ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೭೯ ೦ರಂದೊಡನೆ ಭಕುತಾದಿ ಮಂದಿಯ ಬಾಯಿಯಿಂದ ಸಿವನಾಮ ಪಾರೋತೀSSS.... ಹೂವ್ವನ ರಾಶಿಯೊಳಗ ಹುಟ್ಟಿ ರಕ್ಕಸರ ರಗುತ ಮಾವುಸದೊಳಗ ಬೆಳೆದಂತವಳಾದ ಆದಿಸುತಿಯಿರುವ ವಸ್ತಿಯ ಮಜ್ಜಣ ಅಲ್ಲಿ ಮಾಡಿಸುತಲಿದ್ದರೆ.. ಅದರ ವುದಕವು ಹರಕೋತ ಹಕೋತ ಅದೇ ತಾನೆ ಅಲ್ಲೀ ಮಟ ಬಂದಿತು... ಗಪ್ಪಂತ ಪಾದ ಯತ್ತಿಟ್ಟಿತು.. ಖಡುಗ ಧಾಟಿಯ ಭಕುತಾದಿ ಮಂದಿಯು.. ಮೀರಭದ್ಗುರಗವುಡನ ಹೆಂಡತಿ ಲೋಲಾಚಮ್ಮ ಯಂಬ ಮಧ್ಯವಯಸ್ಕ ಹೆಣುಮಗಳೊರುವಳು “ಮಾಬಲಿ ಮಾಯವಾಗಯ್ತಿ” ಯಂದು ಕೂಗುತ ಆಚೆ ಕಡೇಲಿಂದ ಮೋಡೋಡಿ ಬಂದು ಯೀಚೇ ಕಡೇಕ ಮರೆಯಾದಳು.. ಕೇಳಿದ ಯಲ್ಲಾರು ತಮ್ಮ ತಮ್ಮ ನಾಲಿಗೆ ಯಂಬ ಮುಳ್ಳು ಗದ್ದುಗೆ ಮ್ಯಾಲ ಆ ಸುದ್ದಿಯನ್ನು ಮುಡಕೊಂಡು ಯಾರಿಗೆ ಹೇಳಬೇಕು? ಯಾರಿಗೆ ಹೇಳಬಾರದು ಯಂದಾಲೋಚನೆ ಮಾಡುತ ಯಿರುವೆ ಹಿಂಡು ಧಾಳಿಗೆ ತುತ್ತಾದ ಬೆಲ್ಲದ ಕಣ್ಣೆ ಯಾವ ಪ್ರಕಾರವಾಗಿ ಕರುಗುವುದೋ ಹಂಗೇ ಅ೦ಡಾವರನ ಗೊಂಡರು. ಅಂಡಾವರನ ಗೊ೦ಡವರಲ್ಲ ನಸುಗುನ್ನಿಕಾಯಿಗಳಂಗೆ ಸಿಡಿದು ಮೂಲ ಸುದ್ದಿಯ ವಮುಸಾಭಿರುದ್ದಿಯನು ಮಾಡತೊಡಗಿದರು. ಹೇಳಲಕ ಬಾಯಿಗಳಿಗೆ ಪುರುಸೊತ್ತಿಲ್ಲದಂಗಾತು.. ಕೇಳಲಕ ಕಿವಿಗಳಿಗೆ ಪುರುಸೊತ್ತಿಲ್ಲದಂಗಾತು..... ಈ ಸುದ್ದಿ ತಿಳಿದ ಹಂಪಜ್ಜನು ಹಿರೇಕರೊಡನೆ ಸೂರನೊಡನೆ ತನ್ನ ತವರೂರಾದ ಮಿಂಚೇರಿಗೆ ಹೋಗಿರುವ ಜಗಲೂರೆವ್ವನನು ಹಿಡಿಯೋದು ಸಾಧ್ಯವಲ್ಲದ ಮಾತೆಂದೂ.. ಯಿದಕ್ಕೇನಾದರೊಂದು ಪರಾಯ ಯವಸ್ಥೆ ಮಾಡಬೇಕೆಂದೂ ಸಮಾಲೋಚನೆ ನಡೆಸುತಲಿದ್ದನು..... ಮತ್ತೊಮ್ಮೆ ಅಭ್ಯಂಜಣ ಸಾಣಾ ಮಾಡಿ ಮಡಿವುಡಿ ವುಟ್ಟು ದರುಶನಾಕಾಂಕ್ಷಿಗಳ ಕಣ್ಣಿಗೆ ಹಬ್ಬವನ್ನುಂಟುಮಾಡುತಲಿದ್ದ ಪಯಿತ್ರವಸ್ತಿಯ ಸಮಕ್ಷಮ ಹಿರೀಕರು ತಲಾಕೊಂದೊಂದು ಮಾತಾಡುತ್ತಾ ಮಾತಾಡುತಾ ಯಾದೇ ವಂದು ತೀರಮಾನಕ್ಕೆ ಬರದವರಾಗಿ ಯಜ್ಞಾ ನಿನ ಬಾಯಿಯಿಂದ ವುದರಲಿರುವ ನುಡಿಗೆ ಜೋತು ಬೀಳುತೀವಿ” ಯಂದರು. ಆತನಾಕ್ಷಣ ಯೇನೇನೋ ವಟಗುಟ್ಟಿ ಧಾಂಗ ಮಾಡಿ “ಹಿರೀಕರೇ ಕೇಳಿರಯ್ಯಾ ಕೇಳಿರಿ... ಅಂತಃಕರಣದ ಕಡಲ ವಡತಿಯಾದ ತಾಯಿ ತನಗ ಸೂರನೇ ಆಗ ಬೇಕಿಲ್ಲ