ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಹೆಂಗಪ್ಪಾ ತನ್ನ ಸರೀರವನ್ನು ತಾನು ನೋಡಿಕೊಳ್ಳುವುದು? ಅವರ ಕಣ್ಣಲ್ಲಿ ಮಿಣುಕಲೇನು? ಯಿವರ ಕಣ್ಣಲ್ಲಿ ಮಿಣುಕಲೇನು? ಮುಗ ಜಲದೊಳಗೆ ಯಿಣುಕಿ ತನ್ನ ಸರೀರದ ದರುಸನ ಪಡೆಯಲೇನು? ಬಿಸುಲುಗುದುರೆಯ ಪಾರದರುಸಕ ಮಯ್ಯೋಳಗ ಯಿಣುಕಿ ತನ್ನ ಸರೀರದ ದುಸನ ಪಡೆಯಲೇನು? ಕಲ್ಪನಾದ ಮಾಯಾವಿ ಕರಿಗಂಬಳಿ ಮಾಲ ಕುಂತು ಹಾರಾಡಿದನು, ತೂರಾಡಿದನು, ಯಿಲಯಿಲಾಂತ ವದ್ದಾಡಿದನು.. “ಯೇ ನನ್ನ ಕರುಮಂಟ ಸರೀರವನ್ನು ಅರಮನೆ, ಗುರುಮನೆ, ತವರು ಮನೆಯನ್ನಾಗಿ ಮಾಡಿಕೊಂಡು ವಸ್ತಿ ಮಾಡಿರುವಂಥಾ ತಾಯಿ ಸಾಂಬವಿಯೇ.. ನನ್ನ ಸರೀರವು ನಂಗೆ ಕಾಂಬುವಂತೆ ಮಾಡೆವ್ವಾ.. ನನ್ನ ನೆಳ್ಳು ನಂಗೆ ಕಾಂಬುವಂತೆ ಮಾಡವ್ವಾ” ಯಂದು ಮುಂತಾಗಿ ಹಲುಬ್ಯಾಡಿದನು. ತನ್ನ ಸರೀರವೇ ತನಗೆ ಮೋಸ ಮಾಡಿರಬೌದೇ? ತಾನು ಕಂಡುಂಡದ್ದು ದಿವಿನಾದ ಕಣಸಿದ್ದಿರಬೌದೇ? ತಾನು ಕಿವಿಯಾರ ಕೇಳಿಸಿಕೊಂಡಿರೋದು ಅಸರೀರ ವಾಣಿ ಆಡಿದ ಮಾತುಗಳಿದ್ದಿರಬೌದೇ? ಭ್ರಮಾಯಿದ್ದಿರಬೌದೇ? ಯಂದು ತನಗೆ ತಾನೇ ಅನುಮಾನ ತಾಳಿದನಂತೆ.... ಅವನು ಹಂಗ ಅಲ್ಲಿ ಯೋಚಿಸುತ್ತಿರುವಾಗ್ಗೆ.. ವದ್ದಾಡುತ್ತಿರುವಾಗ್ಗೆ. ಬಿಸಿಲು ಬೆಳದಿಂಗಳ ಲಂಗವನ್ನುಟ್ಟುಕೊಂಡಿತ್ತು. ಮಲ್ಲಿಗೆ ಹುಬ್ಬಿನಂಥ ರವುಕೇನ ತೊಟುಕೊಂಡಿತ್ತು.. ಬೆವರಿನ ವಾಣಿಯಾಗಿರುವ ಅವನ ಸರೀರವನ್ನು ತಣಿಸಲಿಕ್ಕೆಂದು, ಕಣ್ಣೀರಿನ ತತ್ರಾಣಿಯಾಗಿರುವ ಅವನ ಕಣ್ಣಿಗೆ ಮುದ ನೀಡಲಕೆಂದು ದೂರದಲ್ಲೆಲ್ಲೋ ಅವುಚಿಟ್ಟುಕೊಂಡಿದ್ದ ಬಿರುಗಾಳಿಯು ತನ್ನ ವುದುರದಿಂದ ವಂದು ಹಿಡಿ ತಂಗಾಳಿಯನ್ನು ಹೊರತೆಗೆದು ಅಗೋ ಅಲ್ಲಿ ಥಳಗೇರಿವಳಗ ಜಗದಂಬೆಯನ್ನು ತನ್ನ ದೇಹದೊಳಗಿಟ್ಟು ಪಾಲನೆ ಪೋಷಣೆ ಮಾಡುತ್ತಿರುವ ಮೋಬಯ್ಯನ ಮಯ್ದೆ ಚಾಮರದ ಸೇವೆ ಮಾಡಿ ಬಾ” ಯಂದು ಆಗ್ರಾಪಿಸಲು ಅದು ಹಂಗs ಮಾಡಿತಂತೆ.... ಆದರೆ ಅದನ್ನೆಲ್ಲ ಗಮನಿಕೆ ಮಾಡಲಕಾಗಲೀ, ಮುದಗೊಳ್ಳಲಕಾಗಲೀ ಅರುವಿಗೆ ನಿಲುಕದ ಅನುಭವದ ನಿಧಿಗೆ ವಡೆಯನಾಗಿದ್ದಂಥ ಮೋಬಯ್ಯಗೆ ಪುರುಸೊತ್ತಂಬುದು ಯಿರಲಿಲ್ಲ. ತನ್ನ ಸರೀರದೊಳಗಾಕೆಂದು ನೆಲೆಗೊಂಡಿರಲಕಬೇಕೆಂದು ಖಾತರಿ ತಾಳಿದನಂತೆ. ಅವನ ಕರುಣೆಯ ಕಡಲಿಗೆ, ತ್ರಿಕಾಲ ಸತ್ಕವುಗಳಿಗೆ ಮನುಕುಲದ ಬೇಕು ಬೇಡಗಳಿಗೆ ವಡೆಯನಾಗಿರುವ ತಾನು ತನ್ನ ಪಯಿತ್ರಸರೀರವನ್ನು ಸಬುಧವಾಸನೆ, ಮುಟ್ಟು ಮಯ್ಲಿಗೆಗಳಿಂದ