ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೮೫ ಹೊಟ್ಟೆ ಮುಚ್ಚಲಕ ಹೋದರೆ ಕುಂಡಿ ಕಾಣಿಸುತಲಿತ್ತು.. ಕುಂಡಿ ಮುಚ್ಚಲಕ ಹೋದರೆ ಹೊಟ್ಟೆ ಕಾಣಿಸುತಲಿತ್ತು ಸಿವನೇ... ವುಂಬಲಕ ಯಿಲ್ಲಾ.. ತಿಂಬಲಕ ಯಿಲ್ಲಾ... ವುಡುಲಕ ಯಿಲ್ಲಾ ಯಿಂಥ ದುಬಾರಿ ಯಾಳ್ಳದೊಳಗ ತಾಯಿ ಸಾಂಬವಿ ಹೊಳೆಗೆ ಹೊಂಡುತ್ತಿರುವಳಲ್ಲಾ.. ಹೆಡೆ ಮಾಡಲಕ ತಮ ಕನ್ನೊಳಗ ಯೇನೂ ಯಿಲ್ಲದಂಗಾಗಿರುವುದಲ್ಲಾ.. ಯಂದು ಯಸನ ಮಾಡುತ ಆ ಬಡಬಗ್ಗ ಮಂದಿ ಅರಮನೆಗೆ ಹೋಗಿ 'ಅವ್ವಾ ತಾಯಿ.. ಹಬ್ಬ ಮಾಡಲಕ ಯೇನಾರ ಕೊಡಪ್ಪಾ' ಯಂದು ಕೇಳಿದ್ದಕ್ಕೆ ಅರಮನೆಯವರು “ಯಿದು ಹೆಸರಿಗೆ ಮಾತ್ರಅರಮನೆ ಅಯ್ಕೆ.. ಕೊಡಲಕಂದರ ಕಾಳಿಲ್ಲ... ನೀಡಲಕಂದರ ನೀರಿಲ್ಲ” ಯಂದು ಹೇಳಿ ವಾಪಾಸು ಕಳುವುತಾವ ಸಿವನೇ.. ಅರಮನೇನ ವುಪಾಸ ವನುವಾಸ ಅನುಭವಿಸುತ್ತಿರುದೆಂದ ಮ್ಯಾಲ ಯಿನ್ನಾರನ್ನು ಕೇಳೋದು? ತಿರುಪಾಲಯ್ಯಸ್ತೇಷಿ« ದಾನ ದರುಮ ಮಾಡೀ ಮಾಡೀ ಕಯ್ಯಗೆ ದಣುವು ತಂದುಕೊಂಡವನೆ, ಗವುಡ, ರೆಡ್ಡಿ ಮಡ್ಡಿಯೇ ಮೊದಲಾದ ಧವುಳೇರು ಕೊಡಿರಿ ಯಂದರೆ ಯಲ್ಲಿಮಟ ಕೊಟ್ಟಾರು! ಬರಿಗಲ್ಲೊ ವಾಪಾಸಾದಂಥ ಬಡಬಗ್ಗೆ ಮಂದಿಯು ತಾಯಿ ಸಾಂಬವಿ ವಸ್ತಿ ಮಾಡಿದ್ದಂಥ ದಿಕ್ಕಿಗೆ ಅಡ್ಡಬಿದ್ದು “ಯವ್ವಾ ಜಗನುಮಾತೆಯೇ.. ನಿಂಗೆ ನಮ್ಮ ನಿಟ್ಟುಸುರೇ ಹೆಡೆ ಕನವ್ವಾ” ಯಂದು ನಿಷ«ರದಿಂದ ಅರಕೆ ಮಾಡಿಕೊಂಡರು ಸಿವನೇ.... ಯಲ್ಲಿ ನೋಡಿದರಲ್ಲಿ ಮಾಯಿನ ತೋರಣಗಳೇನು? ಸಾರಣೆ ಕಾರಣೆ ಕಂಡಿದ್ದ ನೆಲಗಳೇನು? ಅವರ ಮನೆಯಂಗಳದಿಂದ ಯಿವರ ಮನೆ ಅಂಗಳಕ್ಕೂ, ಯಿವರ ಮನೆಯಂಗಳದಿಂದ ಅವರ ಮನೆಯಂಗಳಕೂ ಪಯಿಪೋಟಿಯಿಂದ ಹೋಗಿ ಬರುತಲಿದ್ದ ರಂಗವಲ್ಲಿ ಚಿತ್ತಾರಗಳೇನು? ರುಮರುಮು ಅನ್ನುತ್ತಲಿದ್ದ ರುಮ್ಮಿಗಳೇನು? ಡೊಳ್ ಡೊಳ್ ಅನ್ನುತಲಿದ್ದ ಡೊಳ್ಳುಗಳೇನು? ಟಗ್ಟಣಕ್ಕು ಣಕ್ಕು ಣಕ್ಕು ಯಂದು ಸಪ್ಪಳ ಮಾಡುತಲಿದ್ದ ಹಲಗೆ ತಮ್ಮಟೆಗಳೇನು? ದಯ್ ದಯ್ ದದ್ದಿಯಂದು ಕುಣುದಾಡುತಲಿದ್ದ ಕೋಲಾಟಗಳೇನು? ಅವ್ವನ ಮಯ್ಯ, ಪವಾಡಗಳನ್ನು ಮೊಣಿಸಿದ್ದ ಹಾಡುಗಳೇನು? ವ್ರುತ್ಯಗಳೇನು? ಜನರನ್ನು ರಂಜಿಸುತಲಿದ್ದ ಬಗೆಬಗೆ ಯಾಸಗಳೇನು? ಹೋಬ್ಬ ಹೋಬ್ಬ ಯಂದು ಪಲ್ಲವಿ ಹಾಡುತಲಿದ್ದ ಬಗೆಬಗೆ ಯಿನ್ಯಾಸದ ಡೇಗುಗಳೇನು? ಸಿವ ಸಿವಾ ಅನುವಂಗಿತ್ತು ಆ ಪಟ್ಟಣದ ವಂದೊಂದು ದ್ರುಸ್ಯವು.. ಸೂಯ್ಯಾಮನಿಗೆ ಆಕಾಸದಾಗ ಯೇನು ಕೆಲಸ ಬೊಗುಸೆಯಿದ್ದೀತು?