದ ಗವಿಯೊಳಗ ಗುಡ್ಡೆಹಾಕಿಡೋದು, ಕೊನೀಕ ಯಲ್ಲರು ಸರಿಸಮನಾಗಿ ಹಂಚಿಕೊಳ್ಳಬೇಕೆಂದು ನಿರರಿಸಲಾಯಿತು. ಆ ನೂರು ಮಂದೀನು ಹತ್ತು ಮಂದಿಯಂತೆ ಹತ್ತು ಭಾಗಗಳಾಗಿ ಯಿಂಗಡಣೆಗೊಂಡು ಹತ್ತೂ ದಿಕ್ಕಿಗೆ ಚದುರಿದರು. ಮುಂದೆ ಅವರ ದವುರನ್ಯಕ್ಕೆ ರೋಸಿಕೊಂಡುಬಿಟ್ಟಿತು ವಂದೊಂದು ಹಳ್ಳಿಯು... ಹೆಂಗೋ ಪತ್ತೆಮಾಡಿ ಯಿಮ್ಮಡಿ ಸೋಮಶೇಖರ ಫವುಜಿನ ಸದಸ್ಯರನ್ನು ಕಂಡು ದೂರು ಕೊಡಲಾರಂಭಿಸಿದರು. ಸದಸ್ಯರು ಗವುಡನಿಗೆ ಫಲಾನ ಮಾಹಿತಿ ನೀಡದೆಯಿರಲಿಲ್ಲ.. ಕುದ್ದನಾಗಿ ಗವುಡನು ಪುಳೆ ಕಡೆಯವರನ್ನು ಕಂಡಲ್ಲಿ ಕಗ್ಗೂಲೆ ಮಾಡಬೇಕೆಂದು ಆಗ್ನೆ ಮಾಡದೆ ಯಿರಲಿಲ್ಲ.. ಬೋಣಿಗೆ ಯಂಬಂತೆ ವಟ್ಟಮ್ಮನಹಳ್ಳಿ, ಅರಸನಾಳು ಗ್ರಾಮಗಳ ಸರಹದ್ದಿನಲ್ಲಿ ಪುಳೆ ಕಡೆಯ ನಾಲ್ಕು ಮಂದಿ ನಿಗೂಢವಾಗಿ ಕಗ್ಗೂಲೆಗೀಡಾದರು.. ಯೋಚನೆ ಮಾಡಿದ ಗವುಡನು "ಯೇನಯ್ಯಾ ಸ್ಫೂವರೂ. ನೀನು ಮಾಡುತ್ತಿರುವುದು ಸರಿ ಅಯ್ತಾ? ಯಂಬ ವಕ್ಕಣೆಯುಳ್ಳ ಜಾಬನ್ನು ಬರೆಯಿಸಿ ನಂಬುಗಸ್ಥನ ಕಮ್ಮೊಳಗ ನೀಡಿದನು. ಆಗ ಆ ನಂಬುಗಸ್ಥನು ಮಾರುಯೇಷದಲ್ಲಿ ಹರಪನಹಳ್ಳಿಯನ್ನು ಸೇರಿಕೊಂಡು ಹಂಪರಸಪ್ಪಯ್ಯನಿದ್ದ ಮನೆಯೊಳಗ ಕಿಟಕಿ ಮೂಲಕ ಯಸೆದನು. ಅಲ್ಲೇ ವೈದವ್ಯ ಪಟ್ಟಂಯೇರಲಕ ಬೇಕಿದ್ದ ಸಾಮಾಗ್ರಿಗಳನ್ನು ಮುಂಜಾಗ್ರತೆ ಸಲುವಾಗಿ ಜೋಡಿಸಿಟ್ಟುಕೊಳ್ಳುತಲಿದ್ದ.. ಯಾವ್ಯಾವ ಕ್ರಮಗಳನ್ನು ಅನುಸರಿಸಬೇಕೆಂಬುದರ ಕುರಿತು ತನ್ನ ಪಾಡಿಗೆ ತಾನು ತಾಲೀಮು ನಡೆಸುತಲಿದ್ದ... ಶ್ರೀಮತಿ ಭುವ್ವಮ್ಮ ಟಪ್ಯಂಬ ಸಬುಧ ಕಿವಿಗೆ ಬಿದ್ದೊಡನೆ ತಿರುಗಿ ನೋಡಲಲ್ಲಿ ಲಕೋಟೆ ಕಾಣಿಸಿತು.. ಅಪಸಗುನಗಳ ಫಲಾನುಭವಿಕೆ ಮಾಡುತ ಲಕೋಟೆಯ ಕಡೆ ಕಯ್ಯ ಚಾಚಿದಳು.. ಬಿಚ್ಚಿದಳು ರಾಮ ನಾಮ ಜಪಿಸುತ್ತ. ಮೋದಲಾರಂಭಿಸಿದಳು ನಾರಾಯಣ ನಾಮ ಜಪಿಸುತ್ತ... “ಯಿಲ್ಲದಿದ್ದಲ್ಲಿ ಕಗ್ಗೂಲೆಗೆ ಸಿದ್ದವಾಗಿರತಕ್ಕದ್ದು.” ಯಂಬೊಂದು ವಾಕ್ಯ ಮೋದಿದೊಡನೆ.. 'ಅಯ್ಯೋss..' ಯಂದು ಚೀರಿದೊಡನೆ.... ಗಾಯಿತ್ರಿಜಪಕ್ಕೆ ಬದಲಾಗಿ ಮುತ್ಯುಂಜಯ ಜಪ ಮಾಡುತಲಿದ್ದ ಹಪರಸಯ್ಯ ಬುವ್ವಾ... ಯಂದೂರಲುತ್ತ ಮೋಡಿ ಬಂದರು.. ವುತ್ತರೀಯದಿಂದ ಪತ್ನಿಯ ಮುಖದ ಬೆವರೊರೆಸುತ್ತ ಜಾಬು ಮೋದಿದರು... ಜಂಘಾಬಲ